ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಆಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಹೊಟ್ಟೆಯಲ್ಲಿನ ಗ್ರಂಥಿಗಳಲ್ಲಿ ಅಧಿಕ ಆಮ್ಲ ಉತ್ಪತ್ತಿಯಾಗುವುದರಿಂದ ಎದೆ ಉರಿಯುವುದು, ಗಂಟಲು ಕಟ್ಟುವ ಲಕ್ಷಣಗಳು ಕಂಡು ಬರುತ್ತದೆ. ಇದೇ ಆಸಿಡಿಟಿ ಸಮಸ್ಯೆ. ಹೊರಗಿನ ತಿಂಡಿ, ಪೌಷ್ಠಿಕ ಅಹಾರದ ಕೊರತೆ ಹಾಗೂ ಸಯಕ್ಕೆ ಸರಿಯಾಗಿ ಆಹಾರ ಹೊಟ್ಟೆಗೆ ಬೀಳದಿರುವುದರಿಂದ ಇಂತಹ ಸಮಸ್ಯೆಗಳು ಕಾಡುತ್ತವೆ. ಹೆಚ್ಚು ಹೊತ್ತು ಹಸಿವಿನಿಂದ ಇದ್ದರೆ ಹೊಟ್ಟೆಯ ಗ್ರಂಥಿಗಳಲ್ಲಿ ಆ್ಯಸಿಡ್ ಅಂಶವು ಉತ್ಪತ್ತಿಯಾಗುತ್ತದೆ.
ಪ್ರತಿನಿತ್ಯ ಯೋಗಾಭ್ಯಾಸ ರೂಢಿಯಲ್ಲಿಟ್ಟುಕೊಂಡರೆ ಅದೆಷ್ಟೋ ಸಮಸ್ಯೆಗಳಿಂದ ದೂರವಿರಬಹುದು. ದೇಹದ ಸದೃಢತೆಗೆ ಮತ್ತು ಹೆಚ್ಚು ಚಟುವಟಿಕೆಯಿಂದ ಕೂಡಿರಲು ಯೋಗಾಭ್ಯಾಸ ಉತ್ತಮ. ಯೋಗಾಸನದ ಮೂಲಕ ಆಸಿಡಿಟಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆಸಿಡಿಟಿ ಸಮಸ್ಯೆಗೆ ಯಾವ ಆಸನಗಳು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
ಪಶ್ಚಿಮೋತ್ತಾಸನ
ಕಿಬ್ಬೊಟ್ಟೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಪಶ್ಚಿಮೋತ್ತಾಸನ ಒಳ್ಳೆಯ ಯೋಗಾಸನವಾಗಿದೆ. ಕಿಬ್ಬಟ್ಟೆಯಲ್ಲಿನ ಕೊಬ್ಬು ನಿವಾರಣೆಗೆ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ಮಹಿಸುವಂತೆ ನೋಡಿಕೊಳ್ಳುತ್ತದೆ.
ಹಲಾಸನ
ಈ ಪದವು ಸಂಸ್ಕೃತ ಭಾಷೆಯಿಂದ ಬಂದಿದೆ. ಹಲಾ ಎಂದರೆ ಸಂಸ್ಕೃತದಲ್ಲಿ ನೇಗಿಲು ಎಂದರ್ಥ. ಹಾಗೆಯೇ ಆಸನ ಎಂದರೆ ಭಂಗಿ ಎಂದರ್ಥ. ಹಲಾಸನ ಅಥವಾ ನೇಗಿಲು ಭಂಗಿ ಎಂದೂ ಕರೆಯುತ್ತಾರೆ. ನಮ್ಮ ದೇಹದಲ್ಲಿ ಶಕ್ತಿ ಮತ್ತು ಬೆನ್ನಿ ಸ್ನಾಯುಗಳಲ್ಲಿನ ಒತ್ತಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಈ ಆಸನದಿಂದ ತೂಕ ಇಳಿಸಿಕೊಳ್ಳಬಹುದು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ವಜ್ರಾಸನ
ಅತಿ ಸುಲಭದ ಯೋಗಾಸನದಲ್ಲಿ ವಜ್ರಾಸನವೂ ಒಂದು. ದೇಹದಲ್ಲಿನ ಆ್ಯಸಿಡ್ ಉತ್ಪತ್ತಿಯ ನಿವಾರಣೆಗೆ ಇದು ಸಹಾಯ ಮಾಡುತ್ತದೆ. ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಹೊಟ್ಟೆ ಉಬ್ಬರ, ಕಿಬ್ಬೊಟ್ಟೆಯ ಅಸ್ವಸ್ಥತೆಯಂತಹ ಸಮಸ್ಯೆಗೆ ಪರಿಹಾರವಾಗಿ ಕೆಲಸ ಮಾಡುತ್ತದೆ. ಹೆಚ್ಚು ಉಸಿರಾಟಕ್ಕೆ ಸಂಬಂಧಿಸಿದ ಧ್ಯಾನ ಭಂಗಿ ಇದಾಗಿದೆ.
ಪವನಮುಕ್ತಾಸನ
ದೇಹದಲ್ಲಿ ಆ್ಯಸಿಡ್ ಉತ್ಪತ್ತಿಯನ್ನು ಕಡಿಮೆ ಮಾಡಲು ಇದು ಉತ್ತಮ ಭಂಗಿಯಾಗಿದೆ. ಮಲಬದ್ಧತೆ ಸಮಸ್ಯೆಯಿಂದ ಹೊರಬರಲು ಈ ಯೋಗಾಸನ ಒಳ್ಳೆಯದು. ಜೀರ್ಣ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಆಹಾರ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಹೊಟ್ಟೆಯುಬ್ಬರದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯವಾಗುತ್ತದೆ ಹಾಗೂ ಸೊಂಟದ ಕೀಲುಗಳಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ. ಬೆನ್ನು ನೋವು ಮತ್ತು ಬೆನ್ನಿನ ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಆಸನವಾಗಿದೆ.
ಇದನ್ನೂ ಓದಿ:
ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ
ಲಾಕ್ಡೌನ್ ಸಮಯದಲ್ಲಿ ಯೋಗಾಭ್ಯಾಸ; ನಾಲ್ಕು ಸರಳ ಯೋಗ ಭಂಗಿಗಳನ್ನು ನಿತ್ಯವು ಅನುಸರಿಸಿ