Exercise and Sleeping Hours: ದಿನಕ್ಕೆ ಇಂತಿಷ್ಟು ಗಂಟೆ ನಿದ್ದೆ, ವ್ಯಾಯಾಮ ಮಾಡಬೇಕು: ಸಂಶೋಧನೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 03, 2024 | 5:27 PM

ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಆಹಾರವಂತ ವ್ಯಕ್ತಿಯನ್ನು ಕಾಣುವುದೇ ಅಪರೂಪವಾಗಿದೆ. ಎಲ್ಲರೂ ಕೂಡ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯೆಂದು ವೈದ್ಯರನ್ನು ಭೇಟಿಯಾಗುವವರೇ. ಆದರೆ, ದಿನನಿತ್ಯ ನಾಲ್ಕು ಗಂಟೆಗಳ ವ್ಯಾಯಾಮ ಮತ್ತು ಎಂಟು ಗಂಟೆಗಳ ನಿದ್ರೆಯಿಂದ ವ್ಯಕ್ತಿಯು ಆರೋಗ್ಯವಂತರಾಗಿರಲು ಸಾಧ್ಯ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.

Exercise and Sleeping Hours: ದಿನಕ್ಕೆ ಇಂತಿಷ್ಟು ಗಂಟೆ ನಿದ್ದೆ, ವ್ಯಾಯಾಮ ಮಾಡಬೇಕು: ಸಂಶೋಧನೆ
ಸಾಮದರ್ಭಿಕ ಚಿತ್ರ
Follow us on

ಆರೋಗ್ಯವೇ ಭಾಗ್ಯ, ಅರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ. ಆದರೆ ನೀವೇನಾದರೂ ಆರೋಗ್ಯಯುತ ಜೀವನ ನಡೆಸಬೇಕಾದರೆ ದಿನವು ಲಘು, ಮಧ್ಯಮ ಹಾಗೂ ಕಠಿಣವಾಗಿ ಕನಿಷ್ಠ 4 ಗಂಟೆಗಳ ಕಾಲ ವ್ಯಾಯಾಮವನ್ನು ಮಾಡಲೇಬೇಕು. ಲಘುವಾಗಿ ಶ್ರಮವಹಿಸಿ ಆಹಾರ ತಯಾರಿಸುವುದು. ಮಧ್ಯಮ ಶ್ರಮದಲ್ಲಿ ವ್ಯಾಯಾಮ ಮಾಡುವುದು ಹಾಗೂ ಕಠಿಣ ಪರಿಶ್ರಮದಲ್ಲಿ ನಡಿಗೆ ಹಾಗೂ ಜಿಮ್‌ ನಲ್ಲಿ ವರ್ಕ್ ಔಟ್ ಮಾಡುವುದು ಒಳಗೊಂಡಿದೆ ಎಂದು ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಹೇಳಿದೆ.

ಆಸ್ಟ್ರೇಲಿಯಾದ ಸ್ವಿನ್‌ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನಕ್ಕೆ ಸರಿ ಸುಮಾರು 2 ಸಾವಿರ ಜನರನ್ನು ಒಳಪಡಿಸಿದ್ದರು. ದಿನದ 24 ಗಂಟೆಗಳ ದಿನಚರಿಯನ್ನು ವಿಶ್ಲೇಷಿಸಿ, ಕುಳಿತುಕೊಳ್ಳುವುದು, ನಿದ್ರಿಸುವುದು, ನಿಲ್ಲುವುದು ಹಾಗೂ ದೈಹಿಕ ಶ್ರಮ ಹೀಗೆ ಈ ಎಲ್ಲವನ್ನು ಗಮನಿಸಿದ್ದು, ಈ ಎಲ್ಲಾ ಚಟುವಟಿಕೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ತಿಳಿಸಲಾಗಿದೆ. ಒಂದು ದಿನದಲ್ಲಿ 6 ಗಂಟೆಗಳ ಕಾಲ ಕುಳಿತುಕೊಳ್ಳುವುದು, 5 ಗಂಟೆ ನಿಂತಿರುವುದು ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ.

ಅದಲ್ಲದೇ, ಸಕ್ಕರೆ ಕಾಯಿಲೆ ಇಲ್ಲದಿರುವವರಿಗೆ ಹೋಲಿಕೆ ಮಾಡಿದರೆ ಮಧುಮೇಹಿಗಳು ಹೆಚ್ಚು ಸಮಯ ಕುಳಿತುಕೊಳ್ಳುವುದು ಒಳ್ಳೆಯದಲ್ಲ. ದಿನದ ಸ್ವಲ್ಪ ಸಮಯವನ್ನು ದೈಹಿಕ ಚಟುವಟಿಕೆಗಳಿಗೆ ಮೀಸಲಿಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡಬಹುದು. ದೈಹಿಕ ವ್ಯಾಯಾಮ ಸಮಯದಲ್ಲಿ ಏರುಪೇರಾದರೆ ನಿದ್ರೆಗೆ ಹಾನಿಯಾಗುತ್ತದೆ. ದೈಹಿಕವಾಗಿ ಚಟುವಟಿಕೆಯಲ್ಲಿ ನಿರತರಾಗಿದ್ದರೆ ಆರಾಮದಾಯಕವಾಗಿ ನಿದ್ರಿಸಲು ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಹಣ್ಣುಗಳನ್ನು ಸೇವಿಸಿ

ನಿಯಮಿತವಾದ ವ್ಯಾಯಾಮದಿಂದ ಆರೋಗ್ಯವನ್ನು ಉತ್ತಮವಾಗಿರಿಸಲು ಸಾಧ್ಯ. ಆದರೆ ದೈಹಿಕವಾಗಿ ಮೈಯನ್ನು ದಂಡಿಸುವುದು ಸಮತೋಲನದಲ್ಲಿರುವುದು ಒಳ್ಳೆಯದು. ದಿನಕ್ಕೆ 10 ಗಂಟೆ ವ್ಯಾಯಾಮದಲ್ಲಿ ತೊಡಗಿಸಿಕೊಂಡು, ಇನ್ನಿತ್ತರ ಚಟುವಟಿಕೆಗಳಲ್ಲಿ ಸಕ್ರಿಯರಾಗದೆ ಇದ್ದರೆ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಅದಲ್ಲದೇ, ಅತಿಯಾದ ವ್ಯಾಯಾಮದಿಂದ ಆರೋಗ್ಯಕ್ಕೆ ಅಪಾಯವು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ ತಜ್ಞರು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ