ಎದೆಹಾಲು ಕುಡಿಸುವವರು ಪುದೀನಾ ಸೇವಿಸುವುದು ಸುರಕ್ಷಿತವೇ?

ಮಗುವಿಗೆ ಎದೆಹಾಲುಣಿಸುವ ಸಮಯದಲ್ಲಿ ಪುದೀನಾವನ್ನು ಬಳಸಲು ಸುರಕ್ಷಿತವಾಗಿದೆಯೇ ಎಂದು ನಿರ್ಧರಿಸಲು ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ಆದರೆ, ಅದರ ವಾಸನೆಯ ಕಾರಣದಿಂದ ಎದೆಹಾಲು ನೀಡುವ ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ಪುದೀನಾವನ್ನು ಸೇವಿಸದಿರುವುದು ಉತ್ತಮ.

ಎದೆಹಾಲು ಕುಡಿಸುವವರು ಪುದೀನಾ ಸೇವಿಸುವುದು ಸುರಕ್ಷಿತವೇ?
ಪುದೀನಾImage Credit source: iStock
Follow us
|

Updated on: Oct 21, 2023 | 6:50 PM

ಪುದೀನಾವನ್ನು ಇಂಗ್ಲಿಷ್‌ನಲ್ಲಿ ಸ್ಪಿಯರ್‌ಮಿಂಟ್ ಎಂದು ಕರೆಯಲಾಗುತ್ತದೆ. ಇದನ್ನು ಭಾರತೀಯ ಮತ್ತು ಇಟಾಲಿಯನ್ ಅಡುಗೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಪುದೀನಾವನ್ನು ಆಹಾರದಲ್ಲಿ ನಿಯಮಿತ ಪ್ರಮಾಣದಲ್ಲಿ ಸೇವಿಸಿದಾಗ ಸುರಕ್ಷಿತವಾಗಿರುತ್ತವೆ. ಪುದೀನಾ ಆರೋಗ್ಯಕ್ಕೆ ಅತ್ಯಂತ ಉತ್ತಮ ಸಸ್ಯವಾದರೂ ಕೆಲವೊಮ್ಮೆ ಅಡ್ಡಪರಿಣಾಮಗಳು ಕೂಡ ಉಂಟಾಗುತ್ತವೆ. ಪುದೀನಾವನ್ನು ಚರ್ಮಕ್ಕೆ ಹಚ್ಚಿಕೊಂಡಾಗ ಕೆಲವರಿಗೆ ಅಲರ್ಜಿ ಉಂಟಾಗಬಹುದು. ಪುದಿನಾದಲ್ಲಿರುವ ಸಾರಭೂತ ತೈಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಾಂತಿ ಮತ್ತು ಭೇದಿ ಉಂಟಾಗುತ್ತದೆ. ಅದರಲ್ಲೂ ಗರ್ಭಿಣಿಯರಿಗೆ ಪುದೀನಾ ಸೇವನೆ ಒಳ್ಳೆಯದಲ್ಲ.

ಪುದೀನಾವು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಪುದೀನಾ ಹೊಟ್ಟೆಯಿಂದ ತುಂಬಿದ ಗ್ಯಾಸ್ ತೆಗೆದುಹಾಕುತ್ತದೆ. ಪುದೀನಾವನ್ನು ಸ್ನಾಯು ಸೆಳೆತವನ್ನು ನಿವಾರಿಸಲು ಬಳಸಲಾಗುತ್ತದೆ. ಇದು ಮೂತ್ರವರ್ಧಕ ಚಟುವಟಿಕೆಯನ್ನು ಹೊಂದಿದೆ. ಅಂದರೆ, ಪುದೀನಾವನ್ನು ತಿಂದರೆ ಮೂತ್ರ ವಿಸರ್ಜನೆ ಹೆಚ್ಚಾಗಿ, ಕಿಡ್ನಿ ಕ್ಲೀನ್ ಆಗುತ್ತದೆ. ಪುದೀನಾ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಇದು ಆಂಟಿಫಂಗಲ್ ಆಗಿದ್ದು, ಅತಿಸಾರವನ್ನು ಕೂಡ ಕಡಿಮೆ ಮಾಡುತ್ತದೆ.

ಪುದೀನಾ ಸೇವಿಸುವುದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೀತ ಬಂದಾಗ ಪುದೀನಾವನ್ನು ಸೇವಿಸಿದರೆ ಬೇಗ ಗುಣವಾಗುತ್ತದೆ. ಅಲ್ಲದೆ, ನಿಮ್ಮ ತೂಕ ಇಳಿಸಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ನಿಮ್ಮ ಜೀರ್ಣಕ್ರಿಯೆಯನ್ನು ಪುದೀನಾ ಸರಾಗಗೊಳಿಸುತ್ತದೆ. ಪುದಿನಾ ಕರುಳಿನಿಂದ ವಿಷವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಎಳನೀರು ದೇಹಕ್ಕೆ ತಂಪು ಮಾತ್ರವಲ್ಲ ಆರೋಗ್ಯಕ್ಕೂ ಆಪದ್ಭಾಂಧವ

ಪುದೀನಾದ ಎಲೆಯ ಸಾರವು ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಪ್ರಯೋಗಾಲಯದ ಅಧ್ಯಯನಗಳಲ್ಲಿ, ಪುದೀನಾ ಎಲೆಗಳ ಸಾರವು ವಿವಿಧ ಕ್ಯಾನ್ಸರ್ ಕೋಶಗಳ ವಿರುದ್ಧ ಬಲವಾದ ಕ್ಯಾನ್ಸರ್ ವಿರೋಧಿ ಚಟುವಟಿಕೆಯನ್ನು ತೋರಿಸಿದೆ. ಪುದೀನಾ ಎಲೆಗಳಿಂದ ಸಾರಗಳು ಸ್ತನ ಮತ್ತು ಬಾಯಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ.

ಗರ್ಭಿಣಿಯರು ಪುದೀನಾ ಸೇವಿಸುವುದು ಸುರಕ್ಷಿತವಲ್ಲ. ಇದು ಗರ್ಭಾಶಯಕ್ಕೆ ಹಾನಿ ಉಂಟುಮಾಡಬಹುದು. ಮಗುವಿಗೆ ಎದೆಹಾಲುಣಿಸುವ ಸಮಯದಲ್ಲಿ ಪುದೀನಾವನ್ನು ಬಳಸಲು ಸುರಕ್ಷಿತವಾಗಿದೆಯೇ ಎಂದು ನಿರ್ಧರಿಸಲು ಇನ್ನಷ್ಟು ಸಂಶೋಧನೆಗಳು ಆಗಬೇಕಿದೆ. ಆದರೆ, ಅದರ ವಾಸನೆಯ ಕಾರಣದಿಂದ ಎದೆಹಾಲು ನೀಡುವ ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ಪುದೀನಾವನ್ನು ಸೇವಿಸದಿರುವುದು ಉತ್ತಮ.

ಇದನ್ನೂ ಓದಿ: ದಿನಕ್ಕೆ ಐದಾರು ಎಸಳು ಪುದೀನಾ ಸೊಪ್ಪು ತಿಂದರೆ ಏನೇನೆಲ್ಲ ಆಗುತ್ತೆ ನೋಡಿ!

ಪುದಿನಾವನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನುವುದರಿಂದ ನಿಮಗೆ ಒಂದುವೇಳೆ ಕಿಡ್ನಿಯ ಸಮಸ್ಯೆ ಇದ್ದರೆ ಅದು ಇನ್ನಷ್ಟು ಹದಗೆಡಬಹುದು. ಪುದೀನಾ ಟೀ ಜನರಲ್ಲಿ ಮೂತ್ರಪಿಂಡದ ಹಾನಿಯನ್ನು ಹೆಚ್ಚಿಸಬಹುದು, ಆದ್ದರಿಂದ ನಿಮ್ಮ ಆಯುರ್ವೇದ ವೈದ್ಯರು ಶಿಫಾರಸು ಮಾಡದ ಹೊರತು ಪುದೀನಾ ಸೇವಿಸಬೇಡಿ. ಪುದಿನಾ ಟೀ ಯಕೃತ್ತಿನ ಹಾನಿಯನ್ನು ಹೆಚ್ಚಿಸಬಹುದು. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಪುದಿನಾ ಚಹಾವನ್ನು ಬಳಸಬೇಡಿ.

ಕೆಲವರಿಗೆ ಪುದೀನಾದಲ್ಲಿ ಕಂಡುಬರುವ ರಾಸಾಯನಿಕ ವಸ್ತುವು ನಿದ್ರಾಹೀನತೆ ಮತ್ತು ತೂಕಡಿಕೆಗೆ ಕಾರಣವಾಗಬಹುದು. ನಿದ್ರೆ ಮತ್ತು ಅರೆನಿದ್ರಾವಸ್ಥೆಯು ನಿದ್ರಾಜನಕ ಔಷಧಿಗಳ ಸಾಮಾನ್ಯ ಅಡ್ಡ ಪರಿಣಾಮಗಳಾಗಿವೆ. ಕೆಲವೊಮ್ಮೆ ತಾಜಾ ಪುದೀನ ಎಲೆಗಳು ಅಥವಾ ಪುದೀನ ಎಣ್ಣೆಯ ಸೇವನೆಯು ಅಲರ್ಜಿಗೆ ಕಾರಣವಾಗಬಹುದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ