Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋ: ಪ್ರಜ್ವಲ್ ರೇವಣ್ಣನ ನಡೆ, ಮನಸ್ಥಿತಿಗೆ ಲೈಂಗಿಕ-ಮಾನಸಿಕ ತಜ್ಞರೇ ಶಾಕ್

ಅಶ್ಲೀಲ ವಿಡಿಯೋ: ಪ್ರಜ್ವಲ್ ರೇವಣ್ಣನ ನಡೆ, ಮನಸ್ಥಿತಿಗೆ ಲೈಂಗಿಕ-ಮಾನಸಿಕ ತಜ್ಞರೇ ಶಾಕ್

Vinay Kashappanavar
| Updated By: ರಮೇಶ್ ಬಿ. ಜವಳಗೇರಾ

Updated on: May 01, 2024 | 9:15 PM

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್​ಡ್ರೈವ್ ವೈರಲ್ ಆಗಿದ್ದು, ಅದರಲ್ಲಿರುವ ವಿಡಿಯೋಗಳು ಎಲ್ಲರನ್ನು ದಂಗುಬಡಿಸಿವೆ. ವಿಡಿಯೋಗಳನ್ನು ನೋಡಿದ್ರೆ ಪ್ರಜ್ವಲ್ ರೇವಣ್ಣ ಸೈಕೋಪಾತ್ ಮನಸ್ಥಿತಿ ಹೋದಿದ್ರಾ? ಎನ್ನುವ ಪ್ರಶ್ನೆ ಉದ್ಭವಿಸಿವೆ. ಇನ್ನು ಈ ಬಗ್ಗೆ ಲೈಂಗಿಕ ಹಾಗೂ ಮಾನಸಿಕ ತಜ್ಞರು ಪ್ರತಿಕ್ರಿಯಿಸಿದ್ದು, ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಬೆಂಗಳೂರು, (ಮೇ 01): ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಕೆಲ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಈ ಪ್ರಕರಣ ತನಿಖೆಯನ್ನು ಎಸ್ಐಟಿ ಮಾಡುತ್ತಿದೆ. ಹತ್ತಲ್ಲ ನೂರಲ್ಲ ಬರೋಬ್ಬರಿ 2 ಸಾವಿರಕ್ಕೂ ಹೆಚ್ಚು ವಿಡಿಯೋಗಳು ಇವೆ ಎನ್ನಲಾಗಿದೆ. ಅದರಲ್ಲೂ ಪ್ರಜ್ವಲ್ ರೇವಣ್ಣ ತಮ್ಮ ರಾಸಲೀಲೆಯನ್ನು ಸ್ವತಃ ತಾವೇ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಡಿಯೋಗಳಲ್ಲಿ ಸರ್ಕಾರಿ ಅಧಿಕಾರಿಗಳು, ಮಾಡೆಲ್​ಗಳು ಇದ್ದಾರೆ ಎನ್ನಲಾಗಿದೆ. ಅದರಲ್ಲೂ ವಯಸ್ಸಾದ ಮನೆಗೆಲಸದವರನ್ನು ಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಜ್ವಲ್ ಎಷ್ಟು ವಿಕೃತ ಕಾಮಿಯಾಗಿದ್ದಾನೆ ಎಂದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇನ್ನು ಎರಡು ಸಾವಿರಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದಾವೆ ಅಂದ್ರೆ ಜನ ದಂಗಾಗಿ ಹೋಗಿದ್ದಾರೆ. ಈ ವಿಕೃತಿಯಿಂದ ಇದೀಗ ಪ್ರಜ್ವಲ್​ ನಡವಳಿಕೆಗೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇನ್ನು ಪ್ರಜ್ವಲ್ ರೇವಣ್ಣನ ನಡುವಳಿಕೆಯ ಬಗ್ಗೆ ಲೈಂಗಿಕ ಹಾಗೂ ಮಾನಸಿಕ ತಜ್ಞರೇ ಶಾಕ್ ಆಗಿದ್ದಾರೆ.

ಈ ಬಗ್ಗೆ ಲೈಂಗಿಕ ಹಾಗೂ ಮಾನಸಿಕ ತಜ್ಞ ವಿನೋಧ ಭೆಬ್ಬಿ ಪ್ರತಿಕ್ರಿಯಿಸಿದ್ದು, ಮನೋ ವಿಕಾರ ಇದ್ರೆ ಇಂತಹ ವರ್ತನೆ ಸಾಧ್ಯ. ಟಾಕ್ಸಿಕ್ ಪೆಟ್ರಿಯಾರ್ಕ್ ಅಂದ್ರೆ ಪರಂಪರೆಯಾಗಿ ಹೆಣ್ಣು ಕೀಳು ಎಂಬ ಗೀಳು ಬೆಳಸಿಕೊಳ್ಳುವುದು. ಹೆಣ್ಣನ್ನು ಕೀಳಾಗಿ, ಕಾಮ ದೃಷ್ಟಿಯಿಂದ ಕಾಣುವ ಮನಸ್ಥಿತಿಯೇ ಇಂತಹ ವರ್ತನೆಗೆ ಕಾರಣವಾಗಬಹುದು ಎಂದಿದ್ದಾರೆ.

ಹಾಗಾದ್ರೆ ಪ್ರಜ್ವಲ್ ರೇವಣ್ಣನಿಗಿತ್ತಾ ಲೈಂಗಿಕ ವಿಕಾರ ಮನಸ್ಥಿತಿ.. ? ಟಾಕ್ಸಿಕ್ ಗುಣವೇ ಇದಕ್ಕೆಲ್ಲ ಕಾರಣವಾಯ್ತಾ? ಸೈಕೋಪಾತಿಕ ಮನೋಸ್ಥಿತಿ ಹಾಗೂ ಹಿಂಸಾತ್ಮಕ ಮನೋಪ್ರವೃತ್ತಿ ಇದಕ್ಕೆಲ್ಲ ಪ್ರೇರಣೆಯಾಯ್ತಾ? ಅಧಿಕಾರ ಹಣದ ಬಳಕೆಯಿಂದ ಹೆಣ್ಣನ್ನು ಬಳಸಿಕೊಳ್ಳುವುದು ಹೆಣ್ಣನ್ನು ಉಪಯೋಗಿಸಬೇಕು ಅನ್ನೋ ಗೀಳು ರೇವಣ್ಣನಿಗೆ ಇತ್ತಾ? ಇದೇ ಪ್ರವೃತ್ತಿಯೇ ಈ ರೀತಿಯ ವಿಡಿಯೋ ಮಾಡಿಕೊಳ್ಳುವ ಗುಣಕ್ಕೆ ಕಾರಣವಾಯ್ತಾ?