AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆರ್ಪೆಟೋಫೋಬಿಯಾ ಎಂದರೇನು? ಯಾಕೆ ಹಲ್ಲಿ ನೋಡಿ ಭಯವಾಗುತ್ತೆ ಗೊತ್ತಾ?

ಮನೆಯ ಗೋಡೆಯ ಮೇಲೆ ಹಲ್ಲಿ ಕಾಣಿಸಿಕೊಂಡ ತಕ್ಷಣ ಕೆಲವರು ಅದನ್ನು ಲೆಕ್ಕಿಸದೇ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಮತ್ತೊಂದಿಷ್ಟು ಜನ ಹಲ್ಲಿಯನ್ನು ನೋಡಿದ ಕೂಡಲೇ ಹೆದರಿ ಓಡುತ್ತಾರೆ. ಈ ರೀತಿಯಾಗುವುದು ಬಹಳ ಸಾಮಾನ್ಯವಾಗಿರಬಹುದು. ಆದರೆ ಕೆಲವೊಮ್ಮೆ ಇದು ಸಾಮಾನ್ಯ ಭಯವನ್ನು ಮೀರಿದ ಫೋಬಿಯಾ ಕೂಡ ಆಗಿರಬಹುದು. ಹಾಗಾಗಿ ಇದನ್ನು ಫೋಬಿಯಾ ಹೌದೋ ಅಲ್ಲವೋ ಎಂದು ಗುರುತಿಸುವುದು ಬಹಳ ಮುಖ್ಯವಾಗುತ್ತದೆ. ಹೌದಾಗಿದ್ದಲ್ಲಿ ಅದರಿಂದ ಹೊರಬರಲು ಏನು ಮಾಡಬೇಕು ಎಂಬುದನ್ನು ಕೂಡ ತಿಳಿಯಬೇಕಾಗುತ್ತದೆ.

ಹೆರ್ಪೆಟೋಫೋಬಿಯಾ ಎಂದರೇನು? ಯಾಕೆ ಹಲ್ಲಿ ನೋಡಿ ಭಯವಾಗುತ್ತೆ ಗೊತ್ತಾ?
Fear Of LizardsImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 20, 2026 | 8:36 PM

Share

ಮನೆಯಲ್ಲಿ ಗೋಡೆಯ ಮೇಲೆ ಹಲ್ಲಿ (Lizards) ಕಾಣಿಸಿಕೊಂಡ ತಕ್ಷಣ ಕೆಲವರು ಅದನ್ನು ಲೆಕ್ಕಿಸದೇ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಮತ್ತೊಂದಿಷ್ಟು ಜನ ಹಲ್ಲಿಯನ್ನು ನೋಡಿದ ಕೂಡಲೇ ಕಿಲೋ ಮೀ. ದೂರ ಹೋಗುತ್ತಾರೆ. ಆದರೆ ಈ ರೀತಿ ಆಗುವುದಕ್ಕೆ ಕಾರಣವೇನು ಎಂದು ಎಂದಾದರೂ ಯೋಚಿಸಿದ್ದೀರಾ… ಮಾನಸಿಕ ಆರೋಗ್ಯ ತಜ್ಞರ ಪ್ರಕಾರ, ಹಲ್ಲಿಯನ್ನು ನೋಡಿದ ಕೂಡಲೇ ಹೃದಯದ ಬಡಿತ ಹೆಚ್ಚಾಗುವುದು, ಬೆವರುವುದು, ನಡುಕ ಉಂಟಾಗುವುದು ಅಥವಾ ಆ ಸ್ಥಳದಿಂದ ದೂರ ಹೋಗಬೇಕೆನ್ನಿಸುವುದು ಸಾಮಾನ್ಯ ಲಕ್ಷಣ. ಆದರೆ ಇದು ಕೆಲವೊಮ್ಮೆ ಸಾಮಾನ್ಯ ಭಯವನ್ನು ಮೀರಿದ ಫೋಬಿಯಾ ಕೂಡ ಆಗಿರಬಹುದು. ಹಾಗಾದರೆ ಇದನ್ನು ಫೋಬಿಯಾ ಹೌದೋ ಅಲ್ಲವೋ ಎಂದು ಗುರುತಿಸುವುದು ಹೇಗೆ, ಇದರಿಂದ ಹೊರಬರಲು ಸಾಧ್ಯವೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ, ಭಯವು ಕೇವಲ ಹಲ್ಲಿಯಿಂದ ಮಾತ್ರ ಉಂಟಾಗುವುದಿಲ್ಲ. ಅದರ ರೂಪ, ವೇಗವಾಗಿ ಚಲಿಸುವ ಸ್ವಭಾವ ಮತ್ತು ಯಾವಾಗ ಎಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಅನಿಶ್ಚಿತತೆ ಮೆದುಳಿನಲ್ಲಿ ಅಪಾಯದ ಸಂಕೇತಗಳನ್ನು ಸೃಷ್ಟಿಸಬಹುದು. ವಿಶೇಷವಾಗಿ ಬಾಲ್ಯದ ಅನುಭವಗಳು, ಕುಟುಂಬದವರ ವರ್ತನೆ ಮತ್ತು ಸಾಮಾಜಿಕ ಪ್ರಭಾವಗಳು ಈ ಭಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯಲ್ಲಿರುವವರು ಹಲ್ಲಿಯನ್ನು ನೋಡಿ ಅತಿಯಾಗಿ ಹೆದರುವುದನ್ನು ಕಂಡು ಬೆಳೆದ ಮಕ್ಕಳಲ್ಲೂ ಇದೇ ಭಯ ಬೆಳೆಯುವ ಸಾಧ್ಯತೆ ಇದೆ.

ಫೋಬಿಯಾ ಎಂದು ಹೇಗೆ ಗುರುತಿಸಬೇಕು?

ಹಲ್ಲಿಗಳನ್ನು ಇಷ್ಟಪಡದಿರುವುದು ಸಾಮಾನ್ಯ. ಆದರೆ ಆ ಭಯವು ದೈನಂದಿನ ಜೀವನದ ಮೇಲೆ ಪರಿಣಾಮ ಬೀಳಲು ಆರಂಭಿಸಿದರೆ ಅದನ್ನು ಫೋಬಿಯಾ ಎಂದು ಪರಿಗಣಿಸಬಹುದು. ಉದಾಹರಣೆಗೆ, ಹಲ್ಲಿ ಕಾಣಿಸಬಹುದು ಎಂಬ ಕಾರಣಕ್ಕೆ ಕೆಲವು ಕೊಠಡಿಗಳಿಗೆ ಹೋಗುವುದನ್ನು ತಪ್ಪಿಸುವುದು, ಮನೆಯಲ್ಲಿ ಒಬ್ಬರೇ ಇರಲು ಹೆದರಿಕೆ, ಪದೇ ಪದೇ ಗೋಡೆಗಳು ಮತ್ತು ಮೇಲ್ಛಾವಣಿಯ ಕಡೆ ನೋಡುವುದು ಮುಂತಾದ ವರ್ತನೆಗಳು ಕಂಡುಬಂದರೆ ತಜ್ಞರ ಸಲಹೆ ಅಗತ್ಯವಾಗಬಹುದು.

ಚಿಕಿತ್ಸೆ ಸಾಧ್ಯವೇ?

ತಜ್ಞರ ಪ್ರಕಾರ, ಹಲ್ಲಿಗಳ ಭಯಕ್ಕೆ ಪರಿಣಾಮಕಾರಿ ಚಿಕಿತ್ಸೆಗಳಿವೆ. ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ (CBT) ಹಾಗೂ ಗ್ರಾಡ್ಯುಯಲ್ ಎಕ್ಸ್‌ಪೋಸರ್ ಥೆರಪಿ ಮೂಲಕ ಈ ಭಯವನ್ನು ಹಂತಹಂತವಾಗಿ ಕಡಿಮೆ ಮಾಡಬಹುದು. ಸರಿಯಾದ ಮಾರ್ಗದರ್ಶನ, ಸಹನೆ ಮತ್ತು ಚಿಕಿತ್ಸೆಯ ಮೂಲಕ ಹಲವು ವರ್ಷಗಳಿಂದ ಕಾಡುತ್ತಿರುವ ಫೋಬಿಯಾವನ್ನೂ ನಿಯಂತ್ರಿಸಲು ಸಾಧ್ಯ.

ಗಮನಿಸಿ: ಹಲ್ಲಿಗಳ ಭಯವು ನಿಮ್ಮ ದಿನನಿತ್ಯದ ಚಟುವಟಿಕೆಗಳು, ಮನಶಾಂತಿ ಅಥವಾ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ, ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ. ಸಮಯಕ್ಕೆ ಸರಿಯಾದ ನೆರವು ಪಡೆಯುವುದರಿಂದ ಭಯವನ್ನು ಎದುರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ