ಲಾಕ್​ಡೌನ್​ ಸಮಯದಲ್ಲಿ ಯೋಗಾಭ್ಯಾಸ; ನಾಲ್ಕು ಸರಳ ಯೋಗ ಭಂಗಿಗಳನ್ನು ನಿತ್ಯವು ಅನುಸರಿಸಿ

ಲಾಕ್​ಡೌನ್​ ಸಮಯದಲ್ಲಿ ಯೋಗಾಭ್ಯಾಸ; ನಾಲ್ಕು ಸರಳ ಯೋಗ ಭಂಗಿಗಳನ್ನು ನಿತ್ಯವು ಅನುಸರಿಸಿ
ಪ್ರಾತಿನಿಧಿಕ ಚಿತ್ರ

ಲಾಕ್​ಡೌನ್ ಆಗಿರುವುದರಿಂದ ಜಿಮ್ ಅಥವಾ ಇನ್ನಿತರ ಸ್ಥಳಗಳಿಗೆ ಹೋಗುವುದಕ್ಕೆ ಅವಕಾಶ ಇಲ್ಲ. ಅದರಲ್ಲೂ ಹೆಚ್ಚಿನವರಿಗೆ ವರ್ಕ್ ಫ್ರಂ ಹೋಮ್ ನೀಡಿರುವುದರಿಂದ ಹೆಚ್ಚು ಒತ್ತಡ ಇರುತ್ತದೆ. ಹೀಗಾಗಿ ಮನೆಯಲ್ಲೇ ಒಂದಷ್ಟು ಸಮಯವನ್ನು ದೇಹದ ಆರೋಗ್ಯ ರಕ್ಷಣೆಗಾಗಿ ಸೀಮಿತವಾಗಿಟ್ಟುಕೊಳ್ಳುವುದು ಅನಿವಾರ್ಯ.

preethi shettigar

|

Jun 01, 2021 | 1:16 PM

ದೇಹವು ಸದೃಢವಾಗಿರಲು ಯೋಗ ಭರವಸೆ ನೀಡುತ್ತದೆ. ಅದರಲ್ಲೂ ಸಾಂಕ್ರಾಮಿಕ ಕಾಯಿಲೆ ಹರಡುವ ಈ ಕಾಲಘಟ್ಟದಲ್ಲಿ ಯೋಗ ಮನೋಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಲಾಕ್​ಡೌನ್ ಆಗಿರುವುದರಿಂದ ಜಿಮ್ ಅಥವಾ ಇನ್ನಿತರ ಸ್ಥಳಗಳಿಗೆ ಹೋಗುವುದಕ್ಕೆ ಅವಕಾಶ ಇಲ್ಲ. ಅದರಲ್ಲೂ ಹೆಚ್ಚಿನವರಿಗೆ ವರ್ಕ್ ಫ್ರಂ ಹೋಮ್ ನೀಡಿರುವುದರಿಂದ ಹೆಚ್ಚು ಒತ್ತಡ ಇರುತ್ತದೆ. ಹೀಗಾಗಿ ಮನೆಯಲ್ಲೇ ಒಂದಷ್ಟು ಸಮಯವನ್ನು ದೇಹದ ಆರೋಗ್ಯ ರಕ್ಷಣೆಗಾಗಿ ಸೀಮಿತವಾಗಿಟ್ಟುಕೊಳ್ಳುವುದು ಅನಿವಾರ್ಯ. ಆರೋಗ್ಯದ ಹಿತದೃಷ್ಟಿಯಿಂದ ಯೋಗಾಭ್ಯಾಸ ಹೆಚ್ಚು ಸೂಕ್ತವಾಗಿದ್ದು, ಮನೆಯಲ್ಲೇ ಸರಳವಾಗಿ ಮಾಡುವ ಈ ಯೋಗಾಸನಗಳ ಬಗ್ಗೆ ಒಮ್ಮೆ ಗಮನಹರಿಸಿ.

ವೃಕ್ಷಾಸನ (ಟ್ರೀ ಪೋಸ್) ವೃಕ್ಷಾಸನವು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ದೇಹ ಸ್ಥಿತಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಈ ಭಂಗಿಯನ್ನು ಮಾಡುವಾಗ ನೇರವಾಗಿ ನಿಂತುಕೊಳ್ಳಿ, ನಂತರ ನಿಮ್ಮ ಕೈಗಳನ್ನು ನಿಧಾನವಾಗಿ ಮೇಲಕ್ಕೆ ಎತ್ತಿ ಮತ್ತು ಎರಡು ಅಂಗೈಗಳನ್ನು ಒಟ್ಟಿಗೆ ಸೇರಿಸಿ. ಒಂದು ಕಾಲಿನ ಮೇಲೆ ಸಮತೋಲನವನ್ನು ಕಾಪಾಡಿಕೊಳ್ಳುವಾಗ, ಇನ್ನೊಂದು ಕಾಲನ್ನು ನೇರವಾಗಿ ನಿಂತ ಕಾಲಿನ ಮೇಲೆ ಒರಗಿಸಿ. ಕೆಲವು ಸೆಕೆಂಡುಗಳ ಕಾಲ ಹಾಗೆ ಹಿಡಿದುಟ್ಟುಕೊಳ್ಳಿ.

ತಾಡಾಸನ (ಮೌಂಟೇನ್ ಪೋಸ್) ಈ ಭಂಗಿಯಲ್ಲಿ ಪಾದವನ್ನು ಹೊರತು ಪಡಿಸಿ ಇನ್ನುಳಿದಂತೆ ದೇಹವನ್ನು ನೇರವಾಗಿಸಿಟ್ಟುಕೊಳ್ಳಿ. ತೋಳುಗಳನ್ನು ನೇರವಾಗಿ ಗಾಳಿಯಲ್ಲಿ ಇರಿಸಿ ಮೇಲಕ್ಕೆ ತನ್ನಿ ನಂತರ ನಮಸ್ಕರಿಸಿ. ಈ ಭಂಗಿಯನ್ನು ಮಾಡುವಾಗ ಭುಜವನ್ನು ಸಾಧ್ಯವಾದಷ್ಟು ಅಗಲವಾಗಿಸಿಟ್ಟುಕೊಳ್ಳಿ. ಬಹುತೇಕ ಎಲ್ಲಾ ಭಂಗಿಗಳಿಗೆ ತಾಡಾಸನ ಅಡಿಪಾಯವಾಗಿದೆ. ತಾಡಾಸನ ಸ್ನಾಯುವಿಗೆ ಹೆಚ್ಚು ಶಕ್ತಿಯನ್ನು ನೀಡುತ್ತದೆ.

ಉತ್ತಾನಾಸನ (ಫಾರ್ವರ್ಡ್ ಬೆಂಡ್ ) ಬೊಜ್ಜನ್ನು ಕಡಿಮೆ ಮಾಡಲು ಈ ಭಂಗಿ ಹೆಚ್ಚು ಉಪಯುಕ್ತಕಾರಿಯಾಗಿದೆ. ಉತ್ತಾನಾಸನ ಮಾಡುವಾಗ ಮೊದಲಿಗೆ ನೇರವಾಗಿ ನಿಂತು ನಂತರ ಮುಂಭಾಗಕ್ಕೆ ಬಾಗಬೇಕು. ಬಳಿಕ ಕಾಲುಗಳನ್ನು ಅಗಲವಾಗಿ ಇರಿಸಿ, ನಿಮ್ಮ ತಲೆಯನ್ನು ಕೈಗಳಿಂದ ನೆಲಕ್ಕೆ ಸ್ಪರ್ಶಿಸಿ. ಈ ಭಂಗಿಯು ತೊಡೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಋತು ಸಂಬಂಧಿಸಿದ ರೋಗಲಕ್ಷಣವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜತೆಗೆ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಭುಜಂಗಾಸನ (ಕೋಬ್ರಾ ಪೋಸ್) ಭಜಂಗಾಸನ ಮಾಡುವಾಗ ಮೊದಲು ನೆಲದ ಮೇಲೆ ನೇರವಾಗಿ ಮಲಗಿ, ಬಳಿಕ ತಲೆಯನ್ನು ಮೇಲಕ್ಕೆ ಹಿಂಬದಿಗೆ ಚಾಚಿ. ಈ ರೀತಿ ಮಾಡುವಾಗ ಕಾಲುಗಳನ್ನು ನೇರವಾಗಿ ಇರಿಸಿ. ಕೆಲವು ಸೆಕೆಂಡುಗಳ ಕಾಲ ಭಂಗಿಯನ್ನು ಹಿಡಿದುಕೊಳ್ಳಿ ಬಳಿಕ ನಿಮ್ಮ ಹೊಟ್ಟೆ, ಎದೆ ಮತ್ತು ತಲೆಯನ್ನು ನಿಧಾನವಾಗಿ ನೆಲಕ್ಕೆ ತಂದು ವಿಶ್ರಾಂತಿ ಪಡೆಯಿರಿ. ಈ ಭಂಗಿಯು ಬೆನ್ನು ಮೂಳೆಯ ಸಮಸ್ಯೆಯನ್ನು ದೂರ ಮಾಡುತ್ತದೆ.

ಇದನ್ನೂ ಓದಿ:

ಋತುಚಕ್ರ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನಗಳು ಸಹಕಾರಿ

India vs England 2021: ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾದ ಸ್ಟೋಕ್ಸ್, ಆರ್ಚರ್, ರೋರಿ ಬರ್ನ್ಸ್.. ಉಳಿದ ಆಟಗಾರರ ಕೋವಿಡ್​ ವರದಿ ಏನಾಯ್ತು?

Follow us on

Related Stories

Most Read Stories

Click on your DTH Provider to Add TV9 Kannada