Cancer Drug: ಬೆಂಗಳೂರು ವೈದ್ಯರು ರೂಪಿಸಿರುವ ಕ್ಯಾನ್ಸರ್ ಔಷಧಕ್ಕೆ ಭಾರತ ಸರ್ಕಾರದ ಅನುಮೋದನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 06, 2022 | 3:04 PM

ನಾವು 2016ರಿಂದಲೂ ಕ್ಯಾನ್ಸರ್ ಔಷಧಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಈಗ ನಮ್ಮ ಸಂಶೋಧನೆ ಅಂತಿಮ ಹಂತಕ್ಕೆ ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

Cancer Drug: ಬೆಂಗಳೂರು ವೈದ್ಯರು ರೂಪಿಸಿರುವ ಕ್ಯಾನ್ಸರ್ ಔಷಧಕ್ಕೆ ಭಾರತ ಸರ್ಕಾರದ ಅನುಮೋದನೆ
ಸಿಮರೂಬಾ (ಎಡಚಿತ್ರ)
Follow us on

ಬೆಂಗಳೂರು: ನಗರದ ವೈದ್ಯರು ರೂಪಿಸಿರುವ ಕ್ಯಾನ್ಸರ್ ನಿರೋಧಕ ಔಷಧಿಗೆ ಭಾರತ ಸರ್ಕಾರವು ಅನುಮೋದನೆ ನೀಡಿದೆ. ಔಷಧಿಯ ಕ್ಲಿನಿಕಲ್ ಟೆಸ್ಟ್ ಯಶಸ್ವಿಯಾದರೆ ನಂತರ ಮಾರುಕಟ್ಟೆಗೆ ಬರಲಿವೆ. ಕರ್ನಾಟಕ ಮೂಲದ ಸಸ್ಯವೊಂದನ್ನು ಆಧರಿಸಿ ಔಷಧಿಯನ್ನು ರೂಪಿಸಲಾಗಿದೆ. ಕ್ಯಾನ್ಸರ್ ನಿರೋಧಕ ಔಷಧಿ ರೂಪಿಸಲು ಡಾ ವಿಶಾಲ್ ರಾವ್ ಸೇರಿದಂತೆ ಮೂವರು ವಿಜ್ಞಾನಗಳ ತಂಡವು ಶ್ರಮಿಸಿದೆ. ಸಿಮರುಬಾ ಎಂಬ ಸಸಿಯಿಂದ ಈ ಔಷಧಿಯನ್ನು ರಾಮನಗರದಲ್ಲಿ ರೂಪಿಸಲಾಗಿದೆ. ರಕ್ತದ ಕ್ಯಾನ್ಸರ್ ಹಾಗೂ ಗಡ್ಡೆ ಮಾದರಿಯ ಕ್ಯಾನ್ಸರ್​ಗೆ ಇದು ಪರಿಣಾಮಕಾರಿ ಔಷಧಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಔಷಧಿಯ 20 ಎಂಎಲ್ ಸಿರಪ್ ಹಾಗೂ ಕ್ರಿಮ್ ಮಾದರಿಯನ್ನು ಸಿದ್ಧಪಡಿಸಲಾಗಿದೆ ಎಂದು ‘ಟಿವಿ9’ಗೆ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.

ನಾವು 2016ರಿಂದಲೂ ಕ್ಯಾನ್ಸರ್ ಔಷಧಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಈಗ ನಮ್ಮ ಸಂಶೋಧನೆ ಅಂತಿಮ ಹಂತಕ್ಕೆ ಬಂದಿದೆ. ಬಡವರಿಗೂ ಸುಲಭವಾಗಿ ಸಿಗುವಂತೆ ಕೈಗೆಟುಕುವ ದರದಲ್ಲಿ ಮಾರುಕಟ್ಟೆಗೆ ತರಬೇಕೆಂಬ ಯೋಚನೆಯಿದೆ ಎಂದು ಹೇಳಿದ್ದಾರೆ.

ಏನಿದು ಸಿಮರೂಬಾ

ಸಿಮರೂಬಾ (ಶಾಸ್ತ್ರೀಯ ಹೆಸರು: ಸಿಮರೂಬಾ ಗ್ಲೌಕಾ) ಗಿಡವನ್ನು ಸಹ ತೆಂಗಿನಮರದ ರೀತಿಯಲ್ಲಿ ಕಲ್ಪವೃಕ್ಷ ಎನ್ನುತ್ತಾರೆ. ಸಿಮರೂಬಾ ಗಿಡದ ಬೀಜಗಳಿಂದ ಎಣ್ಣೆಯನ್ನು ಪಡೆಯಬಹುದು. ಈ ಎಣ್ಣೆಯನ್ನು ಖಾದ್ಯವಾಗಿ ಅಲ್ಲದೆ ಜೈವಿಕ ಇಂಧನವಾಗಿಯೂ ಉಪಯೋಗಿಸಬಹುದು. ಇದರ ಎಲೆಗಳು, ಬೀಜಗಳ ಸಿಪ್ಪೆ, ಟೊಂಗೆ, ಹಿಂಡಿಗಳನ್ನು ಬಳಸಿ ಒಳ್ಳೆಯ ಗುಣಮಟ್ಟದ ಎರೆಗೊಬ್ಬರವನ್ನು ತಯಾರಿಸಬಹುದು. ಮರಮುಟ್ಟನ್ನು ಪೀಠೋಪಕರಣಗಳು, ದಿನನಿತ್ಯದ ವಸ್ತುಗಳು, ಮೂರ್ತಿಗಳು ಮುಂತಾದವುಗಳನ್ನು ತಯಾರಿಸಲು ಬಳಸುತ್ತಾರೆ.

ಕೃಷಿ ಬೆಳೆಗಳ ಜೊತೆ-ಜೊತೆಗೆ ಬದುಗಳ ಮೇಲೆ ಸಿಮರೂಬಾವನ್ನು ಬೆಳಸುವುದು ಒಳ್ಳೆಯದು. ಒಂದು ವೇಳೆ ಸಿಮರೂಬಾವನ್ನೇ ಮುಖ್ಯ ಬೆಳೆಯಾಗಿ ತೆಗೆದುಕೊಂಡರೆ ಅದರ ಸಾಲಗಳ ನಡುವೆ ಅಲಸಂದೆ, ರಾಗಿ, ಮೇವಿನ ಬೆಳೆಗಳನ್ನು ಬೆಳೆಯಬಹುದು. ಮೇವಿನ ಬೆಳೆಗಳನ್ನು ಬೆಳೆದರೆ ಹೈನುಗಾರಿಕೆಯನ್ನು ಕೂಡ ಉಪ ಕಸುಬಾಗಿ ತೆಗೆದುಕೊಳ್ಳಬಹುದು.

ಅದ್ಭುತ ಔಷಧಿ

ಸಿಮರೂಬಾ ಅದ್ಭುತ ಔಷಧಿಯಾಗಿದೆ. ಅದರ ಎಲೆ, ತೊಗಟೆ ಎಲ್ಲವೂ ಔಷಧಮಯ. ಐಲ್ಯಾಂಥಿನೋನ್, ಗ್ಲೌಕಾರುಬಿನೋನ್, ಹೊಲಾಕ್ಯಾಂಥೇನ್ ಮುಂತಾದ ಕ್ವ್ಯಾಸ್ಸಿನೋಯಿಡ್‌ಗಳೆಂಬ ರಾಸಾಯನಿಕಗಳಿಂದ ಸಿಮರೂಬಾಕ್ಕೆ ಔಷಧೀಯ ಗುಣಗಳು ಬಂದಿವೆ. ಭೇದಿಯಂತಹ ಸಾಮಾನ್ಯ ರೋಗದ ಸಮಸ್ಯೆಯಿಂದ ಹಿಡಿದು ಕ್ಯಾನ್ಸರ್‌ವರೆಗೆ ಅನೇಕ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.

ಪಿತ್ತೋದ್ರೇಕ, ಗ್ಯಾಸ್ ಟ್ರಬಲ್, ಕೆಮ್ಮು, ನೆಗಡಿ, ರಕ್ತ ಹೀನತೆ, ಅಸ್ತಮಾ, ಅನ್ನನಾಳದ ಹುಣ್ಣು, ಗಾಯ, ಸರ್ಪಸುತ್ತು, ಎಚ್1 ಎನ್1, ಚಿಕೂನ್‌ಗುನ್ಯಾ, ಹೆಪೆಟೈಟಿಸ್, ಋತುಚಕ್ರ ಸಮಸ್ಯೆಗಳು, ಬಿಳಿ ಸೆರಗು, ಒಂದು ಹಾಗೂ ಎರಡನೆಯ ಹಂತದ ವಿವಿಧ ಬಗೆಯ ಕ್ಯಾನ್ಸರ್‌ಗಳು,.. ಹೀಗೆ ಈ ಸಿಮರೂಬಾ ಗುಣಪಡಿಸಬಹುದಾದ ರೋಗಗಳ ಪಟ್ಟಿ ಬಹಳ ದೊಡ್ಡದು..!

Published On - 3:04 pm, Sun, 6 November 22