White Hair: ತಲೆಯಲ್ಲಿ ಬಿಳಿ ಕೂದಲು ಹೆಚ್ಚುತ್ತಿದೆಯೇ? ನಿತ್ಯ ಈ ಆಸನಗಳನ್ನು ಮಾಡಿ

| Updated By: ನಯನಾ ರಾಜೀವ್

Updated on: Jul 08, 2022 | 4:51 PM

ಬಿಳಿ ಕೂದಲಿನಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಪ್ರತಿದಿನ ಈ ವಿಶೇಷ ಯೋಗ ಮಾಡಿ, ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.

White Hair: ತಲೆಯಲ್ಲಿ ಬಿಳಿ ಕೂದಲು ಹೆಚ್ಚುತ್ತಿದೆಯೇ? ನಿತ್ಯ ಈ ಆಸನಗಳನ್ನು ಮಾಡಿ
White Hair
Follow us on

ಬಿಳಿ ಕೂದಲಿನಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಪ್ರತಿದಿನ ಈ ವಿಶೇಷ ಯೋಗ ಮಾಡಿ, ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸುತ್ತದೆ.
ಕೂದಲು ಸೌಂದರ್ಯದ ಪ್ರತೀಕ, ಕೂದಲು ಉದುರುವುದು ಅಥವಾ ಬೆಳ್ಳಗಾಗುವುದನ್ನು ಕೆಲವು ಮಂದಿ ಮನಸ್ಸಿಗೆ ತೆಗೆದುಕೊಂಡು ಖಿನ್ನತೆಗೆ ಒಳಗಾಗುತ್ತಾರೆ.

ಕೂದಲಿಗೆ ಸಂಬಂಧಿಸಿದ ಕೆಲವು ಸಾಮಾನ್ಯ ಸಮಸ್ಯೆಗಳೆಂದರೆ ಕೂದಲು ಉದುರುವುದು, ತಲೆಹೊಟ್ಟು, ಕೂದಲು ತೆಳುವಾಗುವುದು, ಬೋಳು, ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಇತ್ಯಾದಿ.

ನಾವು ಆರೋಗ್ಯಕರ ಕೂದಲುಗಳಿಂದ ತುಂಬಿರುವ ತಲೆಯನ್ನು ಬಯಸಿದರೆ, ಅದು ನಮ್ಮ ಆಹಾರಕ್ರಮ ಮತ್ತು ನಾವು ಎಷ್ಟು ವ್ಯಾಯಾಮ ಮಾಡುತ್ತೇವೆ ಎಂಬುದರ ಮೇಲೆ ಗಮನಹರಿಸಬೇಕು.

ಪ್ರತಿದಿನವೂ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಂತೆ ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ದೇಹವನ್ನು ಹೈಡ್ರೇಟ್​ ಆಗಿರಿಸುವುದು. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡಾಗ ಕೂದಲು ಬೇಗ ಬಿಳಿಯಾಗುವುದನ್ನು ತಪ್ಪಿಸಬಹುದು.

ಕೂದಲಿನ ಸರಿಯಾದ ಪೋಷಣೆ, ಉತ್ತಮ ನಿದ್ರೆ, ಜೀವಸತ್ವಗಳು, ಖನಿಜಗಳ ಅಗತ್ಯವಿರುತ್ತದೆ. ಅಸಮರ್ಪಕ ಆಹಾರ ಪದ್ಧತಿ, ಸಾಕಷ್ಟು ನಿದ್ರೆ ಇಲ್ಲದಿರುವುದು, ಹೆಚ್ಚು ಸಂಸ್ಕರಿಸಿದ ಆಹಾರವನ್ನು ತಿನ್ನುವುದು, ಸೊಪ್ಪು, ತರಕಾರಿಗಳನ್ನು ತಿನ್ನದೇ ಇರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ಯೋಗ ಮುದ್ರಾ, ಬಾಲಯಮ ಮುದ್ರಾ: : ಯೋಗಮುದ್ರೆಯನ್ನು ನಿತ್ಯ 10-15 ನಿಮಿಷಗಳ ಕಾಲ ಮಾಡಿ, 4-5ವಾರಗಳ ಕಾಲ ನಿತ್ಯ ಮಾಡುವುದರಿಂದ ಕೂದಲು ಬೆಳ್ಳಗಾಗುವ ಸಮಸ್ಯೆ ನಿವಾರಣೆಯಾಗಲಿದೆ.

ಹಲಾಸನ: ಹಲಾಸನ ಅಭ್ಯಾಸ ಆರಂಭದ ಅತ್ಯುತ್ತಮ ವಿಧಾನವೆಂದರೆ, ಅರ್ಧ ಹಲಾಸನ ಭಂಗಿಯಿಂದ ಆರಂಭ. ಆದರೆ ನೀವು ನಿಮ್ಮ ಕೈಗಳ ಮೇಲೆ ಯಾವುದೇ ಒತ್ತಡ ಹಾಕಬೇಕಿಲ್ಲ. ನೀವು ನಿಮ್ಮ ಅಂಗೈಗಳನ್ನು ನೆಲಕ್ಕೆ ಊರುವ ವೇಳೆಯೂ ನಿಧಾನಕ್ಕೆ ಉಸಿರುಬಿಡಿ. ಏಕಕಾಲಕ್ಕೆ ನಿಮ್ಮ ಬೆನ್ನು, ಸೊಂಟ ಮತ್ತು ನಿತಂಬವನ್ನು ನೆಲದಿಂದ ಮೇಲಕ್ಕೆತ್ತಿ. ಅದೇ ವೇಳೆ ನಿಧಾನಕ್ಕೆ, ಆದರೆ ಒಂದೇ ನಡೆಯಲ್ಲಿ ನಿಮ್ಮ ಕಾಲುಗಳನ್ನು ಮೊಣಕಾಲುಗಳನ್ನು ಬಗ್ಗಿಸದೆ ನಿಮ್ಮ ತಲೆಯ ಮೇಲಕ್ಕೆ ತನ್ನಿ. ನೇರವಾದ, ಭಾಗದ ನಿಮ್ಮ ಕಾಲುಗಳನ್ನು ತಲೆಯಿಂದ ಆಚೆಗೆ ಕಾಲ್ಬೆರಳುಗಳು ನೆಲಕ್ಕೆ ಮುಟ್ಟುವಂತೆ ಭಾಗಿಸಿ. ಕಾಲ್ಬೆರಳುಗಳು ನಿಮ್ಮ ತಲೆಯಿಂದ ಆಚೆಗೆ ಹತ್ತಿರದ ಬಿಂದುವಿಗೆ ತಾಕುತ್ತಿರಬೇಕು.

ಉಸಿರನ್ನು ಒಳಗೆಳೆದುಕೊಂಡು ಸಹಜವಾಗಿ ಉಸಿರಾಡಿ. ನಿಧಾನಕ್ಕೆ ಕಾಲ್ಬೆಳುಗಳನ್ನು ಒಟ್ಟಿಗೆ ನೆಲದ ಮೇಲೆ ಇನ್ನು ಜಾರಿಸಿ. ಸಾಧ್ಯವಾದಷ್ಟು ಬೆನ್ನನ್ನು ಸುರುಳಿ ಮಾಡಿ. ನಿಮ್ಮ ಗಲ್ಲವನ್ನು ಎದೆಗೆ ಒತ್ತಿ. ಈಗ ನಿಮ್ಮ ಕೈಗಳನ್ನು ಮೇಲಕ್ಕೆತ್ತಿ ಮತ್ತು ಅವುಗಳನ್ನು ನಿಧಾನವಾಗಿ ನಿಮ್ಮ ತಲೆಗಳ ಎರಡೂ ಪಕ್ಕದಲ್ಲಿ ಇರಿಸಿ. ನಿಮ್ಮ ಕೈಬೆಳುಗಳನ್ನು ಪರಸ್ಪರ ಬಂಧಿಸಿ ನಿಮ್ಮ ತಲೆಯು ಅದರಿಂದ ಆವೃತವಾಗುವಂತೆ ಇರಿಸಿ.

ಇಷ್ಟೂ ಹೊತ್ತು ನಿಮ್ಮ ಕಾಲುಗಳು ಜೋಡಿಸಿದಂತೆ ನೆಟ್ಟಗಿರಬೇಕು. ಸಹಜವಾಗಿ ಉಸಿರಾಡುತ್ತಿರಿ. ಆರಂಭದ ಹಂತದಲ್ಲಿ ಕನಿಷ್ಠ ಎರಡು ನಿಮಿಷಗಳ ಕಾಲ ಅಥವಾ ನಿಮಗೆ ಆಹಿತವೆನಿಸುವ ತನಕ ಈ ಭಂಗಿಯಲ್ಲಿರಿ.

ಶೀರ್ಷಾಸನ: ಶೀರ್ಷಾಸನವನ್ನು ಆಸನಗಳ ರಾಜ ಎಂದು ಕರೆಯಲಾಗುತ್ತದೆ. ಸಾಲಂಬ ಶೀರ್ಷಾಸನ, ಬದ್ಧಹಸ್ತ ಶೀರ್ಷಾಸನ, ಮುಕ್ತಹಸ್ತ ಶೀರ್ಷಾಸನ ಮುಂತಾದ ಅನೇಕ ಪ್ರಭೇದಗಳು ಶೀರ್ಷಾಸನದಲ್ಲಿ ಇವೆ.

ಮಾಡುವ ಕ್ರಮ

-ಮೊದಲು ನೆಲದ ಮೇಲೆ ಮೆತ್ತಗಿರುವ ದಪ್ಪನಾದ ಜಮಖಾನವನ್ನು ಹಾಸಿ, ಅದರ ಮೇಲೆ ಮಂಡಿಯೂರಿ ಕುಳಿತುಕೊಳ್ಳಬೇಕು.

-ಅನಂತರ ಕೈಗಳ ಬೆರಳುಗಳನ್ನು ಪರಸ್ಪರ ಜೋಡಿಸಿ, ಮೊಳಕೈಯಿಂದ ಮುಂದಿನ ಎರಡೂ ಕೈಗಳನ್ನು ‘v’ ಕೋನಾಕೃತಿಯಲ್ಲಿ ಜಮಖಾನದ ಮೇಲೆ ಇರಿಸಬೇಕು.
-ಎರಡು ಕೈಗಳ ಮಧ್ಯೆ ಅಂಗೈಗಳ ಸಮೀಪದಲ್ಲಿ ನೆತ್ತಿಯನ್ನು ಇಟ್ಟು ಮಂಡಿಗಳನ್ನು ನೆಲದಿಂದ ಮೇಲಕ್ಕೆ ಎತ್ತಿ, ಕಾಲುಗಳನ್ನು ನೇರ ಮಾಡಬೇಕು.

-ಅನಂತರ ದೇಹದ ಭಾರವನ್ನು ತಲೆ ಮತ್ತು ಮೊಣಕೈಗಳ ಮೇಲೆ ಹಾಕಿ ನಂತರ ಉಸಿರನ್ನು ಹೊರಕ್ಕೆ ದೂಡಬೇಕು.

-ನಿಧಾನವಾಗಿ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತುತ್ತಾ ಪ್ರತಿಯೊಂದು ಹಂತದಲ್ಲೂ ಸಮತೋಲನವನ್ನು ಪಡೆದು, ಕೊನೆಗೆ ಕಾಲುಗಳನ್ನು ಭೂಮಿಗೆ ಲಂಬವಾಗಿರಿಸಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಮೊಳಕೈಗಳು ಮತ್ತು ನೆತಿ ಮೇಲೆ ಇರುತ್ತದೆ ಮತ್ತು ಇಡೀ ಶರೀರವು ಭೂಮಿಗೆ ಲಂಬವಾಗಿರುತ್ತದೆ.

ಶೀರ್ಷಾಸನವನ್ನು 3ರಿಂದ 5 ನಿಮಿಷಗಳವರೆಗೆ ಅಭ್ಯಾಸಮಾಡಿ ಅನಂತರ ಸಾಕಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು. ಪ್ರಾರಂಭದಲ್ಲಿ ಗೋಡೆಯ ಮಗ್ಗುಲಲ್ಲಿ ಸೀರ್ಷಾಸನವನ್ನು ಮಾಡುವುದು ಉತ್ತಮ.