World Spine Day: ಬೆನ್ನುನೋವು ಕಾಡುತ್ತಿದೆಯೇ? ಬೆನ್ನುಮೂಳೆಯ ಆರೈಕೆಗೆ 8 ಸಲಹೆಗಳು ಇಲ್ಲಿವೆ
ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು, ಬೆನ್ನುಮೂಳೆಯ ಆರೋಗ್ಯವನ್ನು ರಕ್ಷಿಸಲು ನಿಯಮಿತ ವ್ಯಾಯಾಮ ಬಹಳ ಮುಖ್ಯವಾಗಿದೆ. ಈಜು, ವಾಕಿಂಗ್ ರೀತಿಯ ದೈಹಿಕ ವ್ಯಾಯಾಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ತೂಕವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ. ಆರೋಗ್ಯಕರ ತೂಕವು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬೆನ್ನುಹುರಿಯು 33 ಮೂಳೆಗಳನ್ನು ಹೊಂದಿರುತ್ತದೆ. ಪ್ರತಿ 2 ಮೂಳೆಗಳು 3 ಕೀಲುಗಳಿಂದ ಪರಸ್ಪರ ಸಂಪರ್ಕ ಹೊಂದಿವೆ. ಈ ಕೀಲುಗಳಿಗೆ ಚಲಿಸುತ್ತಲೇ ಇರುವುದೇ ಕೆಲಸ. ಈ ಮೂಳೆಗಳು ಸ್ವಲ್ಪ ಸಮಯದವರೆಗೆ ಚಲಿಸದಿದ್ದರೆ ಜಾಮ್ ಆಗಿ ಬಿಡುತ್ತವೆ. ಹೀಗಾಗಿ, ಬೆನ್ನುಮೂಳೆಯ ಎಲ್ಲಾ ಕೀಲುಗಳನ್ನು ಪ್ರತಿದಿನ ಆ್ಯಕ್ಟಿವ್ ಆಗಿಡಬೇಕಾದುದು ಅಗತ್ಯ. ಯೋಗ, ಜಾಗಿಂಗ್, ವಿವಿಧ ಭಂಗಿಗಳ ಮೂಲಕ ನಿಮ್ಮ ಕೀಲು ಮತ್ತು ಮೂಳೆಗಳನ್ನು ಆ್ಯಕ್ಟಿವ್ ಆಗಿಡಬಹುದು.
ನೀವು ಬೆನ್ನು ಮತ್ತು ಬೆನ್ನುಮೂಳೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಮ್ಮ ಬೆನ್ನುಮೂಳೆ ಮತ್ತು ದೇಹಕ್ಕೆ ಸರಿಹೊಂದುವ ಹಾಸಿಗೆಯನ್ನು ಖರೀದಿಸಿ. ಇದು ನಿಮ್ಮ ದೇಹದ ಭಾರ ಮತ್ತು ಒತ್ತಡವನ್ನು ಸರಿಯಾಗಿ ಎಲ್ಲೆಡೆ ಹರಡುವಂತೆ ನೋಡಿಕೊಳ್ಳುತ್ತದೆ. ಇದರಿಂದ ಬೆನ್ನುಹುರಿಗೆ ಹೆಚ್ಚು ಭಾರ ಬೀಳುವುದಿಲ್ಲ.
ಬೆನ್ನುಮೂಳೆಯು ಮಾನವನ ದೇಹದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಏಕೆಂದರೆ, ಇದು ನಿಮಗೆ ನೇರವಾಗಿ ನಿಲ್ಲಲು ಮತ್ತು ಭಂಗಿಯನ್ನು ಕಾಪಾಡಿಕೊಳ್ಳಲು ಬೆನ್ನುಮೂಳೆ ಸರಿಯಾಗಿರಬೇಕು. ಬೆನ್ನುಮೂಳೆಯು ಸೂಕ್ಷ್ಮವಾದ ಬೆನ್ನುಹುರಿಯನ್ನು ರಕ್ಷಿಸುತ್ತದೆ. ಇದು ನಮ್ಮ ನರಮಂಡಲದ ಪ್ರಮುಖ ಭಾಗವಾಗಿದೆ. ಬೆನ್ನುಮೂಳೆಯಲ್ಲಿನ ಸಣ್ಣದೊಂದು ಸಮಸ್ಯೆಯು ಸಹ ನಿಮ್ಮ ಭಂಗಿಯನ್ನು ತೊಂದರೆಗೊಳಿಸುತ್ತದೆ ಮತ್ತು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿಸುತ್ತದೆ. ಆದ್ದರಿಂದ ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು ಉತ್ತಮ ತೂಕ ಕಾಯ್ದುಕೊಳ್ಳಲು 5 ಟಿಪ್ಸ್ ಇಲ್ಲಿವೆ
ನಮ್ಮಲ್ಲಿ ಕಂಡುಬರುವ ಕೆಲವು ಸಾಮಾನ್ಯ ಬೆನ್ನುಮೂಳೆಯ ಸಮಸ್ಯೆಗಳೆಂದರೆ ಹರ್ನಿಯೇಟೆಡ್ ಡಿಸ್ಕ್ಗಳು, ಸ್ಪೈನಲ್ ಸ್ಟೆನೋಸಿಸ್, ಡಿಜೆನೆರೇಟಿವ್ ಡಿಸ್ಕ್ ಡಿಸೀಸ್, ಸ್ಕೋಲಿಯೋಸಿಸ್ ಮತ್ತು ಅಸ್ಥಿಸಂಧಿವಾತ. ವಯಸ್ಸಾಗುವಿಕೆ, ಕಳಪೆ ಭಂಗಿ, ಸ್ಥೂಲಕಾಯತೆ ಮತ್ತು ಅನುವಂಶಿಕ ಕಾರಣಗಳಂತಹ ಅಂಶಗಳಿಂದ ಈ ಸಮಸ್ಯೆಗಳು ಸಾಮಾನ್ಯವಾಗಿ ಉದ್ಭವಿಸುತ್ತವೆ.
ಬೆನ್ನುಮೂಳೆಯನ್ನು ಆರೋಗ್ಯಕರವಾಗಿಡಲು, ಬೆನ್ನುಮೂಳೆಯ ಆರೋಗ್ಯವನ್ನು ರಕ್ಷಿಸಲು ನಿಯಮಿತ ವ್ಯಾಯಾಮ ಬಹಳ ಮುಖ್ಯವಾಗಿದೆ. ದೈಹಿಕವಾಗಿ ಕ್ರಿಯಾಶೀಲರಾಗಿರುವುದರಿಂದ ಬೆನ್ನುಮೂಳೆಯ ಸಮಸ್ಯೆಗಳನ್ನು ದೂರವಿಡುತ್ತದೆ. ಈಜು, ವಾಕಿಂಗ್ ರೀತಿಯ ದೈಹಿಕ ವ್ಯಾಯಾಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ತೂಕವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ. ಆರೋಗ್ಯಕರ ತೂಕವು ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಸಮತೋಲಿತ ಆಹಾರವು ಮೂಳೆಯ ಆರೋಗ್ಯಕ್ಕೆ ಮುಖ್ಯ.
ಆರೋಗ್ಯಕರ ಬೆನ್ನುಮೂಳೆಗೆ 8 ಸಲಹೆಗಳು ಇಲ್ಲಿವೆ:
1. ಉತ್ತಮ ಭಂಗಿಯನ್ನು ಅಭ್ಯಾಸ ಮಾಡಿ:
ಕುಳಿತುಕೊಳ್ಳುವುದು, ನಿಂತಿರುವುದು ಅಥವಾ ನಡೆಯುವುದು, ಸರಿಯಾದ ಭಂಗಿಯನ್ನು ನಿರ್ವಹಿಸುವುದು ನಿಮ್ಮ ಬೆನ್ನುಮೂಳೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಕಾಲೀನ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
2. ಆ್ಯಕ್ಟಿವ್ ಆಗಿರಿ:
ನಿಮ್ಮ ಬೆನ್ನುಮೂಳೆಯನ್ನು ಬೆಂಬಲಿಸುವ ಸ್ನಾಯುಗಳನ್ನು ಬಲಪಡಿಸಲು ನಿಯಮಿತ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ. ಈಜು, ಯೋಗ ಮತ್ತು ವ್ಯಾಯಾಮಗಳಂತಹ ಚಟುವಟಿಕೆಗಳು ಬೆನ್ನುಮೂಳೆಯ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ಅಣಬೆ ತಿನ್ನುವುದರಿಂದ ಕೆಲವರಿಗೆ ಅಪಾಯವೂ ಆದೀತು!
3. ಸರಿಯಾಗಿ ಭಾರವನ್ನು ಎತ್ತುವುದು:
ಭಾರವಾದ ವಸ್ತುಗಳನ್ನು ಎತ್ತುವಾಗ, ಬೆನ್ನುನೋವಿನ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕಾಲುಗಳ ಮೇಲೆ ಹೆಚ್ಚು ಭಾರ ಹಾಕಿ; ಬೆನ್ನುಮೂಳೆಯ ಮೇಲೆ ಹೆಚ್ಚು ಭಾರ ಹಾಕಬೇಡಿ.
4. ಹೈಡ್ರೇಟೆಡ್ ಆಗಿರಿ:
ಬೆನ್ನುಮೂಳೆಯ ಡಿಸ್ಕ್ಗಳನ್ನು ಸರಿಯಾಗಿ ಹೈಡ್ರೀಕರಿಸಲು ಸಾಕಷ್ಟು ನೀರು ಕುಡಿಯಿರಿ.
5. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ:
ಅಧಿಕ ತೂಕವು ಬೆನ್ನುಮೂಳೆಯನ್ನು ತಗ್ಗಿಸಬಹುದು. ಆದ್ದರಿಂದ ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.
6. ವಿಶ್ರಾಂತಿ ಪಡೆಯಿರಿ:
ಬೆನ್ನುಮೂಳೆಯ ಮೇಲೆ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡಲು ಸ್ಟ್ರೆಚಿಂಗ್ ಮತ್ತು ವಿಶ್ರಾಂತಿಯನ್ನು ಆಗಾಗ ಮಾಡುತ್ತಿರಿ.
7. ಧೂಮಪಾನವನ್ನು ತ್ಯಜಿಸಿ:
ಧೂಮಪಾನವು ಬೆನ್ನುಮೂಳೆಯ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೇ, ನಿಮ್ಮ ದೇಹವು ಗುಣಪಡಿಸುವ ಸಾಮರ್ಥ್ಯವನ್ನು ತಡೆಯುತ್ತದೆ.
8. ಸರಿಯಾಗಿ ನಿದ್ರೆ ಮಾಡಿ:
ಮಲಗುವಾಗ ಬೆನ್ನುಮೂಳೆಯ ಸರಿಯಾದ ಜೋಡಣೆಯನ್ನು ಕಾಪಾಡಿಕೊಳ್ಳಲು ಸರಿಯಾದ ಹಾಸಿಗೆ ಮತ್ತು ದಿಂಬನ್ನು ಬಳಸಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ