Home remedies: ಲೂಸ್ ಮೋಷನ್ ಕಡಿಮೆ ಮಾಡಲು ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ
ಭೇದಿ ಸಮಸ್ಯೆಯನ್ನು ಅನುಭವಿಸಿದವರಿಗೆ ಗೊತ್ತು, ಇದರ ಯಾತನೆ ಯಾರಿಗೂ ಬೇಡ ಎನಿಸುತ್ತದೆ, ಪದೇ ಪದೇ ಟಾಯ್ಲೆಟ್‌ಗೆ ಹೋಗಿ ಬರಬೇಕಾಗುವುದರಿಂದ ಹೊಟ್ಟೆಯಲ್ಲಿ ನೋವು, ನಿಶಕ್ತಿ ಕಾಡುತ್ತದೆ. ಈ ಎಲ್ಲಾ ಸಮಸ್ಯೆಗೆ ಮುಖ್ಯ ಕಾರಣ ಅತಿಸಾರ. ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಕಾಯಿಲೆಯಾಗಿದೆ. ಆದರೆ ಇದನ್ನು ಕಡಿಮೆ ಮಾಡಲು ತಕ್ಷಣ ವೈದ್ಯರ ಬಳಿ ಹೋಗಲಾರದಂತ ಸಂದರ್ಭದಲ್ಲಿ ಮನೆಯಲ್ಲಿ ಕೆಲವು ಮದ್ದುಗಳನ್ನು ಮಾಡುವುದರಿಂದ ಇದನ್ನು ತಡೆಯಬಹುದು. ಹಾಗಾದರೆ ಇದಕ್ಕೆ ಯಾವ ರೀತಿಯ ಮನೆಮದ್ದುಗಳು ಒಳ್ಳೆಯದು? ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
ಲೂಸ್ ಮೋಷನ್ ಅಥವಾ ಭೇದಿ ಸಮಸ್ಯೆ ಒಮ್ಮೆ ಆರಂಭವಾದರೆ ಅದನ್ನು ಕಡಿಮೆ ಮಾಡುವುದು ಅಷ್ಟು ಸುಲಭವಲ್ಲ. ಈ ಸಮಸ್ಯೆಯನ್ನು ಅನುಭವಿಸಿದವರಿಗೆ ಗೊತ್ತು, ಇದರ ಯಾತನೆ ಯಾರಿಗೂ ಬೇಡ ಎನಿಸುತ್ತದೆ, ಪದೇ ಪದೇ ಟಾಯ್ಲೆಟ್‌ಗೆ ಹೋಗಿ ಬರಬೇಕಾಗುವುದರಿಂದ ಹೊಟ್ಟೆಯಲ್ಲಿ ನೋವು, ನಿಶ್ಯಕ್ತಿ ಕಾಡುತ್ತದೆ. ಈ ಎಲ್ಲಾ ಸಮಸ್ಯೆಗೆ ಮುಖ್ಯ ಕಾರಣ ಅತಿಸಾರ. ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಕಾಯಿಲೆಯಾಗಿದೆ. ಆದರೆ ಇದನ್ನು ಕಡಿಮೆ ಮಾಡಲು ತಕ್ಷಣ ವೈದ್ಯರ ಬಳಿ ಹೋಗಲಾರದಂತ ಸಂದರ್ಭದಲ್ಲಿ ಮನೆಯಲ್ಲಿ ಕೆಲವು ಮದ್ದುಗಳನ್ನು ಮಾಡುವುದರಿಂದ ಇದನ್ನು ತಡೆಯಬಹುದು. ಹಾಗಾದರೆ ಇದಕ್ಕೆ ಯಾವ ರೀತಿಯ ಮನೆಮದ್ದುಗಳು ಒಳ್ಳೆಯದು? ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
- ಸ್ವಲ್ಪ ಅಕ್ಕಿಯನ್ನು ತೊಳೆದು ನೀರಿನಲ್ಲಿ ಹಾಕಿ ಅದನ್ನು ಚೆನ್ನಾಗಿ ಕುದಿಸಿ ಬಳಿಕ ಆ ನೀರನ್ನು ಕುಡಿಯಿರಿ. ಇದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.
- ಸ್ವಲ್ಪ ಮೆಂತೆಯನ್ನು ಜಗಿದು ನೀರಿನ ಜೊತೆಗೆ ನುಂಗಿರಿ. ಇದು ತಕ್ಷಣ ಭೇದಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ನುಗ್ಗೆ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನು ಒಂದು ಚಿಕ್ಕ ಚಮಚದಲ್ಲಿ ಕೊಂಚ ಜೇನುತುಪ್ಪ ಬೆರೆಸಿ ಸೇವನೆ ಮಾಡಿ ಹೊಟ್ಟೆಯಲ್ಲಿ ಗುಡುಗುಡು ಮತ್ತು ಅತಿಸಾರ ಇದ್ದರೆ ಈ ವಿಧಾನ ಅನುಸರಿಸುವುದು ತುಂಬಾ ಒಳ್ಳೆಯದು.
- ಎಳನೀರಿಗೆ ಅತಿಸಾರ ಕಡಿಮೆ ಮಾಡುವ ಗುಣವಿದೆ. ಹಾಗಾಗಿ ಭೇದಿ ಸಮಸ್ಯೆ ಆದಾಗ ದಿನಕ್ಕೆ ಒಂದೆರಡು ಎಳನೀರನ್ನು ಕುಡಿಯಿರಿ. ಇದರ ಜೊತೆಗೆ ನೀರನ್ನು ಕೂಡ ಕುಡಿಯಿರಿ.
- ಈ ಸಮಯದಲ್ಲಿ ಮಜ್ಜಿಗೆ ಕುಡಿಯುವುದು ಒಳ್ಳೆಯದು. ಏಕೆಂದರೆ ಇದನ್ನು ಕುಡಿಯುವುದರಿಂದ ಒಳ್ಳೆಯ ಬ್ಯಾಕ್ಟೀರಿಯಾ ಜಾಸ್ತಿಯಾಗಿ ಕೆಟ್ಟ ಬ್ಯಾಕ್ಟೀರಿಯಾ ಕಡಿಮೆ ಆಗುತ್ತದೆ.
- ಈ ಸಮಯದಲ್ಲಿ ಹೆಚ್ಚು ಎಣ್ಣೆ ಅಂಶವಿರುವ ಆಹಾರಗಳನ್ನು ಸೇವನೆ ಮಾಡಬೇಡಿ. ಇದು ಭೇದಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
- ಭೇದಿ ಸಮಸ್ಯೆಯಿದ್ದಾಗ ಶುಂಠಿಯನ್ನು ಚೆನ್ನಾಗಿ ಜಗಿದು ತಿನ್ನಿ.
- ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಿಗೆ ಬ್ಲೂಬೆರಿ ಟೀ ಉತ್ತಮ ಪರಿಹಾರವಾಗಿದೆ ಇದು ಅತಿಸಾರವನ್ನೂ ಕೂಡ ತಡೆಯುತ್ತದೆ.
ಸೂಚನೆ: ಇದು ಸಾಮಾನ್ಯ ಆರೋಗ್ಯ ಸಲಹೆಗಳಾಗಿದ್ದು, ಭೇದಿ ಸಮಸ್ಯೆ ಹೆಚ್ಚಾದಲ್ಲಿ ವೈದ್ಯರನ್ನು ನೇರವಾಗಿ ಭೇಟಿ ಮಾಡಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ