ಎಳನೀರು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಎಲೆಕ್ಟ್ರೋಲೈಟ್‌ಗಳಂತಹ ಪೋಷಕಾಂಶಗಳಿಂದ ತುಂಬಿರುತ್ತದೆ. ಅದಕ್ಕೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿದಾಗ ಅದು ದೇಹಕ್ಕೆ ನೈಸರ್ಗಿಕ ಶೀತಕವಾಗುತ್ತದೆ. ಇದು ನಿಮ್ಮ ದೇಹವು ಆಮ್ಲೀಯತೆಯಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಎಳನೀರಿನಲ್ಲಿ ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಹೀಗಾಗಿ, ನಿರ್ಜಲೀಕರಣದಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಪಾನೀಯವಾಗಿದೆ. ಕಡಿಮೆ ಕ್ಯಾಲೋರಿಗಳಿರುವುದರಿಂದ ಎಳನೀರನ್ನು ಮಧುಮೇಹಿಗಳು ಕೂಡ ಸೇವಿಸಬಹುದು.
ಕಾಮಕಸ್ತೂರಿ ಬೀಜಗಳು ನೈಸರ್ಗಿಕ ಶೀತಕವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜಗಳು ದೇಹದಲ್ಲಿನ ಅಧಿಕ ಶಾಖವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಉಪವಾಸದ ಸಮಯದಲ್ಲಿ ಎಳನೀರು ಕುಡಿಯಬಹುದೇ?
ಎಳನೀರಿನೊಂದಿಗೆ ಕಾಮಕಸ್ತೂರಿ ಬೀಜವನ್ನು ಹಾಕಿಕೊಂಡು ಕುಡಿಯುವುದರಿಂದ ಆಮ್ಲೀಯತೆಯನ್ನು ನಿವಾರಿಸಬಹುದು. ಇದು ದೇಹದಲ್ಲಿ HCLನ ಆಮ್ಲೀಯ ಪರಿಣಾಮವನ್ನು ತಟಸ್ಥಗೊಳಿಸುತ್ತದೆ. ಇದು ದೇಹವನ್ನು ನಿರ್ವಿಷೀಕರಣಗೊಳಿಸುತ್ತದೆ. ತೂಕ ಇಳಿಸಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ.
ಕಾಮಕಸ್ತೂರಿ ಬೀಜ ನೈಸರ್ಗಿಕವಾಗಿ ದೇಹವನ್ನು ಕೂಲ್ ಆಗಿಡುತ್ತದೆ. ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ. ಕರುಳಿನ ಚಲನೆಯನ್ನು ಕ್ರಮಬದ್ಧಗೊಳಿಸುತ್ತದೆ. ಇದು ಖನಿಜಗಳ ಶಕ್ತಿ ಕೇಂದ್ರವಾಗಿದೆ. ಹೃದಯ ರೋಗಗಳ ಅಪಾಯವನ್ನು ತಡೆಯುತ್ತದೆ. ಉರಿಯೂತದ ಮತ್ತು ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ. ಹೀಗಾಗಿ, ಎಳನೀರನ್ನು ಹಾಗೇ ಕುಡಿಯುವ ಬದಲು ಕಾಮಕಸ್ತೂರಿ ಬೀಜ, ನಿಮಗೆ ಇಷ್ಟವಿದ್ದರೆ ಸ್ವಲ್ಪ ಲಿಂಬೆ ರಸವನ್ನು ಹಾಕಿಕೊಂಡು ಜ್ಯೂಸ್ನಂತೆ ಮಾಡಿಕೊಂಡು ಸೇವಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ