
ಇನ್ನೇನು ಬೇಸಿಗೆ (Summer) ಆರಂಭವಾಗುತ್ತಿದೆ. ಸೂರ್ಯನ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಹವಾಮಾನ ಇಲಾಖೆ ಕೂಡ ಉಷ್ಣ ಗಾಳಿ (Heat Wave) ಬೀಸುವ ಎಚ್ಚರಿಕೆ ನೀಡಿದೆ. ಮಧ್ಯ ಪ್ರದೇಶದ ಪಶ್ಚಿಮ ಭಾಗ, ಗುಜರಾತ್, ರಾಜಸ್ಥಾನದ ಪೂರ್ವ ಭಾಗ ಮತ್ತು ಒಡಿಶಾದಲ್ಲಿ ಸಾಮಾನ್ಯ ಸ್ವರೂಪದ ಶಾಖದ ತರಂಗ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಹೇಳಿದೆ. ವಾತಾವರಣದಲ್ಲಿ ಉಷ್ಣದ ತೀವ್ರತೆ ಹೆಚ್ಚಾಗಿ, ಅದು ಹಲವು ದಿನಗಳ ಕಾಲ ಹಾಗೇ ಇರುವುದನ್ನು ಶಾಖದ ತರಂಗ ಅಥವಾ ಉಷ್ಣ ತರಂಗ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಮೇಲಿನ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ (Dehydration). ಆದ್ದರಿಂದ ಸರಿಯಾದ ಕ್ರಮದಲ್ಲಿ ಆಹಾರ ಸೇವಿಸುವುದು ಮುಖ್ಯವಾಗಿದೆ. ದೇಹಕ್ಕೆ ಅಗತ್ಯವಿರುವಷ್ಟು ನಿರನ್ನು ಪೂರೈಸಬೇಕು. ಇಲ್ಲವಾದರೆ ದೇಹ ಬಳಲಿಕೆ, ಸುಸ್ತು, ತಲೆಸುತ್ತಿವಿಕೆ ವಾಂತಿಯಂತಹ ಸಮಸ್ಯೆಗಳಿಗೆ ತುತ್ತಾಗುತ್ತದೆ. ಹಾಗಾದರೆ ಬೇಸಿಗೆಯಲ್ಲಿ ದೇಹವನ್ನು ಕೂಲ್ ಆಗಿಟ್ಟುಕೊಳ್ಳಲು ಎಂತಹ ಅಹಾರಗಳನ್ನು ಸೇವಿಸಬೇಕು ಎನನ್ಉವ ಮಾಹಿತಿ ಇಲ್ಲಿದೆ ನೋಡಿ
ಹಣ್ಣುಗಳ ಜ್ಯೂಸ್ ಕುಡಿಯಿರಿ:
ಬೇಸಿಗೆಯಲ್ಲಿ ಸೆಖೆ ಹೆಚ್ಚಿರುವುದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆಯಾಗಿರುತ್ತದೆ. ಇದಕ್ಕಾಗಿ ಹಣ್ಣುಗಳ ಜ್ಯೂಸ್ ಕುಡಿಯಿರಿ. ಸೇಬು ಹಣ್ಣು, ದ್ರಾಕ್ಷಿ, ಕಲ್ಲಂಗಡಿ, ಕರ್ಬೂಜ ಹಣ್ಣುಗಳ ಜ್ಯೂಸ್ ಕುಡಿಯಿರಿ. ಇದರಿಂದ ದೇಹಕ್ಕೆ ಬೇಕಾದ ಪ್ರೋಟಿಣ್ ಅಂಶ ಮತ್ತು ಯಥೇಚ್ಛವಾದ ನೀರಿನ ಅಂಶ ದೊರಕುತ್ತದೆ. ಹೀಗಾಗಿ ಆಗಾಗ ಜ್ಯೂಸ್ ಕುಡಿಯಿರಿ.
ಲಘು ಆಹಾರ ಸೇವಿಸಿ:
ಬೇಸಿಗೆಯಲ್ಲಿ ನೀರು ಹೆಚ್ಚು ಕುಡಿಯುವುದರಿಂದ ಆಹಾರ ಸೇವಿಸುವ ಪ್ರಮಾಣ ಕಡಿಮೆ ಇರುತ್ತದೆ. ಆದರೆ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ಸೇವಿಸಿ. ಬೇಸಿಗೆಯಲ್ಲಿ ಕುಂಬಳಕಾಯಿ, ಸೌತೆ, ಸೊಪ್ಪು ಈ ರೀತಿಯ ಆಹಾರ ಸೇವಿಸಿ.
ತಣ್ಣೀರಿನಲ್ಲಿ ಸ್ನಾನ ಮಾಡಿ:
ಬೇಸಿಗೆಯಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದರಿಂದ ದೇಹವನ್ನು ತಂಪಾಗಿ ಇಡಬಹುದು. ಅಲ್ಲದೆ ಮಲಗುವ ಮುಂಚೆ ತಣ್ಣೀರಿನಲ್ಲಿ ಕೈ-ಕಾಲು ಮುಖ ತೊಳೆದು ಮಲಗಿ. ಅಲ್ಲದೆ ಐಸ್‌ಪ್ಯಾಕ್ ಅನ್ನು ಕುತ್ತಿಗೆ ಬಳಿ ಇಟ್ಟು ಮಲಗುವುದರಿಂದ ಸೆಕೆಗೆ ಹಿತವಾಗುವುದು.
ಮಧ್ಯಾಹ್ನದ ಬಿಸಿಲಿನಲ್ಲಿ ಓಡಾಡಬೇಡಿ:
ಹೊರಗಡೆ ಹೋಗುವ ಕೆಲಸವಿದ್ದರೆ ಬೆಳಗ್ಗೆ ಅಥವಾ ಸಂಜೆ ಮಾಡುವುದು ಒಳ್ಳೆಯದು. ಮಧ್ಯಾಹ್ನ ಆದಷ್ಟು ಮನೆಯೊಳಗೆ ಅಥವಾ ತಂಪಾದ ಸ್ಥಳದಲ್ಲಿರಿ. ಇನ್ನು ಹೊರಗಡೆ ಓಡಾಡುವುದಾದರೆ ಕೊಡೆ ಹಿಡಿದು ಓಡಾಡಿರಿ, ಸನ್‌ಸ್ಕ್ರೀನ್ ಲೋಷನ್ ಬಳಸಿ.
ಸಡಿಲ ಬಟ್ಟೆಗಳನ್ನು ಧರಿಸಿ:
ಬೇಸಿಗೆಯಲ್ಲಿ ಧರಿಸುವ ಡ್ರೆಸ್ ಕಡೆ ಕೂಡ ಗಮನ ನೀಡಬೇಕು. ತೆಳುವಾದ ಕಾಟನ್ ಅಥವಾ ಹತ್ತಿಯ ಬಟ್ಟೆಗಳು ಬೇಸಿಗೆ ಕಾಲಕ್ಕೆ ಒಳ್ಳೆಯದು. ಆದಷ್ಟು ಸಡಿಲ ಬಟ್ಟೆಗಳನ್ನು ಧರಿಸಿ. ಇದರಿಂದ ದೇಹಕ್ಕೆ ಗಾಳಿಯೂ ದೊರೆಯುತ್ತದೆ.
ಲೈಟ್ಗಳನ್ನು ಆರಿಸಿ:
ತುಂಬಾ ಲೈಟ್ಸ್ ಆನ್‌ನಲ್ಲಿ ಇದ್ದರೆ ಅದು ಕೂಡ ಸೆಕೆ ಹೆಚ್ಚು ಮಾಡುತ್ತದೆ. ಆದ್ದರಿಂದ ಮಲಗುವ ಮೊದಲು ಲೈಟ್ಸ್ ಆಫ್ ಮಾಡಿ. ಕರೆಂಟ್ ಬೆಳಕು ಹೀಟ್ ಜಾಸ್ತಿ ಮಾಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಲೈಟ್ ಆಫ್ ಮಾಡಿ ಮಲಗಿ.
ಇದನ್ನೂ ಓದಿ:
Holi 2022: ಬಣ್ಣಗಳಿಂದ ಚರ್ಮದ ಅಲರ್ಜಿ ತಪ್ಪಿಸಲು ಈ ಮನೆಮದ್ದುಗಳು ಸಹಕಾರಿ