ವಯಸ್ಸಾದಂತೆ ಕೀಲು ನೋವಿನ ಸಮಸ್ಯೆ ಬರುವುದು ಸಾಮಾನ್ಯ, ಆದರೆ ಇದು ಚಿಕ್ಕ ವಯಸ್ಸಿನವರಲ್ಲಿಯೂ ಕಂಡುಬರುತ್ತದೆ. ಹೆಚ್ಚಾಗಿ 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ನಮ್ಮ ವಿರುದ್ಧವೇ ಹೋರಾಡುತ್ತದೆ. ಇದರಿಂದ ನಮ್ಮ ಕೀಲು ಹಾಗೂ ಮೂಳೆಗಳಲ್ಲಿ ನೋವು ಕಾಣಿಸುತ್ತವೆ ಅಥವಾ ಗಂಭೀರವಾಗಿ ಹಾನಿಯೂ ಆಗಬಹುದು. ಕೈ ಬೆರಳು ಮತ್ತು ಮೂಳೆಗಳ ಕೀಲುಗಳು ಊದಿ ಕೊಳ್ಳಬಹುದು. ಇದರಿಂದ ದೇಹದ ಅಂಗಾಂಗಗಳ ಆಕಾರ ಬದಲಾಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ರುಮಟಾಯ್ಡ್ ಆರ್ಥ್ರೈಟಿಸ್ ಅಥವಾ ರುಮಟಾಯ್ಡ್ ಸಂಧಿವಾತ ಎಂದು ಕರೆಯುತ್ತಾರೆ. ಇದನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ರೋಗಿಯು ನಡೆಯಲು ಸಹ ಕಷ್ಟ ಪಡಬೇಕಾಗುತ್ತದೆ. ಹಾಗಾದರೆ ಧೂಮಪಾನ ರುಮಟಾಯ್ಡ್ ಸಂಧಿವಾತಕ್ಕೆ ಕಾರಣವಾಗುತ್ತದೆಯೇ? ವೈದ್ಯರು ಏನನ್ನುತ್ತಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ರೋಗದ ಬಗ್ಗೆ ಏಮ್ಸ್ ರುಮಟಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಂಜನ್ ಗುಪ್ತಾ ಅವರು ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಸಂಧಿವಾತವು, ಕೈಗಳು, ಮಣಿಕಟ್ಟು ಮತ್ತು ಮೊಣಕಾಲುಗಳಲ್ಲಿ ನಿರಂತರ ನೋವನ್ನು ಉಂಟು ಮಾಡುತ್ತದೆ. ಈ ರೋಗವನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಅದು ಹೆಚ್ಚಾಗುತ್ತಲೇ ಇರುತ್ತದೆ. ಜೊತೆಗೆ ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರಬಹುದು. ಹೃದಯ, ಚರ್ಮ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯವೂ ಇದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡ್ತೀರಾ? ಈ ಲಾಭಗಳು ಅಧಿಕ
ಅನೇಕ ಸಂದರ್ಭಗಳಲ್ಲಿ ಧೂಮಪಾನವು ರುಮಟಾಯ್ಡ್ ಸಂಧಿವಾತಕ್ಕೆ ಕಾರಣವಾಗಬಹುದು. ಅತಿಯಾಗಿ ಧೂಮಪಾನ ಮಾಡುವವರು ಇತರರಿಗಿಂತ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ, ಆದರೆ ಧೂಮಪಾನ ಮಾಡುವುದು ಈ ರೋಗಕ್ಕೆ ಕಾರಣವಲ್ಲ. ಇದು ಈ ರೋಗದ ಅಪಾಯದ ಅಂಶಗಳಲ್ಲಿ ಒಂದಾಗಿದೆ ಎಂದು ಡಾ. ರಂಜನ್ ಹೇಳುತ್ತಾರೆ.
ನಿರಂತರ ಕೀಲು ನೋವು
ಕೀಲು ಊತ
ಕೀಲುಗಳಲ್ಲಿ ಬಿಗಿತ
ಚರ್ಮದ ಮೇಲೆ ದದ್ದುಗಳು ಕಾಣಿಸುವುದು
ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುವುದು
ಸೇವಿಸಿದ ಆಹಾರ ಜೀರ್ಣವಾಗದೇ ಇರುವುದು
ಕಣ್ಣುಗಳಲ್ಲಿ ಕೆರೆತ ಅಥವಾ ಕಿರಿಕಿರಿ ಕಾಣಿಸುವುದು
ರುಮಟಾಯ್ಡ್ ಸಂಧಿವಾತವನ್ನು ನಿಯಂತ್ರಿಸಲು, ನಿಮ್ಮ ವೈದ್ಯರು ನಿಮಗೆ ಕೆಲವೊಂದು ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಸೂಚಿಸಬಹುದು ಮತ್ತು ಇದಕ್ಕೆ ಸಂಬಂಧಪಟ್ಟಂತೆ ಔಷಧಿಗಳನ್ನು ಕೊಡಬಹುದು. ನಿಮ್ಮ ಮೂಳೆಗಳು ಮತ್ತು ಕೀಲುಗಳಿಗೆ ಅನುಕೂಲವಾಗುವಂತೆ ವ್ಯಾಯಾಮಗಳನ್ನು ಹೇಳಿಕೊಡಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ