ಹೃದಯಾಘಾತ ತಡೆಯಲು ಈ ಸರಳ ಆರೋಗ್ಯಕರ ಪಾನೀಯವನ್ನು ಕುಡಿಯಿರಿ, ಡಾ. ಗೌರಿ ಸಲಹೆ ಇಲ್ಲಿದೆ

ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಯಾಕೆ ಈ ರೀತಿಯಾಗುತ್ತಿದೆ? ಸಾಮಾನ್ಯವಾಗಿ ಮೊದಲು 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಇದು ಕಂಡು ಬರುತ್ತಿತ್ತು, ಬಿಪಿ, ಮಧುಮೇಹ ಇವೆಲ್ಲವೂ ಚಿಕ್ಕ ವಯಸ್ಸಿನವರಲ್ಲಿ ಕಂಡು ಬರುತ್ತಿರಲಿಲ್ಲ. ಆದರೆ ಈಗ ವಯಸ್ಸಿನ ಮಿತಿ ಇಲ್ಲದಂತಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಹೃದಯಾಘಾತವನ್ನು ತಡೆಯುವುದು ಹೇಗೆ? ಇಲ್ಲಿದೆ ವೈದ್ಯರ ಸಲಹೆ.

ಹೃದಯಾಘಾತ ತಡೆಯಲು ಈ ಸರಳ ಆರೋಗ್ಯಕರ ಪಾನೀಯವನ್ನು ಕುಡಿಯಿರಿ, ಡಾ. ಗೌರಿ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 03, 2024 | 12:43 PM

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಯಾಕೆ ಈ ರೀತಿಯಾಗುತ್ತಿದೆ? ಸಾಮಾನ್ಯವಾಗಿ ಮೊದಲು 60 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಇದು ಕಂಡು ಬರುತ್ತಿತ್ತು, ಬಿಪಿ, ಮಧುಮೇಹ ಇವೆಲ್ಲವೂ ಚಿಕ್ಕ ವಯಸ್ಸಿನವರಲ್ಲಿ ಕಂಡು ಬರುತ್ತಿರಲಿಲ್ಲ. ಆದರೆ ಈಗ ವಯಸ್ಸಿನ ಮಿತಿ ಇಲ್ಲದಂತಾಗಿದೆ. ಹಾಗಾದರೆ ಇದಕ್ಕೆ ಕಾರಣವೇನು? ಹೃದಯಾಘಾತವನ್ನು ತಡೆಯುವುದು ಹೇಗೆ? ಇಲ್ಲಿದೆ ವೈದ್ಯರ ಸಲಹೆ.

ಡಾ. ಗೌರಿ ಅವರು ಖಾಸಗಿ ವಾಹಿನಿಯೊಂದರಲ್ಲಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ತಡೆಗಟ್ಟಲು ಕೆಲವು ಆರೋಗ್ಯಕರ ಸಲಹೆಗಳನ್ನು ನೀಡಿದ್ದು ಇದರ ಜೊತೆಗೆ ಒಂದು ಆರೋಗ್ಯಕರ ಪಾನೀಯವನ್ನು ತಯಾರು ಮಾಡುವ ವಿಧಾನವನ್ನು ತಿಳಿಸಿದ್ದಾರೆ. ಇದನ್ನು ಬಳಕೆ ಮಾಡುವುದರಿಂದ ಹೃದಯಾಘಾತ ಮತ್ತು ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ಬಿಪಿ, ಮಧುಮೇಹವನ್ನು ತಡೆಯಬಹುದು ಎಂದಿದ್ದಾರೆ.

ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು:

ಚೆಕ್ಕೆ

ಅರಿಶಿನದ ಕೊಂಬು

ಅರಳಿ ಎಲೆ

ನಿಂಬೆ ಹಣ್ಣು

ಜೇನುತುಪ್ಪ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಅರಿಶಿನದ ಕೊಂಬನ್ನು ಕುಟ್ಟಿ ಕೊಂಡು, ಅದಕ್ಕೆ ಅರಿಶಿನ ಇರುವ ಪ್ರಮಾಣದಲ್ಲಿ ಚಕ್ಕೆಯನ್ನು ಸೇರಿಸಿ ಇವೆರಡನ್ನು ಮಿಕ್ಸಿಯಲ್ಲಿ ಸಣ್ಣಗೆ ಪುಡಿ ಮಾಡಿಕೊಳ್ಳಿ, ಬಳಿಕ ಒಂದರಿಂದ ಎರಡು ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ, ಮೂರು ಅರಳಿ ಎಲೆಯನ್ನು ಸೇರಿಸಿ ಅದಕ್ಕೆ ಅರ್ಧ ನಿಂಬೆ ಹಣ್ಣನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ, ಇದು ಚೆನ್ನಾಗಿ ಕುದಿಸಿದ ಬಳಿಕ ಅದನ್ನು ಪಾತ್ರೆಗೆ ಸೋಸಿಕೊಳ್ಳಿ, ತಣಿದ ನಂತರ ನಿಮಗೆ ಬೇಕಾಗುವಷ್ಟು ಜೇನುತುಪ್ಪ ಸೇರಿಸಿ ಕುಡಿಯಿರಿ.

ಯಾರು, ಯಾವಾಗ ಸೇವನೆ ಮಾಡಬೇಕು?

ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ನಮ್ಮ ಆಹಾರ ಶೈಲಿಯಿಂದ. ಹೃದಯದಲ್ಲಿ ಬ್ಲಾಕ್ ಗಳು ಆಗುವುದು, ರಕ್ತ ಪರಿಚಲನೆ ಸರಿಯಾಗಿ ಆಗದಿರುವುದು, ಚಿಕ್ಕ ವಯಸ್ಸಿನಲ್ಲಿಯೇ ಡಯಾಬಿಟಿಸ್ ಬರುವಂತದ್ದು, ಬಿಪಿ ಜಾಸ್ತಿಯಾಗುವಂತದ್ದು, ಇವೆಲ್ಲವನ್ನು ನಾವಾಗಿಯೇ ತಂದುಕೊಳ್ಳುತ್ತಿರುವಂತದ್ದು, ಹಾಗಾಗಿ ಇಲ್ಲಿ ನೀಡಿರುವ ಕಷಾಯ ಅಥವಾ ಪಾನೀಯವನ್ನು ಸೆವನೆ ಮಾಡುವುದರಿಂದ ಇದರಲ್ಲಿ ಬಳಸಲಾದ ಅರಿಶಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹದ ಸಮಸ್ಯೆ ಬರುವುದಿಲ್ಲ. ದಾಲ್ಚಿನ್ನಿ ಚಕ್ಕೆ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಿಕ್ಕಿರುವಂತಹ ವರ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಅರಳಿ ಎಲೆ ಭೂಮಿ ಮೇಲಿನ ಸಂಜೀವಿನಿ ಎನ್ನಬಹುದು. ಹಾಗಾಗಿ ಈ ಕಷಾಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲಾ ರೀತಿಯ ಪದಾರ್ಥಗಳಿವೆ. ಇದನ್ನು ಕೇವಲ ಹೃದಯದ ಸಮಸ್ಯೆ ಇರುವವರು ಮಾತ್ರವಲ್ಲ ಬಿಪಿ, ಮಧುಮೇಹ ಇರುವವರು ಕೂಡ ಸೇವನೆ ಮಾಡಬಹುದು. ಅಲ್ಲದೆ ಕಫ, ಶೀತ ಇದ್ದವರು ಕೂಡ ಇದನ್ನು ಸೇವನೆ ಮಾಡಬಹುದು. ಇದನ್ನು ದಿನದಲ್ಲಿ ಒಂದು ಬಾರಿ ಮಾತ್ರ ಕುಡಿಯಬೇಕು ಅಲ್ಲದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಯಾವುದೇ ರೀತಿಯ ಸಮಸ್ಯೆ ಇಲ್ಲದವರು ಕೂಡ ಇದನ್ನು ನಿಯಮಿತವಾಗಿ ಸೇವನೆ ಮಾಡಬಹುದು.

ಇದನ್ನೂ ಓದಿ: ಈ ಹಣ್ಣು ಸೇವನೆ ಮಾಡಿ ಎಲ್ಲಾ ಕಾಯಿಲೆಗೂ ಗುಡ್ ಬೈ ಹೇಳಿ

ಕಾರಣವೇನು?

ಡಾ. ಗೌರಿ ಅವರು ಹೇಳುವ ಪ್ರಕಾರ ಚಿಕ್ಕ ವಯಸ್ಸಿನಲ್ಲಿ ಬೇರೆ ಬೇರೆ ರೀತಿಯ ಕಾಯಿಲೆಗಳು ಕಂಡು ಬರಲು ನಮ್ಮ ಆಹಾರ ಪದ್ದತಿಯೇ ಕಾರಣ. ಹಿಂದೆ ಬೆಣ್ಣೆ ಕಾಯಿಸಿ ತುಪ್ಪ ಮಾಡಿ ಅದನ್ನು ಸೇವನೆ ಮಾಡುತ್ತಿದ್ದರು ಏಕೆಂದರೆ ತುಪ್ಪ ಒಳ್ಳೆಯ ಕೊಲೆಸ್ಟ್ರಾಲ್ ಜಾಸ್ತಿ ಮಾಡುತ್ತದೆ. ಇದು ದೇಹದಲ್ಲಿ ಇದ್ದಾಗ ಮಾತ್ರ ಕೆಲಸಗಳು ಸರಿಯಾಗಿ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ತಾವು ದಪ್ಪವಾಗುತ್ತೇವೆ ಎಂಬ ಭಯ ಕಾಡುತ್ತಿರುತ್ತದೆ. ಹಾಗಾಗಿ ನಾವು ತೆಳ್ಳಗಾಗಬೇಕು ಎಂದು ಯೋಚಿಸುತ್ತಾರೆ. ನಮ್ಮ ದೇಹಕ್ಕೆ ಯಾವುದು ಒಳ್ಳೆಯದು? ಯಾವ ರೀತಿಯ ಆಹಾರವನ್ನು ಸೇವನೆ ಮಾಡಬೇಕು ಎಂಬ ಯೋಚನೆ ಇರುವುದಿಲ್ಲ. ದಪ್ಪ ಆಗಬಹುದು ಎಂಬ ಭಯದಿಂದ ತುಪ್ಪ ಮತ್ತು ತೆಂಗಿನಕಾಯಿಯನ್ನು ತಿನ್ನುವುದನ್ನು ಬಿಡುತ್ತಾರೆ. ಆದರೆ ಹಸಿಯಾದ ತೆಂಗಿನಕಾಯಿಯನ್ನು ಸೇವನೆ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಜಾಸ್ತಿಯಾಗುವುದರಿಂದ ನಮ್ಮ ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ನಮ್ಮ ಪಚನಕ್ರಿಯೆಗೆ ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ. ಆಗ ನಾವು ತಿಂದ ಆಹಾರ ರಕ್ತಗತವಾಗುತ್ತದೆ. ಹಾಗಾಗಿ ಇದರ ಸರಬರಾಜು ಸರಿಯಾದ ಪ್ರಮಾಣದಲ್ಲಿ ಆದಾಗ ಮಾತ್ರ ಹೃದಯ ರಕ್ತ ಪಂಪ್ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಇದು ಒಂದು ರೀತಿಯ ಸೈಕಲ್. ಹಾಗಾಗಿ ನಮ್ಮ ಆಹಾರ ಸೇವನೆ ಸರಿಯಾದ ರೀತಿಯಲ್ಲಿರಬೇಕು” ಎಂದು ಅವರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ