ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿ ಕ್ಷಿಪ್ರವಾಗಿ ಬದಲಾಗುತ್ತಿದೆ. ಜನರು ತಮ್ಮ ಆಹಾರದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅನೇಕ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿಯ ಭಾಗವಾಗಿರುವ ಆಹಾರಗಳಲ್ಲಿ ಸೋಡಾ ಕೂಡ ಒಂದು. ಆದರೆ ಹೆಚ್ಚು ಸೋಡಾ ಕುಡಿಯುವುದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ (Side Effects Of Soda). ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಸೋಡಾದಲ್ಲಿ ಅಡಕವಾಗಿರುವ ಅಧಿಕ ಸಕ್ಕರೆ ಅಂಶವು ಮಾನವನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿರುವ ಸಕ್ಕರೆ ಪ್ರಮಾಣ ವ್ಯಕ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚು ಸೋಡಾ ಕುಡಿಯುವುದರಿಂದ ತೂಕ ಹೆಚ್ಚಾಗುವುದು, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸೋಡಾದ ಬದಲಿಗೆ ಈ ಆರೋಗ್ಯಕರ ಪಾನೀಯಗಳನ್ನು ತೆಗೆದುಕೊಳ್ಳಬಹುದು (Health).
ಐಸ್ ಚಹಾ..
ನೀವು ಸೋಡಾಕ್ಕೆ ಕೆಲವು ಆರೋಗ್ಯಕರ ಪರ್ಯಾಯಗಳನ್ನು ಹುಡುಕುತ್ತಿದ್ದರೆ, ಐಸ್ಡ್ ಟೀ (ಐಸ್ ಚಹಾ) ಪರಿಪೂರ್ಣವಾಗಿದೆ. ಈ ಪಾನೀಯವು ನಿಮ್ಮನ್ನು ಜಲೀಕರಣಗೊಳಿಸುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ. ನಿಮ್ಮನ್ನು ಫ್ರೆಶ್ ಆಗಿರಿಸುತ್ತದೆ.
ತೆಂಗಿನ ಎಳನೀರು
ತಾಜಾ ಮತ್ತು ಸುಲಭವಾಗಿ ಲಭ್ಯವಿರುವ, ರುಚಿಕರವಾದ ಮತ್ತು ಆರೋಗ್ಯಕರ ಪಾನೀಯ ಎಳನೀರು. ಸೋಡಾ ಬದಲಿಗೆ ನಿಮ್ಮ ಆಹಾರದಲ್ಲಿ ಇದನ್ನು ಧಾರಾಳವಾಗಿ ಸೇರಿಸಬಹುದು. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸೋಡಿಯಂನಲ್ಲಿ ಸಮೃದ್ಧವಾಗಿರುವ ಜಲಸಂಚಯನ ಮತ್ತು ಉರಿಯೂತ ಕಡಿಮೆ ಮಾಡುವ ಪಾನೀಯವಾಗಿದೆ.
ಇದನ್ನೂ ಓದಿ: ನೀವು ರಾತ್ರಿ ವೇಳೆ ಸಾಕ್ಸ್ ಧರಿಸಿ ಮಲಗುತ್ತೀರಾ? ಅಂದರೆ ನೀವು ಈ ಸಮಸ್ಯೆಗಳಿಗೆ ಹತ್ತಿರದಲ್ಲಿದ್ದೀರಿ!
ತಾಜಾ ಜ್ಯೂಸ್ಗಳು
ನಿಮ್ಮ ಆಹಾರದಿಂದ ಸೋಡಾ ಸೇವನೆವನ್ನು ತೊಡೆದುಹಾಕಲು ನೀವು ಬಯಸಿದರೆ, ನೀವು ನೈಸರ್ಗಿಕವಾಗಿ ಸುವಾಸನೆಯ ರಸವನ್ನು ಆಯ್ಕೆ ಮಾಡಬಹುದು. ನಿಮ್ಮ ನೆಚ್ಚಿನ ಹಣ್ಣುಗಳು, ತರಕಾರಿಗಳು ಅಥವಾ ಬೇರುಗಳ ರಸವನ್ನು ತಯಾರಿಸಿಕೊಂಡು ಕುಡಿಯಬಹುದು.
ಹಾಲು
ಒಂದು ಲೋಟ ಹಾಲಿನಲ್ಲಿ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್, ಪೊಟ್ಯಾಶಿಯಂ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಹಾಲಿನ ಇನ್ನೊಂದು ವಿಶೇಷತೆ ಏನೆಂದರೆ ಅದಕ್ಕೆ ಬೇರೆ ಯಾವುದೇ ಆಹಾರ ಪದಾರ್ಥಗಳನ್ನು ಸೇರಿಸಿ ಕುಡಿಯಬಹುದು. ಒಣ ಹಣ್ಣುಗಳು ಮತ್ತು ತಾಜಾ ಹಣ್ಣುಗಳನ್ನು ಮಿಶ್ರಣ ಮಾಡುವ ಮೂಲಕ ನೀವು ಇದನ್ನು ಕುಡಿಯಬಹುದು.
ನಿಂಬೆ ರಸ
ನಿಂಬೆ ರಸವು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಸೋಡಾಕ್ಕಿಂತ ಕಡಿಮೆ ಸಕ್ಕರೆಯನ್ನು ಹೊಂದಿರುತ್ತದೆ. ಇದು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸುವ ಪ್ರಯತ್ನಗಳಲ್ಲಿ ಸಹಾಯ ಮಾಡುತ್ತದೆ.
ಆರೋಗ್ಯ ಸಂಬಂಧಿ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ