
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಗಾಂಧಾರಿ ಮೆಣಸಿನ ವಿಷಯದಲ್ಲಿ ನೂರಕ್ಕೆ ನೂರರಷ್ಟು ನಿಜವೆನಿಸುತ್ತದೆ. ಹೌದು ನೋಡುವುದಕ್ಕೆ ಸಣ್ಣಗೆ ಕಂಡರೂ ಕೂಡ ಇದರ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ.

ನೋಡಲು ಸಣ್ಣಗೆ ಇದೆ ಎಂದು ಒಂದು ಬಾರಿ ಕಚ್ಚಿದರೆ ಈ ಖಾರದಿಂದ ಸುಧಾರಿಸಿಕೊಳ್ಳಲು ತುಂಬಾ ಸಮಯವೇ ಬೇಕಾಗುತ್ತದೆ. ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಮೀನಿನ ಸಾರು ಸೇರಿದಂತೆ ಇನ್ನಿತ್ತರ ಪದಾರ್ಥಗಳಿಗೆ ಹೆಚ್ಚಾಗಿ ಈ ಸೂಜಿ ಮೆಣಸನ್ನು ಬಳಸುತ್ತಾರೆ.

ಸಾಮಾನ್ಯವಾಗಿ ಈ ಸೂಜಿ ಅಥವಾ ಗಾಂಧಾರಿ ಮೆಣಸನ್ನು ಅಡುಗೆಗೆ ಬಳಸುವುದರಿಂದ ಅಡುಗೆ ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಅನೇಕ ರೀತಿಯ ಲಾಭಗಳಿವೆ. ಇದನ್ನು ಜೀರಿಗೆ ಮೆಣಸು, ಗಾಂಧಾರಿ ಮೆಣಸು, ಸೂಜಿ ಮೆಣಸು ಹಾಗೂ ಕಾಡು ಮೆಣಸು ಹೀಗೆ ಹತ್ತಾರು ಹೆಸರಿನಿಂದ ಕರೆಯಲಾಗುತ್ತದೆ.

ಅಡುಗೆಯಲ್ಲಿ ನಿಯಮಿತವಾಗಿ ಬಳಸುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳಿವೆ. ಇದು ಹೊಟ್ಟೆ ಉಬ್ಬರ, ಹೊಟ್ಟೆ ನೋವು ಸೇರಿದಂತೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಸೂಜಿ ಅಥವಾ ಗಾಂಧಾರಿ ಮೆಣಸಿನಕಾಯಿ ಆಹಾರದ ಭಾಗವಾಗಿ ಮಾಡಿಕೊಳ್ಳುವುದರಿಂದ ಇದು ಹಲ್ಲು ನೋವನ್ನು ನಿವಾರಿಸುತ್ತದೆ. ಇನ್ನು ವಸಡನ್ನು ಗಟ್ಟಿಗೊಳಿಸಿ ಹಲ್ಲಿನ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.

ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿ ಹೃದಯ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ತೂಕ ಹೆಚ್ಚಳ, ಬೊಜ್ಜಿನ ಸಮಸ್ಯೆ ಬರದಂತೆ ತಡೆಯುತ್ತದೆ. ಅದಲ್ಲದೇ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ರೋಗಾಣುಗಳ ವಿರುದ್ದ ಹೋರಾಡುತ್ತದೆ.

ಸೂಜಿ ಮೆಣಸನ್ನು ಅಡುಗೆಯಲ್ಲಿ ಸೇರಿಸಿಕೊಳ್ಳುವುದರಿಂದ ವಯಸ್ಸಾದ ಕಾಲಘಟ್ಟದಲ್ಲಿ ಕಾಡುವ ಕೀಲು ನೋವು, ಸಂಧಿವಾತ ಸೇರಿದಂತೆ ಇನ್ನಿತ್ತರ ಸಮಸ್ಯೆಗಳು ಬರುವುದಿಲ್ಲ.