ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರ ಸೇವಿಸಿ

|

Updated on: Sep 30, 2023 | 7:47 PM

ನೀವು ಪ್ರತಿ ರಾತ್ರಿ 7ರಿಂದ 9 ಗಂಟೆಗಳ ಕಾಲ ಸುಖವಾದ ನಿದ್ರೆಯನ್ನು ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ, ಹಲವರಿಗೆ ನಿದ್ರೆಯೇ ದೊಡ್ಡ ಆರೋಗ್ಯ ಸಮಸ್ಯೆಯಾಗಿರುತ್ತದೆ. ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಮಲಗುವ ಮುನ್ನ ನೀವು ಸೇವಿಸಬಹುದಾದ ಅತ್ಯುತ್ತಮ ಆಹಾರಗಳು ಇಲ್ಲಿವೆ...

ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರ ಸೇವಿಸಿ
ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರ ಸೇವಿಸಿ
Image Credit source: iStock
Follow us on

ಉತ್ತಮವಾದ ನಿದ್ರೆ ಮಾಡುವುದರಿಂದ ನಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ನಿದ್ರಾಹೀನತೆಯಿಂದ ಕೆಲವು ದೀರ್ಘಕಾಲದ ಕಾಯಿಲೆಗಳು ಹೆಚ್ಚಾಗುತ್ತವೆ. ನಿದ್ರೆಯಿಂದ ನಿಮ್ಮ ಮೆದುಳನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ನೀವು ಪ್ರತಿ ರಾತ್ರಿ 7ರಿಂದ 9 ಗಂಟೆಗಳ ಕಾಲ ಸುಖವಾದ ನಿದ್ರೆಯನ್ನು ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ಆದರೆ, ಹಲವರಿಗೆ ನಿದ್ರೆಯೇ ದೊಡ್ಡ ಆರೋಗ್ಯ ಸಮಸ್ಯೆಯಾಗಿರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ನೀವಾಗಿದ್ದರೆ ಮಲಗುವ ಮುನ್ನ ಈ ಆಹಾರವನ್ನು ಸೇವಿಸಿ ನೋಡಿ.

ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಮಲಗುವ ಮುನ್ನ ನೀವು ಸೇವಿಸಬಹುದಾದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳು ಇಲ್ಲಿವೆ…

ಬಾದಾಮಿ:

ಬಾದಾಮಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಡ್ರೈ ಫ್ರೂಟ್ಸ್​. ಇವು ಅನೇಕ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಬಾದಾಮಿಯನ್ನು ನಿಯಮಿತವಾಗಿ ತಿನ್ನುವುದರಿಂದ ಟೈಪ್ 2 ಮಧುಮೇಹ ಮತ್ತು ಹೃದ್ರೋಗದಂತಹ ಕೆಲವು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಬಾದಾಮಿಯು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಬಾದಾಮಿಯು ಮೆಲಟೋನಿನ್ ಎಂಬ ಹಾರ್ಮೋನ್‌ನ ಮೂಲವಾಗಿದೆ. ಮೆಲಟೋನಿನ್ ನಿದ್ರೆ ಮಾಡಲು ನಿಮ್ಮ ದೇಹಕ್ಕೆ ಸೂಚನೆ ನೀಡುತ್ತದೆ.

ಕ್ಯಾಮೊಮೈಲ್ ಚಹಾ:

ಕ್ಯಾಮೊಮೈಲ್ ಚಹಾವು ಜನಪ್ರಿಯ ಗಿಡಮೂಲಿಕೆ ಚಹಾವಾಗಿದ್ದು, ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದು ಅದರ ಫ್ಲೇವೋನ್‌ಗಳಿಗೆ ಹೆಸರುವಾಸಿಯಾಗಿದೆ. ಫ್ಲೇವೊನ್‌ಗಳು ಉತ್ಕರ್ಷಣ ನಿರೋಧಕಗಳ ಒಂದು ವರ್ಗವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಉರಿಯೂತ ಕ್ಯಾನ್ಸರ್ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಕ್ಯಾಮೊಮೈಲ್ ಚಹಾವನ್ನು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ, ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಇದರ ಜೊತೆಗೆ, ಕ್ಯಾಮೊಮೈಲ್ ಚಹಾ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕೆಲವು ವಿಶಿಷ್ಟ ಗುಣಗಳನ್ನು ಹೊಂದಿದೆ.

ಇದನ್ನೂ ಓದಿ: Lemon Water: ನಿಂಬೆ ಜ್ಯೂಸ್ ಸೇವನೆಯಿಂದ ಪ್ರಯೋಜನಗಳು ಹತ್ತು ಹಲವು!

ಕಿವಿ ಹಣ್ಣು:

ಕಿವಿ ಹಣ್ಣುಗಳು ಕಡಿಮೆ ಕ್ಯಾಲೋರಿ ಮತ್ತು ತುಂಬಾ ಪೌಷ್ಟಿಕಾಂಶವಿರುವ ಹಣ್ಣು. ಒಂದು ಹಣ್ಣು ಕೇವಲ 42 ಕ್ಯಾಲೋರಿಗಳನ್ನು ಮತ್ತು ಗಮನಾರ್ಹ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರಲ್ಲಿ ವಿಟಮಿನ್ ಸಿ ಯಥೇಚ್ಛವಾಗಿದೆ. ಕಿವಿ ಹಣ್ಣನ್ನು ತಿನ್ನುವುದರಿಂದ ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕಿವಿ ಹಣ್ಣು ತಿನ್ನುವುದರಿಂದ ನಿದ್ರಾಹೀನತೆ ಸಮಸ್ಯೆ ಕಡಿಮೆಯಾಗುತ್ತದೆ.

ಟಾರ್ಟ್ ಚೆರಿ ಜ್ಯೂಸ್:

ಟಾರ್ಟ್ ಚೆರ್ರಿ ಜ್ಯೂಸ್ ಅನೇಕ ಆರೋಗ್ಯದ ಪ್ರಯೋಜನಗಳನ್ನು ಹೊಂದಿದೆ. ಇದು ಮೆಗ್ನೀಸಿಯಮ್ ಮತ್ತು ರಂಜಕದಂತಹ ಕೆಲವು ಪ್ರಮುಖ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತದೆ. ಇದು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ನಿದ್ರಾಹೀನತೆಯಿಂದ ಬಳಲುವವರು ಟಾರ್ಟ್ ಚೆರಿ ಜ್ಯೂಸ್ ಸೇವಿಸಿ.

ವಾಲ್​ನಟ್ಸ್​:

ವಾಲ್​ನಟ್ಸ್ ಎಂಬ ಡ್ರೈ ಫ್ರೂಟ್​ ಅನೇಕ ಪೋಷಕಾಂಶಗಳನ್ನು ಹೊಂದಿದೆ. ವಾಲ್​ನಟ್​ ತಿನ್ನುವುದರಿಂದ ನಿದ್ರಾಹೀನತೆಯಿಂದ ಪಾರಾಗಬಹುದು.

ಬಿಳಿ ಅಕ್ಕಿ:

ಬಿಳಿ ಅಕ್ಕಿಯು ಅನೇಕ ದೇಶಗಳಲ್ಲಿ ಪ್ರಧಾನ ಆಹಾರವಾಗಿ ಸೇವಿಸಲ್ಪಡುವ ಧಾನ್ಯವಾಗಿದೆ. ಬಿಳಿ ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ ಅಧಿಕವಾಗಿದ್ದು, ಇದರ ಕಾರ್ಬ್ ಅಂಶ ಮತ್ತು ಫೈಬರ್ ಕೊರತೆಯು ಅದರ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಗೆ ಕೊಡುಗೆ ನೀಡುತ್ತದೆ. ಬಿಳಿ ಅಕ್ಕಿಯ ಅನ್ನ ಸೇವಿಸುವುದರಿಂದಲೂ ನಿದ್ರೆ ಚೆನ್ನಾಗಿ ಬರುತ್ತದೆ.

ಇದನ್ನೂ ಓದಿ: ಮಗುವಿಗೆ ಜೇನುತುಪ್ಪ ಏಕೆ ಕೊಡಬಾರದು? ಬೊಟುಲಿಸಂ ರೋಗ ಎಷ್ಟು ಅಪಾಯಕಾರಿ ಗೊತ್ತಾ?

ಡೈರಿ ಉತ್ಪನ್ನಗಳು:

ಒಂದು ಲೋಟ ಹಾಲು, ಕಾಟೇಜ್ ಚೀಸ್ ಮತ್ತು ಸಾದಾ ಮೊಸರು ಮುಂತಾದ ಡೈರಿ ಉತ್ಪನ್ನಗಳನ್ನು ಮಲಗುವ ಮುನ್ನ ಸೇವಿಸಿ ನೋಡಿ. ಹಾಲು ವಯಸ್ಸಾದ ವಯಸ್ಕರಲ್ಲಿ ನಿದ್ರೆಯನ್ನು ಸುಧಾರಿಸುತ್ತದೆ ಎಂದು ಸಾಬೀತಾಗಿದೆ. ಹೀಗಾಗಿ, ಮಲಗುವ ಮುನ್ನ ಹಾಲು ಕುಡಿಯಿರಿ.

ಬಾಳೆಹಣ್ಣುಗಳು:

ಬಾಳೆಹಣ್ಣಿನ ಸಿಪ್ಪೆಗಳು ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತವೆ. ಈ ಹಣ್ಣುಗಳು ಮೆಗ್ನೀಸಿಯಮ್​ನ ಮೂಲವಾಗಿದೆ. ಈ ಎರಡೂ ಗುಣಲಕ್ಷಣಗಳು ನಿಮಗೆ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ