ನಮ್ಮ ದೇಹದ ಪ್ರತಿಯೊಂದು ಅಂಗಕ್ಕೂ ವಿಶೇಷ ಮಹತ್ವವಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರೋಗಗಳು ಕ್ರಮೇಣ ಹರಡುತ್ತವೆ. ಕಣ್ಣುಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಕಣ್ಣು ಕುರುಡಾದರೆ (Blindness) ಎಲ್ಲವೂ ಕಪ್ಪಾಗುತ್ತದೆ. ಕಣ್ಣುಗಳು ಆರೋಗ್ಯವಾಗಿರಲು ವಿಟಮಿನ್ ಎ ಇರುವ ಆಹಾರಗಳನ್ನು ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಈ ವಿಟಮಿನ್ ಕೊರತೆಯಾದರೆ ಕಣ್ಣಿನ ದೃಷ್ಟಿಗೆ ಮೊದಲು ಪರಿಣಾಮ ಬೀರುತ್ತದೆ. ಆದರೆ ಪ್ರತಿನಿತ್ಯ ಎಷ್ಟು ವಿಟಮಿನ್ ಎ (Vitamin A foods) ತೆಗೆದುಕೊಳ್ಳಬೇಕು ಮತ್ತು ಯಾವ ಆಹಾರಗಳಲ್ಲಿ ವಿಟಮಿನ್ ಎ ಹೆಚ್ಚಿರುತ್ತದೆ ಎಂಬ ಹೆಚ್ಚಿನವರಿಗೆ ತಿಳಿದಿಲ್ಲ.
ಇದನ್ನೂ ಓದಿ: Urine Color: ಮೂತ್ರದ ಬಣ್ಣವು ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ಹೇಳುತ್ತೆ
ಸೂರ್ಯನ ಬೆಳಕಿನಿಂದ ವಿಟಮಿನ್ ಡಿ’ನಂತೆ ವಿಟಮಿನ್ ಎ ಲಭ್ಯವಿಲ್ಲ. ವಿಟಮಿನ್ ‘ಎ’ ಪಡೆಯಲು ಪೌಷ್ಟಿಕ ಆಹಾರ ಸೇವಿಸಬೇಕು. ಪ್ರತಿಯೊಬ್ಬರಿಗೂ ಪ್ರತಿದಿನ 700 ರಿಂದ 900 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ಅಗತ್ಯವಿದೆ. ಇದರಿಂದ ಕಣ್ಣಿನ ರೆಟಿನಾ ಆರೋಗ್ಯಕರವಾಗಿರುತ್ತದೆ. ವಿಟಮಿನ್ ಎ ಕೊರತೆಯಿರುವ ಜನರು ರಾತ್ರಿ ಕುರುಡುತನದಿಂದ ಬಳಲುತ್ತಿದ್ದಾರೆ. ಅಂದರೆ ರಾತ್ರಿಯಲ್ಲಿ ಕಣ್ಣುಗಳು ಸ್ಪಷ್ಟವಾಗಿ ಕಾಣುವುದಿಲ್ಲ. ಹಾಗಿದ್ದರೆ ಮಿಟಮಿನ್ ಎ ಸಮೃದ್ಧವಾಗಿರುವ ಹಣ್ಣು, ತರಕಾರಿಗಳು ಯಾವುವು? ಇಲ್ಲಿದೆ ನೋಡಿ:
ಕಿತ್ತಳೆ, ಹಳದಿ ತರಕಾರಿಗಳು, ಎಲ್ಲಾ ರೀತಿಯ ಧಾನ್ಯಗಳು, ಹಸಿರು ತರಕಾರಿಗಳು, ಮೀನಿನ ಎಣ್ಣೆ, ಮೊಟ್ಟೆಗಳು, ಹಾಲು, ಕ್ಯಾರೆಟ್ಗಳು, ಪಪ್ಪಾಯಿ, ಮೊಸರು ಹಾಗೂ ಸೋಯಾಬೀನ್ಸ್ ಮಿಟಮಿನ್ ಎ ಸಮೃದ್ಧವಾಗಿರುವ ಹಣ್ಣು, ತರಕಾರಿಗಳಾಗಿವೆ. ಸಾಧ್ಯವಾದಷ್ಟು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಈ ಹಣ್ಣು ತರಕಾರಿಗಳನ್ನು ಬಳಕೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ