ಮಕ್ಕಳಿಗೆ ಹಸುವಿನ ಹಾಲಿನ ಬದಲು ಮೇಕೆ ಹಾಲು ಕೊಡಬಹುದೇ?

|

Updated on: Oct 22, 2023 | 3:17 PM

ಪ್ರಪಂಚದ ಒಟ್ಟು ಮೇಕೆ ಹಾಲಿನ ಸುಮಾರು ಶೇ. 49ರಷ್ಟು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಸುಡಾನ್‌ನಲ್ಲಿ ಉತ್ಪಾದಿಸಲಾಗುತ್ತದೆ. ಮೇಕೆಯ ಹಾಲು ಮೃದುವಾದ, ಕೆನೆಯನ್ನು ಹೊಂದಿದೆ ಮತ್ತು ವಿಟಮಿನ್ ಮತ್ತು ಇದರಲ್ಲಿ ಖನಿಜಾಂಶಗಳು ಸಮೃದ್ಧವಾಗಿದೆ.

ಮಕ್ಕಳಿಗೆ ಹಸುವಿನ ಹಾಲಿನ ಬದಲು ಮೇಕೆ ಹಾಲು ಕೊಡಬಹುದೇ?
ಮೇಕೆ ಹಾಲು
Image Credit source: iStock
Follow us on

ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮವಾದರೂ ಅದಕ್ಕೆ ಪರ್ಯಾಯವಾಗಿ ಬೇರೆ ಹಾಲನ್ನು ಬಳಸಲು ನೀವು ಯೋಚಿಸುತ್ತಿದ್ದರೆ ಮೇಕೆ ಹಾಲನ್ನು ಬಳಸಿ ನೋಡಬಹುದು. ಮೇಕೆ ಹಾಲನ್ನು ನ್ಯೂಟ್ರಾಸ್ಯುಟಿಕಲ್ ಆರೋಗ್ಯ ಪಾನೀಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಆಲಿಗೋಸ್ಯಾಕರೈಡ್‌ ಅಂಶ ಸಮೃದ್ಧವಾಗಿದೆ. ವಿವಿಧ ರೀತಿಯ ಚೀಸ್ ಮತ್ತು ಮೊಸರನ್ನು ತಯಾರಿಸಲು ಮೇಕೆ ಹಾಲನ್ನು ಬಳಸಲಾಗುತ್ತದೆ. ಹಲವಾರು ದೇಶಗಳಲ್ಲಿ ಮೇಕೆ ಸಾಕಣೆಯು ಮುಖ್ಯ ಕಸುಬಾಗಿದೆ. ಅದರಲ್ಲೂ ಮಧ್ಯಪ್ರಾಚ್ಯ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಮೇಕೆ ಸಾಕಾಣಿಕೆ ಹೆಚ್ಚಾಗಿದೆ.

ಪ್ರಪಂಚದ ಒಟ್ಟು ಮೇಕೆ ಹಾಲಿನ ಸುಮಾರು ಶೇ. 49ರಷ್ಟು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಸುಡಾನ್‌ನಲ್ಲಿ ಉತ್ಪಾದಿಸಲಾಗುತ್ತದೆ. ಮೇಕೆಯ ಹಾಲು ಮೃದುವಾದ, ಕೆನೆಯನ್ನು ಹೊಂದಿದೆ ಮತ್ತು ವಿಟಮಿನ್ ಮತ್ತು ಇದರಲ್ಲಿ ಖನಿಜಾಂಶಗಳು ಸಮೃದ್ಧವಾಗಿದೆ. ಆದ್ದರಿಂದ, ಇದು ಹಸುವಿನ ಹಾಲಿಗಿಂತ ಉತ್ತಮವೆನ್ನಬಹುದು. ಏಕೆಂದರೆ ಮೇಕೆಯ ಹಾಲು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಸುವಿನ ಹಾಲನ್ನು ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಮಕ್ಕಳಿಗೆ ಮೇಕೆ ಹಾಲನ್ನು ನೀಡಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಮಗುವಿಗೆ ಹಸುವಿನ ಹಾಲು ಕೊಡುತ್ತೀರಾ?; ಅಪಾಯದ ಬಗ್ಗೆಯೂ ತಿಳಿದಿರಲಿ

ಮೇಕೆ ಹಾಲು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಉರಿಯೂತ ನಿವಾರಕ ಲಕ್ಷಣಗಳನ್ನು ಹೊಂದಿದೆ. ಮ್ಯೂಕೋಸಲ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರಿಬಯಾಟಿಕ್ಸ್ 1 ಆಗಿ ಕಾರ್ಯನಿರ್ವಹಿಸುತ್ತದೆ. ಆಂಟಿಮೈಕ್ರೊಬಿಯಲ್ 3 ಆಗಿ ಕಾರ್ಯನಿರ್ವಹಿಸುತ್ತದೆ.

ಮೇಕೆ ಹಾಲು ಮಾನವನ ದೇಹಕ್ಕೆ ಪ್ರಯೋಜನಕಾರಿಯಾಗಬಹುದಾದ ಹಲವಾರು ಪೋಷಕಾಂಶಗಳನ್ನು ಹೊಂದಿದೆ. ಮೇಕೆ ಹಾಲು ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ ಇದನ್ನು ನೀವು ಮಕ್ಕಳಿಗೆ ಸಹ ಕೊಡಬಹುದು. ಆದರೆ, ಮಕ್ಕಳಿಗೆ ಮೇಕೆ ಹಾಲನ್ನು ನೀಡುವ ಮುನ್ನ ವೈದ್ಯರ ಬಳಿ ಚರ್ಚಿಸುವುದು ಉತ್ತಮ.

ಮೇಕೆ ಹಾಲು ಹೆಚ್ಚಿನ ಮಟ್ಟದ ಸಂಯೋಜಿತ ಲಿನೋಲಿಯಿಕ್ ಆಸಿಡ್ (CLA) ಅನ್ನು ಹೊಂದಿರುತ್ತದೆ. ಇದು ಪ್ರಾಣಿಗಳ ಮಾದರಿಗಳು ಮತ್ತು ಮಾನವನ ಕ್ಯಾನ್ಸರ್ ಕೋಶಗಳಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ CLA ಕಾರ್ಯವಿಧಾನವನ್ನು ಇನ್ನೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಇದನ್ನೂ ಓದಿ: ಎದೆಹಾಲು ಕುಡಿಸುವವರು ಪುದೀನಾ ಸೇವಿಸುವುದು ಸುರಕ್ಷಿತವೇ?

ಪ್ರಕೃತಿಚಿಕಿತ್ಸೆಯಲ್ಲಿ ಹಸುಗಳನ್ನು ಕ್ಯಾಲ್ಸಿಯಂ ಪ್ರಾಣಿಗಳು ಎಂದು ಕರೆಯಲಾಗುತ್ತದೆ ಮತ್ತು ಮೇಕೆಗಳನ್ನು ಜೈವಿಕ-ಸಾವಯವ ಸೋಡಿಯಂ ಪ್ರಾಣಿಗಳು ಎಂದು ಕರೆಯಲಾಗುತ್ತದೆ. ಮೇಕೆ ಹಾಲು ಒಂದು ಕಪ್‌ನಲ್ಲಿ ಕ್ಯಾಲ್ಸಿಯಂನ ಶೇ. 35ರಷ್ಟನ್ನು ಒದಗಿಸುತ್ತದೆ. ಇದು ವಿಟಮಿನ್ ಬಿ2, ರಂಜಕ, ಹೆಚ್ಚಿನ ಮಟ್ಟದ ವಿಟಮಿನ್ ಬಿ 12 ಮತ್ತು ಪೊಟ್ಯಾಸಿಯಮ್ ಅನ್ನು ಸಹ ಹೊಂದಿದೆ.

ಕೆಲವು ಸಂದರ್ಭಗಳಲ್ಲಿ ಹಸುವಿನ ಹಾಲನ್ನು ಸೇವಿಸಿದರೆ ಅಲರ್ಜಿಯಾಗುವ ಜನರಿಗೆ ಮೇಕೆ ಹಾಲಿನಿಂದಲೂ ಅಲರ್ಜಿಯನ್ನು ಹೊಂದಬಹುದು. ಮೇಕೆ ಹಾಲಿನಲ್ಲಿರುವ ಕೆಲವು ಪ್ರೋಟೀನ್‌ಗಳು ಹಸುವಿನ ಹಾಲಿನಂತೆಯೇ ಇರುತ್ತವೆ. ಇದು ಮೇಕೆ ಹಾಲನ್ನು ಸೇವಿಸುವವರಿಗೆ ಅಲರ್ಜಿಯನ್ನು ಉಂಟುಮಾಡಬಹುದು. ಅಲ್ಲದೆ, ನೀವು ಪಾಶ್ಚರೀಕರಿಸದ ಮೇಕೆ ಹಾಲನ್ನು ಸೇವಿಸಿದರೆ ಅದರಿಂದ ಫುಡ್ ಪಾಯ್ಸನ್​ನಂತಹ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟಾಗಬಹುದು.

ಹೀಗಾಗಿ, ಮೇಕೆ ಹಾಲು ಪಾಶ್ಚರೀಕರಿಸಲ್ಪಟ್ಟಿದೆ ಎಂದು ತಿಳಿದ ನಂತರವೇ ನೀವು ಅದನ್ನು ಸೇವಿಸಬೇಕು. ಪಾಶ್ಚರೀಕರಿಸದ ಮೇಕೆ ಹಾಲು ತೀವ್ರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ, ಮೇಕೆ ಹಾಲಿನ ಅಲರ್ಜಿ ಇರುವ ಜನರು ಮೇಕೆ ಹಾಲು ಅಥವಾ ಮೇಕೆ ಹಾಲನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ನಿಮ್ಮ ವೈದ್ಯರ ಬಳಿ ಚರ್ಚಿಸಿದ ನಂತರ ನೀವು ಮೇಕೆ ಹಾಲನ್ನು ತೆಗೆದುಕೊಳ್ಳಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ