
ಬೆಂಗಳೂರು, ಜು.22: ಹೆಚ್ಚು ಟಿವಿ ನೋಡಬೇಡ, ಮೆದುಳು ಹಾಳಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದ ಮಾತುಗಳನ್ನು ನಾವು ಇದುವರೆಗೆ ಕೇವಲ ತಮಾಷೆ ಅಥವಾ ಅತಿಯಾದ ಎಚ್ಚರಿಕೆ ಎಂದು ತಳ್ಳಿಹಾಕುತ್ತಿದ್ದೆವು. ಆದರೆ, ಈ ಹಳೆಯ ಮಾತಿನಲ್ಲಿ ನಿಜವಾದ ಸತ್ಯಾಂಶವಿದೆ ಎಂಬುದನ್ನು ವಿಜ್ಞಾನಿಗಳು ಈಗ ಕಂಡುಕೊಂಡಿದ್ದಾರೆ!
ಮಧ್ಯ ವಯಸ್ಸಿನಲ್ಲಿ ಅತಿಯಾಗಿ ಟಿವಿ ನೋಡುವ ಅಭ್ಯಾಸವು ವಯಸ್ಸಾದಂತೆ ನೆನಪಿನ ಶಕ್ತಿ, ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಕುಗ್ಗಿಸುತ್ತದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ.
ಈ ಬಗ್ಗೆ ಅಧ್ಯಯನ ಹೇಳುವುದೇನು?:
ಈ ವಿಚಾರದ ಬಗ್ಗೆ’ಆಲ್ಝೈಮರ್ಸ್ ಆಂಡ್ ಡಿಮೆನ್ಷಿಯಾ’ಎಂಬ ಜಾಗತಿಕ ನಿಯತಕಾಲಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಂಶೋಧಕರು ಮಧ್ಯವಯಸ್ಸಿನ ಸುಮಾರು 1,700 ವ್ಯಕ್ತಿಗಳ ಟಿವಿ ನೋಡುವ ಅಭ್ಯಾಸಗಳನ್ನು ವಿಶ್ಲೇಷಿಸಿ, 20 ವರ್ಷಗಳ ನಂತರ ಅವರ ಮೆದುಳಿನ MRI ಸ್ಕ್ಯಾನ್‌ಗಳನ್ನು ಪರಿಶೀಲಿಸಿದರು.
‘ಅತಿಯಾಗಿ’ ಟಿವಿ ನೋಡುವವರಲ್ಲಿ ಕಂಡುಬಂದ ಆತಂಕಕಾರಿ ಬದಲಾವಣೆಗಳು
ವಿರಳವಾಗಿ ಅಥವಾ ಕಮ್ಮಿ ಟಿವಿ ನೋಡುವವರಿಗೆ ಹೋಲಿಸಿದರೆ, ಅತಿಯಾಗಿ ಟಿವಿ ನೋಡುವ ಅಭ್ಯಾಸ ಹೊಂದಿದ್ದವರಲ್ಲಿ ಈ ಕೆಳಗಿನ ಪ್ರಮುಖ ವ್ಯತ್ಯಾಸಗಳು ಕಂಡುಬಂದಿವೆ.
ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ , ಬರಿ ಕೂತು ಕೆಲಸ ಮಾಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಲ್ಲ. ಉದಾಹರಣೆಗೆ, ಕಚೇರಿಯಲ್ಲಿ ದೀರ್ಘಕಾಲ ಕುಳಿತು ಏಕಾಗ್ರತೆ ಅಥವಾ ಮಾನಸಿಕ ಶ್ರಮದ ಕೆಲಸ ಮಾಡುವವರಲ್ಲಿ ಈ ರೀತಿಯ ಮೆದುಳಿನ ಕುಗ್ಗುವಿಕೆ ಕಂಡುಬಂದಿಲ್ಲ. ಅಂದರೆ, ಕೇವಲ ಒಂದೇ ಕಡೆ ಕೂತಿರುವುದಕ್ಕಿಂತ ‘ನಿಷ್ಕ್ರಿಯ ಸ್ಕ್ರೀನ್ ಟೈಮ್’ ಅಂದರೆ ಯಾವುದೇ ಮಾನಸಿಕ ಕಸರತ್ತಿಲ್ಲದೆ ಸುಮ್ಮನೆ ಟಿವಿ ನೋಡುವುದು ಮೆದುಳಿಗೆ ಹೆಚ್ಚು ಹಾನಿಕರ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಓದುವುದು, ಹೊಸ ವಿಷಯಗಳನ್ನು ಕಲಿಯುವುದು ಅಥವಾ ಸಂಭಾಷಣೆ ನಡೆಸುವುದು ಮೆದುಳಿನ ಹಲವು ಜಾಲಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ, ಟಿವಿ ವೀಕ್ಷಣೆಗೆ ಮೆದುಳಿನ ಯಾವುದೇ ಸಕ್ರಿಯ ಶ್ರಮದ ಅಗತ್ಯವಿರುವುದಿಲ್ಲ.
ಖಂಡಿತ ಇಲ್ಲ.. ಟಿವಿ ನೋಡುವುದೇ ನೇರವಾಗಿ ಡಿಮೆನ್ಷಿಯಾಗೆ ಕಾರಣ ಎಂದು ಈ ಅಧ್ಯಯನ ಸಂಪೂರ್ಣವಾಗಿ ದೃಢಪಡಿಸಿಲ್ಲ. ಬದಲಿಗೆ, ಇದು ಟಿವಿ ವೀಕ್ಷಣೆ ಮತ್ತು ಮೆದುಳಿನ ಗಾತ್ರ ಕುಗ್ಗುವಿಕೆಯ ನಡುವಿನ ಸಂಬಂಧವನ್ನು ತೋರಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ದೈಹಿಕ ಚಟುವಟಿಕೆ, ಉತ್ತಮ ಆಹಾರ ಪದ್ಧತಿ, ರಕ್ತದೊತ್ತಡ, ನಿದ್ರೆ, ಹಾಗೂ ಸಾಮಾಜಿಕ ಒಡನಾಟಗಳು ಸಹ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.
ಇದನ್ನೂ ಓದಿ: ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!
ವಯಸ್ಸಾದ ಮೇಲೆಯೂ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಧ್ಯವಯಸ್ಸಿನ ಅವಧಿ ಅತ್ಯಂತ ನಿರ್ಣಾಯಕ. ಓದುವುದು, ಒಗಟು/ಸುಡೋಕು ಬಿಡಿಸುವುದು, ಹೊಸ ಭಾಷೆ ಅಥವಾ ವಾದ್ಯಗಳನ್ನು ಕಲಿಯುವುದು. ಒಟ್ಟಿನಲ್ಲಿ ಬುದ್ಧಿಗೆ ಕೆಲಸ ಕೊಡಿ. ಸ್ವಲ್ಪ ದೈಹಿಕ ಚಟುವಟಿಕೆಯಿಂದ ಇರಬೇಕು. ಪ್ರತಿದಿನ ಕನಿಷ್ಠ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು. ಜತೆಗೆ ಸಂವಹನವನ್ನು ಮಾಡಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅರ್ಥಪೂರ್ಣವಾಗಿ ಮಾತನಾಡುವುದು.
ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ