ದಾಸವಾಳ ಹೂವಿನಿಂದ ಮುಖದ ಕಾಂತಿ ಹೆಚ್ಚಿಸಬಹುದು: ವಿವಿಧ ಫೇಸ್ ಪ್ಯಾಕ್​ಗಳ ಮಾಹಿತಿ ಇಲ್ಲಿದೆ

ದಾಸವಾಳ ಹೂವಿನಿಂದ ಮುಖದ ಕಾಂತಿ ಹೆಚ್ಚಿಸಬಹುದು: ವಿವಿಧ ಫೇಸ್ ಪ್ಯಾಕ್​ಗಳ ಮಾಹಿತಿ ಇಲ್ಲಿದೆ
ದಾಸವಾಳ ಹೂ ಮತ್ತ ಫೇಸ್​ ಪ್ಯಾಕ್

ಹೂವುಗಳು ಕೇವಲ ಮನೆಯ ಸೌಂದರ್ಯ ಹೆಚ್ಚಿಸುವುದಿಲ್ಲ. ಇದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ದಾಸವಾಳದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಹೆಚ್ಚು ಪೋಷಕಾಂಶವನ್ನು ಹೊಂದಿರುವ ದಾಸವಾಳದಿಂದ ಮುಖವನ್ನು ಗ್ಲೋ ಮಾಡಿಕೊಳ್ಳಬಹುದು.

TV9kannada Web Team

| Edited By: Ayesha Banu

Jun 02, 2021 | 7:44 AM

ಬಿಸಿಲಿಗೆ ಮುಖದ ಕಾಂತಿ ಕುಗ್ಗುವುದು ಸಹಜ. ಹಾಳಾದ ಬಿಸಿಲಿನಿಂದ ಮುಖ ಹಾಳಾಯ್ತು ಅಂತ ಬೈಯುವುದಕ್ಕಿಂತ ಮುಖದ ಬಗ್ಗೆ ಕಾಳಜಿ ವಹಿಸುವುದು ಒಳಿತು. ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುವವರ ಮುಖದಲ್ಲಿ ಚಿಕ್ಕ ಗುಳ್ಳೆಯಾದರೂ ಆ ದಿನ ಪೂರ್ತಿ ಬೇಸರದಿಂದ ಇರುತ್ತಾರೆ. ಸರಿಪಡಿಸಿಕೊಳ್ಳಲು ಹತ್ತಾರು ಕ್ರೀಂಗಳನ್ನು ಹಚ್ಚುತ್ತಾರೆ. ಬೇಸಿಗೆ ಕಾಲದಲ್ಲಿ ಮುಖದ ಬಗ್ಗೆ ಹೆಚ್ಚು ಗಮನಹರಿಸಬೇಕು. ಬಿಸಿಲಿಗೆ ಹೋಗದೆ ಮನೆಯೊಳಗೆ ಇದ್ದರೆ ಚರ್ಮಕ್ಕೆ ಒಳ್ಳೆಯದು. ಆದರೆ ಅದು ಸಾಧ್ಯವಿಲ್ಲ. ಪ್ರತಿಯೊಬ್ಬರು ಒಂದಲ್ಲ ಒಂದು ಕೆಲಸಕ್ಕೆ ಹೊರಗೆ ಹೋಗಲೇಬೇಕು. ಅಲ್ಲದೇ ಹೆಚ್ಚು ಮನೆಯೊಳಗೆ ಇರುವವರ ಚರ್ಮಕ್ಕೂ ಕೂಡಾ ಹೆಚ್ಚು ಆರೈಕೆಯ ಅಗತ್ಯವಂತು ಇದ್ದೆ ಇರುತ್ತದೆ.

ಹೂವುಗಳು ಸೌಂದರ್ಯದ ಪ್ರತೀಕ. ಹೂವುಗಳು ಕೇವಲ ಮನೆಯ ಸೌಂದರ್ಯ ಹೆಚ್ಚಿಸುವುದಿಲ್ಲ. ಇದರ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ದಾಸವಾಳದಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಹೆಚ್ಚು ಪೋಷಕಾಂಶವನ್ನು ಹೊಂದಿರುವ ದಾಸವಾಳದಿಂದ ಮುಖವನ್ನು ಗ್ಲೋ ಮಾಡಿಕೊಳ್ಳಬಹುದು. ಮುಖದ ಗ್ಲೋಗಾಗಿ ಏನೇನೋ ಹಚ್ಚುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ದಾಸವಾಳದಿಂದ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.

1. ದಾಸವಾಳ ಮತ್ತು ಗೋಧಿ ದಾಸವಾಳದ ಹೂವುಗಳನ್ನು ಒಣಗಿಸಿ ಅದನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಅರ್ಧ ಕಪ್ ಹಸಿ ಗೋಧಿಯನ್ನು ಚೆನ್ನಾಗಿ ಪುಡಿ ಮಾಡಬೇಕು. ಒಂದು ಬಟ್ಟಲಿಗೆ ಮಾಡಿಕೊಂಡ ದಾಸವಾಳದ ಹೂವಿನ ಪುಡಿ ಮತ್ತು ಗೋಧಿ ಪುಡಿಯನ್ನು ಹಾಕಿ ಬೆರೆಸಬೇಕು. ಅದಕ್ಕೆ ಸ್ವಲ್ಪ ರೋಸ್ ವಾಟರ್ ಸೇರಿಸಬೇಕು. ರೋಸ್ ವಾಟರ್ ಹಾಕಿದ ಬಳಿಕ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಖವನ್ನು ತೊಳೆದು ಸಿದ್ಧವಾಗಿರುವ ಮಿಶ್ರಣವನ್ನು ಮುಖಕ್ಕೆ ಹಚ್ಚಬೇಕು. ಹಚ್ಚಿದ ಬಳಿಕ ಸುಮಾರು 20 ನಿಮಿಷಗಳ ಕಾಲ ಮುಖದ ಮೇಲೆ ಇರಬೇಕು. ಆ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿದರೆ ಉತ್ತಮ ಫಲಿತಾಂಶ ಬೇಗ ಸಿಗುತ್ತದೆ.

2. ದಾಸವಾಳ ಮತ್ತು ಲೋಳೆಸರ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಲೂವೇರಾ ಇದ್ದೇ ಇರುತ್ತದೆ. ಹತ್ತು ಹಲವು ಔಷಧಿಯ ಗುಣಗಳನ್ನು ಹೊಂದಿರುವ ಲೋಳೆಸರ ಮತ್ತು ದಾಸವಾಳದಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಒಂದು ತಟ್ಟೆಗೆ ಎರಡು ಚಮಚ ದಾಸವಾಳದ ಹೂವಿನ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಬೇಕಾದ ಪ್ರಮಾಣದ ಆಲೂವೇರಾ ಜೆಲ್ನ ಸೇರಿಸಬೇಕು. ಬಟ್ಟಲಿನಲ್ಲಿ ಚೆನ್ನಾಗಿ ಬೆರೆಸಿ ಮುಖದ ಮೇಲೆ ಹಚ್ಚಿ. ಇದು ಸುಮಾರು 15 ರಿಂದ 20 ನಿಮಿಷಗಳ ಕಾಲ ಮುಖದ ಮೇಲೆ ಇರಬೇಕು. ನಂತರ ತಣ್ಣನೆಯ ನೀರಿನಿಂದ ತೊಳೆಯಬೇಕು. ಹೊಳೆಯುವ ಮತ್ತು ಕಾಂತಿಯುತ ಚರ್ಮಕ್ಕಾಗಿ ಇದನ್ನು ವಾರಕ್ಕೆ ಮೂರು ಬಾರಿ ಮಾಡಬೇಕು.

3. ದಾಸವಾಳ ಮತ್ತು ಮೊಸರು ಮೊಸರು ಆರ್ಧ್ರಕ ಗುಣಗಳನ್ನು ಹೊಂದಿದೆ. ಜೊತೆಗೆ ಇದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು. ಒಂದು ಬೌಲ್​ಗೆ 1 ಅಥವಾ 2 ಚಮಚ ದಾಸವಾಳದ ಪುಡಿ ಮತ್ತು ಅದಕ್ಕೆ ಸ್ವಲ್ಪ ಮೊಸರನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ. ಚೆನ್ನಾಗಿ ಬೆರೆಸಿದ ನಂತರ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. 10 ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆಯಿರಿ.

4. ದಾಸವಾಳ, ಜೇನು ತುಪ್ಪ ಮತ್ತು ಹಾಲು ಒಂದು ಬಟ್ಟಲಿಗೆ 2 ಚಮಚ ದಾಸವಾಳದ ಪುಡಿ, ಸ್ವಲ್ಪ ಹಾಲು ಜೊತೆಗೆ ಒಂದು ಚಮಚ ಜೇನು ತುಪ್ಪ ಹಾಕಿ ಚೆನ್ನಾಗಿ ಬೆರೆಸಿ. ಚೆನ್ನಾಗಿ ಮಿಶ್ರಣಗೊಂಡ ಬಳಿಕ ಮುಖಕ್ಕೆ ಹಚ್ಚಿರಿ. 20 ನಿಮಿಷಗಳ ಕಾಲ ಪೇಸ್ ಪ್ಯಾಕ್ ಮುಖದ ಮೇಲೆ ಇರಬೇಲು. ಆ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಬೇಕು. ಕೆಲವರಿಗೆ ಹಾಲನ್ನು ಮುಖಕ್ಕೆ ಹಚ್ಚಿದರೆ ಮೊಡವೆ ಏಳುವ ಸಾಧ್ಯತೆ ಇರುತ್ತದೆ. ಅಂತವರು ಇದನ್ನು ಹಚ್ಚಬಾರದು.

ಇದನ್ನೂ ಓದಿ

ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್​; ನೀವೂ ಇವರ ಫಿಟ್ನೆಸ್ ನೋಡಿಬಿಡಿ

ಲಾಕ್​ಡೌನ್​ ಸಮಯದಲ್ಲಿ ಯೋಗಾಭ್ಯಾಸ; ನಾಲ್ಕು ಸರಳ ಯೋಗ ಭಂಗಿಗಳನ್ನು ನಿತ್ಯವು ಅನುಸರಿಸಿ

(Hibiscus Flower can enhance facial radiance)

Follow us on

Related Stories

Most Read Stories

Click on your DTH Provider to Add TV9 Kannada