ಸ್ನಾನ ಮಾಡುವ ಮೂಲಕ ಬಾಹ್ಯ ದೇಹವನ್ನು ಸ್ವಚ್ಛಗೊಳಿಸುತ್ತೇವೆ. ಅದೇ ರೀತಿ, ಆಂತರಿಕ ದೇಹದ ಶುದ್ಧಿಗಾಗಿ ಕೆಲವು ಡಿಟಾಕ್ಸ್ ಪಾನೀಯಗಳಿವೆ (Detox Drinks). ನೀವು ಅವುಗಳನ್ನು ಪ್ರತಿದಿನ ಸೇವಿಸಿದರೆ ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸಬಹುದು. ಹಾಗಿದ್ದರೆ ಡಿಟಾಕ್ಸ್ ಪಾನೀಯಗಳು ಯಾವುವು? ಅವುಗಳನ್ನು ಹೇಗೆ ತಯಾರಿಸುವುದು? ಅದರ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಈ ಪಾನೀಯವನ್ನು ತಯಾರಿಸಲು ಮುಳ್ಳುಸೌತೆ ಅವಶ್ಯಕ. ಇದನ್ನು ತುಂಡುಗಳನ್ನಾಗಿ ಮಾಡಿ ಜ್ಯೂಸ್ ತಯಾರಿಸಿ. ನಂತರ ಸ್ವಲ್ಪ ನೀರು ಬೆರೆಸಿ ಮಿಶ್ರಣ ಮಾಡಿ. ಅದಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ. ಫಿಲ್ಟರ್ ಮಾಡಿ ಕುಡಿಯಬಹುದು. ಈ ಡಿಟಾಕ್ಸ್ ಪಾನೀಯವನ್ನು ಪ್ರತಿನಿತ್ಯ ಕುಡಿದರೆ ದೇಹದಲ್ಲಿರುವ ತ್ಯಾಜ್ಯಗಳನ್ನು ಹೊರಹಾಕಬಹುದು, ಚರ್ಮದ ಸಮಸ್ಯೆ ಇರುವವರು ಈ ಪಾನೀಯವನ್ನು ಕುಡಿದರೆ ಚರ್ಮದ ಆರೋಗ್ಯ ಕಾಪಾಡಬಹುದು.
ಡಿಟಾಕ್ಸ್ ಪಾನೀಯ 2 ಸಿದ್ಧಪಡಿಸಲು ಹೆಚ್ಚಿನ ಶ್ರಮ ಅಗತ್ಯವಿಲ್ಲ. ಒಂದು ಲೋಟ ನೀರಿಗೆ ಒಂದು ನಿಂಬೆ ರಸ ಮತ್ತು ಒಂದು ಚಮಚ ಶುಂಠಿ ರಸವನ್ನು ಬೆರೆಸಿ ಕುಡಿಯಿರಿ. ಹೀಗೆ ಕುಡಿಯುವುದರಿಂದ ದೇಹದಿಂದ ಕಲ್ಮಶಗಳನ್ನು ಹೊರಹಾಕುವುದಲ್ಲದೆ, ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುವವರಿಗೆ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ಗಿಡಮೂಲಿಕೆಗಳ ರಾಣಿ: ಪ್ರತಿದಿನ ತುಳಸಿ ನೀರು ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನ, ಇಲ್ಲಿದೆ ತಜ್ಞರ ಸಲಹೆ
ಡಿಟಾಕ್ಸ್ ಪಾನೀಯ 3 ತಯಾರಿಸುವುದು ಕೂಡ ಅಷ್ಟೇ ಸುಲಭ. ಒಂದು ಲೋಟ ನೀರಿನಲ್ಲಿ ಒಂದು ನಿಂಬೆಹಣ್ಣಿನ ರಸ ಮತ್ತು ಒಂದು ಚಮಚ ಪುದೀನಾ ಎಲೆಗಳನ್ನು ಕುಡಿಯಿರಿ. ಇದರ ಸೇವನೆಯಿಂದ ದೇಹದಿಂದ ತ್ಯಾಜ್ಯವನ್ನು ಹೊರಹಾಕುತ್ತದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
ಈ ಮೂರು ಡಿಟಾಕ್ಸ್ ಪಾನೀಯಗಳಲ್ಲಿ ಯಾವುದಾದರೂ ಒಂದನ್ನು ಪ್ರತಿದಿನ ಸೇವಿಸಬಹುದು. ಇದರಿಂದ ದೇಹವು ಆಂತರಿಕವಾಗಿ ಶುದ್ಧವಾಗುತ್ತದೆ ಮತ್ತು ರೋಗಗಳಿಂದ ಪಾರಾಗಬಹುದು. ಈಗಾಗಲೇ ಆರೋಗ್ಯ ಸಮಸ್ಯೆ ಇರುವವರು ಇದನ್ನು ಪ್ರಯತ್ನಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 am, Fri, 11 August 23