Bone Health: ಸಾಫ್ಟ್​ ಡ್ರಿಂಕ್ ಸೇವನೆಯಿಂದ ಮೂಳೆಗಳ ಆರೋಗ್ಯಕ್ಕೆ ಅಪಾಯ

ಮೂಳೆಗಳ ಆರೋಗ್ಯದ ಮೇಲೆ ತಂಪು ಪಾನೀಯಗಳ ಪ್ರಭಾವವು ಕೆಟ್ಟದಾಗಿರುತ್ತದೆ. ಸಾಫ್ಟ್​ ಡ್ರಿಂಕ್​ಗಳಲ್ಲಿರುವ ಸಕ್ಕರೆ, ಸೋಡಿಯಂ ಮತ್ತು ಕೆಫೀನ್ ಅಂಶಗಳಿಂದಾಗಿ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದು ಮತ್ತು ಮೂಳೆ ಮುರಿತದ ಅಪಾಯ ಸಂಭವಿಸುತ್ತದೆ

Bone Health: ಸಾಫ್ಟ್​ ಡ್ರಿಂಕ್ ಸೇವನೆಯಿಂದ ಮೂಳೆಗಳ ಆರೋಗ್ಯಕ್ಕೆ ಅಪಾಯ
ಸಾಫ್ಟ್​ ಡ್ರಿಂಕ್
Follow us
ಸುಷ್ಮಾ ಚಕ್ರೆ
|

Updated on:Oct 22, 2023 | 12:15 PM

ಸಾಫ್ಟ್​ ಡ್ರಿಂಕ್​ ನಮ್ಮ ದಾಹವನ್ನು ನೀಗಿಸುವ ಒಂದು ಪಾನೀಯ. ಅದರಲ್ಲೂ ಬೇಸಿಗೆ ಸಮಯದಲ್ಲಿ ಈ ಸಾಫ್ಟ್​ ಡ್ರಿಂಕ್​ಗಳನ್ನು ಹೆಚ್ಚು ಸೇವಿಸಲಾಗುತ್ತದೆ. ಪಿಜ್ಜಾ, ಬರ್ಗರ್ ಜೊತೆಗೆ ಒಂದು ಕೋಕ್ ಬಾಟಲ್ ಇರದಿದ್ದರೆ ಮಜವೇ ಇರುವುದಿಲ್ಲ. ಆದರೆ, ಈ ತಂಪು ಪಾನೀಯಗಳ ನಿಯಮಿತ ಸೇವನೆಯಿಂದ ನಿಮ್ಮ ಜೀವನಶೈಲಿ ಜಡವಾಗುವುದು ಮಾತ್ರವಲ್ಲದೆ ಮೂಳೆಗಳು ದುರ್ಬಲಗೊಳ್ಳುತ್ತವೆ ಎಂದು ಮೂಳೆ ತಜ್ಞರು ಹೇಳಿದ್ದಾರೆ. ಇದು 40ರಿಂದ 50 ವಯಸ್ಸಿನ ಜನರಲ್ಲಿ ಮೂಳೆ ಖನಿಜ ಸಾಂದ್ರತೆ (BMD) ಕಡಿಮೆಯಾಗಲು ಕಾರಣವಾಗಬಹುದು. ಇದು ನಂತರ ಆಸ್ಟಿಯೊಪೊರೋಸಿಸ್ ಆಗಿ ಬದಲಾಗುತ್ತದೆ.

ದಿನವೂ ತಂಪು ಪಾನೀಯ ಸೇವನೆ ಮಾಡುವುದರಿಂದ ವಯಸ್ಕರಲ್ಲಿ ಮೂಳೆ ಮುರಿತದ ಅಪಾಯ ಹೆಚ್ಚಾಗುತ್ತದೆ ಎಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಪ್ರೊ. ಶಾ ವಲಿಯುಲ್ಲಾ ಹೇಳಿದ್ದಾರೆ. ಅವರು ಚೀನಾದಲ್ಲಿ 7 ವರ್ಷಗಳ ಕಾಲ 17,000 ಜನರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಅಂಶವನ್ನು ಕಂಡುಕೊಂಡಿದ್ದಾರೆ.

ಇದನ್ನೂ ಓದಿ: ಮೂಳೆಗಳನ್ನು ಗಟ್ಟಿಗೊಳಿಸುವ 8 ಬೆಸ್ಟ್ ಯೋಗಾಸನಗಳು ಇಲ್ಲಿವೆ

ಮೂಳೆಗಳ ಆರೋಗ್ಯದ ಮೇಲೆ ತಂಪು ಪಾನೀಯಗಳ ಪ್ರಭಾವವು ಕೆಟ್ಟದಾಗಿರುತ್ತದೆ. ಸಾಫ್ಟ್​ ಡ್ರಿಂಕ್​ಗಳಲ್ಲಿರುವ ಸಕ್ಕರೆ, ಸೋಡಿಯಂ ಮತ್ತು ಕೆಫೀನ್ ಅಂಶಗಳಿಂದಾಗಿ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದು ಮತ್ತು ಮೂಳೆ ಮುರಿತದ ಅಪಾಯ ಸಂಭವಿಸುತ್ತದೆ ಎಂದು ಮೂಳೆ ಶಸ್ತ್ರಚಿಕಿತ್ಸಕ ಡಾ. ಸಂಜಯ್ ಶ್ರೀವಾಸ್ತವ ಹೇಳಿದ್ದಾರೆ.

ತಂಪು ಪಾನೀಯಗಳ ಅಪಾಯಗಳ ಬಗ್ಗೆ, ವಿಶೇಷವಾಗಿ ಅದರಿಂದ ಮೂಳೆಗಳ ಆರೋಗ್ಯಕ್ಕೆ ಆಗುವ ತೊಂದರೆಯ ಬಗ್ಗೆ ನಾವು ಜನರಿಗೆ ಶಿಕ್ಷಣ ನೀಡಬೇಕಾಗಿದೆ ಎಂದು ವಲಿಯುಲ್ಲಾ ಹೇಳಿದ್ದಾರೆ. ಸಾಫ್ಟ್​ ಡ್ರಿಂಕ್​ಗಳ ಬಗ್ಗೆ ಭಾರತೀಯ ಮಹಿಳೆಯರು ಹೆಚ್ಚು ಜಾಗೃತರಾಗಿರಬೇಕು. ಏಕೆಂದರೆ ಪಾಶ್ಚಿಮಾತ್ಯ ದೇಶಗಳಿಗಿಂತ ಒಂದು ದಶಕದ ಮೊದಲೇ ನಮ್ಮ ದೇಶದ ಮಹಿಳೆಯರಿಗೆ ಆಸ್ಟಿಯೊಪೊರೋಸಿಸ್ ಬರುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಋತುಬಂಧದ ವಯಸ್ಸು 47 ಆಗಿದ್ದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ 50 ವರ್ಷಗಳು. ಹೀಗಾಗಿ, ಋತುಬಂಧದ ಸಮಯದಲ್ಲಿ ಮಹಿಳೆಯರ ಮೂಳೆಗಳು ಬೇಗ ಸವೆಯುತ್ತವೆ. ಆದ್ದರಿಂದ ಅದರೊಂದಿಗೆ ಸಾಫ್ಟ್​ ಡ್ರಿಂಕ್ ಸೇವನೆಯನ್ನೂ ಮಾಡಿದರೆ ಮಹಿಳೆಯರ ಮೂಳೆ ದುರ್ಬಲಗೊಳ್ಳುವ ಸಾಧ್ಯತೆ ಮತ್ತಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: ಮೂಳೆಗಳು ಗಟ್ಟಿಯಾಗಿರಲು ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಲು ಮರೆಯದಿರಿ

ಹಾರ್ಮೋನ್ ಈಸ್ಟ್ರೊಜೆನ್ ಅದರ ಸ್ರವಿಸುವಿಕೆಯನ್ನು ನಿಲ್ಲಿಸಿದಾಗ ಹೊಸ ಮೂಳೆಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ; BMD ಕಡಿಮೆಯಾಗುತ್ತದೆ ಮತ್ತು ಆಸ್ಟಿಯೊಪೊರೋಸಿಸ್ ಉಂಟಾಗುತ್ತದೆ. ಆದ್ದರಿಂದ ಬೆನ್ನುನೋವಿನಿಂದ ಬಳಲುತ್ತಿರುವ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ತಮ್ಮ ಆಹಾರದ ಬಗ್ಗೆ ಎಚ್ಚರ ವಹಿಸಬೇಕು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:12 pm, Sun, 22 October 23

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ