Bathing Benefits : ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡ್ತೀರಾ? ಈ ಲಾಭಗಳು ಅಧಿಕ
ಸ್ನಾನ ಎಂದರೆ ಕೆಲವರಿಗೆ ಖುಷಿಯಾದರೆ, ಇನ್ನು ಕೆಲವರಿಗೆ ಯಾರಪ್ಪ ಸ್ನಾನ ಮಾಡುತ್ತಾರೆ ಎಂದು ಗೊಣಗುತ್ತಲೇ ನಿತ್ಯದ ಈ ಕೆಲಸವನ್ನು ಮಾಡಿ ಮುಗಿಸುತ್ತಾರೆ. ಕೆಲವರು ದಿನಕ್ಕೆ ಎರಡರಿಂದ ಮೂರು ಬಾರಿ ಸ್ನಾನ ಮಾಡುವುದುಂಟು. ಆದರೆ ಬೇಸಿಗೆಯಲ್ಲಿ ತಣ್ಣನೆಯ ನೀರಿನಿಂದ ಸ್ನಾನ ಮಾಡುತ್ತಿದ್ದರೆ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಹಿತವಾದ ಅನುಭವವಾಗುತ್ತದೆ. ಬೇಸಿಗೆಯಲ್ಲಿ ಪದೇ ಪದೇ ಸ್ನಾನ ಮಾಡುತ್ತಿದ್ದರೆ, ಇದರಿಂದ ಆರೋಗ್ಯ ಪ್ರಯೋಜನಗಳಿವೆ.
ನಮ್ಮ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕಾದರೆ ದಿನನಿತ್ಯ ಒಂದು ಬಾರಿಯಾದರೂ ತಣ್ಣನೆಯ ನೀರಿಗೆ ಮೈಯೊಡ್ಡಲೇಬೇಕು. ಆದರೆ ಕೆಲವರು ತಣ್ಣೀರಿನಲ್ಲಿ ಸ್ನಾನ ಮಾಡುವುದು ಒಳ್ಳೆಯದೆಂದರೆ, ಇನ್ನು ಕೆಲವರು ಬಿಸಿ ನೀರಿನ ಸ್ನಾನವು ಒಳ್ಳೆಯದು ಎನ್ನುವರಿದ್ದಾರೆ. ಅದೇನೇ ಆದರೂ ಸ್ನಾನ ಮಾಡುವುದರಿಂದ ಆರೋಗ್ಯ ಲಾಭಗಳು ಅಧಿಕ ಎನ್ನುವುದು ಅನೇಕರಿಗೆ ತಿಳಿದಿಲ್ಲ.
ಸ್ನಾನ ಮಾಡುವುದರಿಂದ ಆಗುವ ಆರೋಗ್ಯ ಲಾಭಗಳು
- ಸ್ನಾನ ಮಾಡುವುದರಿಂದ ಶ್ವಾಸಕೋಶದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಅತೀ ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳುವ ಕಾರಣ ಶ್ವಾಸಕೋಶದ ಆರೋಗ್ಯವು ಸುಧಾರಿಸುತ್ತದೆ. ಬೆಚ್ಚಗಿನ ನೀರಿನಲ್ಲಿ ದೇಹವನ್ನು ಸ್ವಚ್ಛಗೊಳಿಸುವುದರಿಂದ ಒತ್ತಡ ಕಡಿಮೆಯಾಗಿ ಮಾನಸಿಕವಾಗಿ ಆರೋಗ್ಯವು ಸುಧಾರಿಸುತ್ತದೆ.
- ನಿತ್ಯವು ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದ ಹೊಳಪು ಹೆಚ್ಚಾಗಲು ಸಹಕಾರಿಯಾಗಿದೆ. ಚರ್ಮವು ಒಣಗಿದ್ದರೆ ದಿನ ನಿತ್ಯ ಸ್ನಾನ ಮಾಡುವುದರಿಂದ ಚರ್ಮವು ತೇವಾಂಶ ಭರಿತವಾಗಿರುತ್ತದೆ.
- ಒತ್ತಡ ಹಾಗೂ ಖಿನ್ನತೆ ಸಮಸ್ಯೆಯಿರುವವರು ಶವರ್ ಗೆ ಮೈಯೊಡ್ದುವುದು ದೇಹಕ್ಕೆ ಹಾಗೂ ಮನಸ್ಸಿಗೂ ರಿಲ್ಯಾಕ್ಸ್ ಅನುಭವವನ್ನು ನೀಡುತ್ತದೆ. ಈ ಸಮಸ್ಯೆಗೆಳೆಲ್ಲವೂ ದೂರವಾಗಿ ಆರೋಗ್ಯವನ್ನು ಉತ್ತಮವಾಗಿರುತ್ತದೆ.
- ಸ್ನಾಯುಗಳಲ್ಲಿ ನೋವಿದ್ದರೆ ಸ್ನಾನವು ಬಲು ಪ್ರಯೋಜನಕಾರಿಯಾಗಿದೆ. ಸ್ನಾಯು ನೋವಿದ್ದರೆ ಎಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಮಾಡಿದರೆ ಸ್ನಾಯುಗಳ ಸೆಳೆತ, ನೋವು ನಿವಾರಣೆಯಾಗುತ್ತದೆ.
- ರಾತ್ರಿ ಮಲಗುವ ಮುಂಚಿತವಾಗಿ ಸ್ನಾನ ಮಾಡಿದರೆ ಕಣ್ಣ ತುಂಬಾ ನಿದ್ದೆ ಬರುತ್ತದೆ. ದೇಹ ಭಾರ ಅನಿಸಿದರೆ ಸ್ನಾನ ಮಾಡುವುದರಿಂದ ದೇಹವು ಹಗುರವಾದಂತಹ ಅನುಭವವಾಗುತ್ತದೆ.
- ದಿನನಿತ್ಯವು ಸ್ನಾನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಸ್ನಾಯುಗಳ ಸೆಳೆತವು ನಿವಾರಿಸಿ ಆರೋಗ್ಯವನ್ನು ಸುಧಾರಿಸುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ