Sign In

By signing in or creating an account, you agree with Associated Broadcasting Company's Terms & Conditions and Privacy Policy.

Passion Fruit Benefits: ಈ ಹಣ್ಣು ಸೇವನೆ ಮಾಡಿ ಎಲ್ಲಾ ಕಾಯಿಲೆಗೂ ಗುಡ್ ಬೈ ಹೇಳಿ

ಪ್ಯಾಷನ್ ಫ್ರೂಟ್‌ ನಲ್ಲಿ ವಿಟಮಿನ್, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಬೊಜ್ಜಿನಂತಹ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ, ಕಿವಿ, ಆವಕಾಡೊ, ಬ್ಲೂಬೆರ್ರಿಯಂತಹ ಹಣ್ಣುಗಳ ಸೇವನೆಯು ಜನರಲ್ಲಿ ಹೆಚ್ಚಾಗಿದೆ. ಅಂತೆಯೇ, ಪ್ಯಾಷನ್ ಫ್ರೂಟ್ ಹಣ್ಣಿನ ಬೇಡಿಕೆಯೂ ಹೆಚ್ಚಾಗಿದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

Passion Fruit Benefits: ಈ ಹಣ್ಣು ಸೇವನೆ ಮಾಡಿ ಎಲ್ಲಾ ಕಾಯಿಲೆಗೂ ಗುಡ್ ಬೈ ಹೇಳಿ
ಪ್ಯಾಷನ್ ಫ್ರೂಟ್‌
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 03, 2024 | 10:03 AM

ಪ್ಯಾಷನ್ ಫ್ರೂಟ್‌ ಬಗ್ಗೆ ನೀವು ಕೇಳಿರಬಹುದು. ಈ ಹಣ್ಣು ವಿಟಮಿನ್, ಖನಿಜ ಮತ್ತು ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಬೊಜ್ಜಿನಂತಹ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ, ಕಿವಿ, ಆವಕಾಡೊ, ಬ್ಲೂಬೆರ್ರಿಯಂತಹ ಹಣ್ಣುಗಳ ಸೇವನೆಯು ಜನರಲ್ಲಿ ಹೆಚ್ಚಾಗಿದೆ. ಅಂತೆಯೇ, ಪ್ಯಾಷನ್ ಫ್ರೂಟ್ ಹಣ್ಣಿನ ಬೇಡಿಕೆಯೂ ಹೆಚ್ಚಾಗಿದೆ. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ.

ಪ್ರಯೋಜನಗಳೇನು?

ಪ್ಯಾಶನ್ ಫ್ರೂಟ್ ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಏಕೆಂದರೆ ಇದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದ್ದು ಈ ಕಾರಣದಿಂದಾಗಿ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ಇದಲ್ಲದೆ, ಇದು ಫೈಬರ್ ನಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.

ಈ ಹಣ್ಣಿನಲ್ಲಿ ಪೊಟ್ಯಾಸಿಯಮ್ ಮತ್ತು ಎಲೆಕ್ಟ್ರೋಲೈಟ್ ಗಳಿವೆ. ಇವು ಹೃದಯವನ್ನು ಆರೋಗ್ಯವಾಗಿರಿಸುತ್ತವೆ. ಇದಲ್ಲದೆ, ಇದರಲ್ಲಿರುವ ಫೈಬರ್ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪಿಸೆಟನಾಲ್ ಮತ್ತು ಸಿರ್ಪುಸಿನ್ ಬಿ ಸಂಯುಕ್ತವು ಹೃದ್ರೋಗಗಳನ್ನು ನಿವಾರಿಸುತ್ತದೆ. ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಹಿಂದೂ ವಿವಾಹ ಪದ್ದತಿಯಲ್ಲಿ ವಧುವಿಗೆ ಕಾಲುಂಗುರ ಏಕೆ ತೊಡಿಸುತ್ತಾರೆ? ಇದರ ಹಿಂದಿದೆ ಆರೋಗ್ಯ ಪ್ರಯೋಜನ

ಪ್ಯಾಶನ್ ಫ್ರೂಟ್ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವ ಮೂಲಕ, ದೇಹದ ಚಯಾಪಚಯ ಕ್ರಿಯೆ ವೇಗವಾಗಿ ಆಗುತ್ತದೆ, ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.

ಈ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೆ ಇದರಲ್ಲಿ ವಿಟಮಿನ್ ಎ, ಸಿ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ದೇಹವನ್ನು ಅನೇಕ ಕಾಲೋಚಿತ ಕಾಯಿಲೆಗಳಿಂದ ರಕ್ಷಿಸುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ