Health Tips: ಹೆಚ್ಚು ಟೊಮೆಟೊ ತಿನ್ನಬೇಡಿ; ದುಷ್ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ

|

Updated on: Aug 02, 2024 | 8:30 PM

ಅತಿಯಾದರೆ ಅಮೃತವು ವಿಷವೆಂಬಂತೆ ಟೊಮೆಟೊದ ಅತಿಯಾದ ಸೇವನೆ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮವನ್ನುಂಟು ಮಾಡಬಹುದು. ಇದಲ್ಲದೇ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಟೊಮೆಟೊ ಸೇವನೆಯಿಂದ ದೂರವಿರಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

Health Tips: ಹೆಚ್ಚು ಟೊಮೆಟೊ ತಿನ್ನಬೇಡಿ; ದುಷ್ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ
Follow us on

ಟೊಮೆಟೊಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳು ಲಭಿಸುತ್ತದೆ. ದೇಹಕ್ಕೆ ಇದು ಪ್ರಯೋಜನಕಾರಿಯಾಗಿರುವುದರಿಂದ, ದಿನಕ್ಕೆ ಒಮ್ಮೆಯಾದರೂ ಟೊಮೆಟೊವನ್ನು ಆಹಾರದಲ್ಲಿ ಬಳಸಬೇಕೆಂದು ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಅತಿಯಾದರೆ ಅಮೃತವು ವಿಷವೆಂಬಂತೆ ಟೊಮೆಟೊದ ಅತಿಯಾದ ಸೇವನೆ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮವನ್ನುಂಟು ಮಾಡಬಹುದು. ಕೆಲವು ಆರೋಗ್ಯ ಸಮಸ್ಯೆಗಳಿರುವವರು ಟೊಮೆಟೊ ಸೇವನೆಯಿಂದ ದೂರವಿರಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

ಆಮ್ಲೀಯತೆ:

ಟೊಮ್ಯಾಟೋ ನೈಸರ್ಗಿಕವಾಗಿ ಹೆಚ್ಚಿನ ಆಮ್ಲವನ್ನು ಹೊಂದಿರುತ್ತದೆ. ಈ ಕಾರಣದಿಂದಾಗಿ, ಇದು ಅಡುಗೆಯಲ್ಲಿ ಹುಳಿ ರುಚಿಯನ್ನು ನೀಡುತ್ತದೆ. ಹೆಚ್ಚು ಟೊಮೆಟೊ ತಿನ್ನುವುದರಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು ಮತ್ತು ಎದೆಯುರಿ, ವಾಯು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಈಗಾಗಲೇ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ಟೊಮೆಟೊವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ಮೂತ್ರಪಿಂಡದ ಕಲ್ಲುಗಳು:

ಕಿಡ್ನಿ ಸಮಸ್ಯೆ ಇರುವವರು ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು. ಕಾರಣ ಟೊಮೆಟೊದಲ್ಲಿ ಆಕ್ಸಲೇಟ್ ಅಧಿಕವಾಗಿರುತ್ತದೆ. ದೇಹದಲ್ಲಿ ಹೆಚ್ಚುವರಿ ಶೇಖರಣೆ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಿಡ್ನಿ ಮತ್ತು ಪಿತ್ತಕೋಶದ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಟೊಮೆಟೊ ಸೇವಿಸಬೇಕು.

ಕೀಲು ನೋವು:

ಸಂಧಿವಾತದಂತಹ ಗಂಭೀರ ಸಮಸ್ಯೆ ಇರುವವರು ಟೊಮೆಟೊ ತಿನ್ನುವುದನ್ನು ತಪ್ಪಿಸಬೇಕು. ಇದರಲ್ಲಿರುವ ಹುಳಿಯು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ಆದ್ದರಿಂದ, ನೀವು ಸಂಧಿವಾತ ಹೊಂದಿದ್ದರೆ ಟೊಮೆಟೊ ಸೇವನೆಯಿಂದ ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ