ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್​; ನೀವೂ ಇವರ ಫಿಟ್ನೆಸ್ ನೋಡಿಬಿಡಿ

ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ  ಫಿಟ್ನೆಸ್​; ನೀವೂ ಇವರ ಫಿಟ್ನೆಸ್ ನೋಡಿಬಿಡಿ
ತ್ರಿಪತ್ ಸಿಂಗ್

76 ವರ್ಷ ಅಂದರೆ ಸಾಮಾನ್ಯವೇ? ಜೀವನದಲ್ಲಿ ಅದೆಷ್ಟೋ ಕಷ್ಟ-ನೋವುಗಳನ್ನು ನುಂಗಿ ಬಂದ ವಯಸ್ಸದು. ಅಂತಹ ವಯಸ್ಸಿನಲ್ಲಿರುವ ತ್ರಿಪತ್​ ಸಿಂಗ್​ ಎನ್ನುವವರು ತಮ್ಮ ದೇಹದ ಫಿಟ್ನೆಸ್​ ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ನೋಡಿ. ನಿಜಕ್ಕೂ ಆಶ್ಚರ್ಯರಾಗುತ್ತೀರಿ.

shruti hegde

|

Jun 01, 2021 | 3:53 PM

ಅನೇಕರಿಗೆ ಸ್ಪೂರ್ತಿದಾಯಕವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಅವರ ಸಾಧನೆಗೆ ಸಲಾಂ ಅನ್ನುವಷ್ಟರ ಮಟ್ಟಿಗೆ ಕೆಲವು ವಿಡಿಯೋಗಳು ಮನಸೆಳೆಯುತ್ತವೆ. ವಯಸ್ಸು ಕೇಲವ ಸಂಖ್ಯೆಯಷ್ಟೇ.. ಯಾವ ವಯಸ್ಸಿನಲ್ಲಯೂ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋ ಇದೆ. ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್ ಇವರದ್ದು. ಯಾರಿವರು ಎಂಬ ಕುತೂಹಲ ಕೆರಳಿರಬೇಕಲ್ಲವೇ? ನೀವೂ ನೋಡಿ.. ನಿಜವಾಗಿಯೂ ಆಶ್ಚರ್ಯ ಪಡುತ್ತೀರಾ.

ತ್ರಿಪಾತ್ ಸಿಂಗ್​ ಮೂಲತಃ ಚಂಡಿಗಡದವರು. 76 ವರ್ಷ ಅಂದರೆ ಸಾಮಾನ್ಯವೇ? ಜೀವನದಲ್ಲಿ ಅದೆಷ್ಟೋ ಕಷ್ಟ-ನೋವುಗಳನ್ನು ನುಂಗಿ ಬಂದ ವಯಸ್ಸದು. ಅಂತಹ ವಯಸ್ಸಿನಲ್ಲಿರುವ ತ್ರಿಪತ್​ ಸಿಂಗ್​ ತಮ್ಮ ದೇಹದ ಫಿಟ್ನೆಸ್​ ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ನೋಡಿ. ನಿಜಕ್ಕೂ ಆಶ್ಚರ್ಯರಾಗುತ್ತೀರಿ.

ಹ್ಯೂಮನ್​ ಆಫ್​ ಬಾಂಬೆ ಎಂಬ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ತ್ರಿಪತ್​ ಸಿಂಗ್​ ಅವರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇವರ 76ನೇ ವಯಸ್ಸಿನ ಫಿಟ್​ನೆಸ್​ ಸಾಧನೆಗೆ ಸೆಲೆಬ್ರಿಟಿಗಳ ಸ್ಥಾನ ಗಳಿಸಿಕೊಂಡಿದ್ದಾರೆ.

ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ, ‘ನಾನು ತ್ರಿಪತ್​ ಮತ್ತು ನನ್ನ ಹೆಂಡತಿ ಮಂಜೀತ್​. ಅವಳು 1999ರಲ್ಲಿ ನಿಧನಳಾದಳು. ಅವಳಿಲ್ಲದೆ ನಾನು ಸೋತು ಹೋಗಿದ್ದೆ. ಕೆಲವ ವರ್ಷಗಳವರೆಗೆ ಖಿನ್ನತೆಯಿಂದ ಬಳಲುತ್ತಿದೆ. ಇದರಿಂದ ಆಚೆಗೆ ಬರಬೇಕು ಎಂದು ನಿರ್ಧರಿಸಿ, 60ನೇ ವಯಸ್ಸಿನಲ್ಲಿದ್ದಾಗ ನನ್ನ ಯೋಚನೆಯನ್ನು ಬದಲಾಯಿಸಿಕೊಂಡೆ ಎಂದು ತ್ರಿಪತ್​ ಸಿಂಗ್​ ವಿಡಿಯೋದಲ್ಲಿ ಹೇಳಿದ್ದಾರೆ.

ತ್ರಿಪತ್​ ಸಿಂಗ್​ ಅವರು ವ್ಯಾಯಮ ಮಾಡುವ ರೀತಿಯನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಪೋಸ್ಟ್​ ಮಾಡಿದ ಸುಮಾರು 20 ಗಂಟೆಗಳಲ್ಲಿಯೇ 33 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಗಳಿಸಿಕೊಂಡಿದೆ. 76 ವರ್ಷದ ಸ್ಪೂರ್ತಿದಾಯಕ ಪ್ರಯಾಣವು ಅಂತರ್ಜಾಲದಲ್ಲಿ ನೆಟ್ಟಿಗರ ಹ್ರದಯ ಗೆದ್ದಿದೆ. ಫಿಟ್ನೆಸ್​ಗಾಗಿ ಮಾಡುವ ವ್ಯಾಯಾಮವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅವರ ಹೆಂಡತಿಯ ಮೇಲಿನ ಪ್ರೀತಿಯಿದು ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫಿಟ್ನೆಸ್​ ಕಾಪಾಡಿಕೊಳ್ಳುವತ್ತ ಅಥವಾ ಬಾಡಿಬಿಲ್ಡ್​ ಕುರಿತಾಗಿ ಹೆಚ್ಚಿನ ಆಸಕ್ತಿಯುಳ್ಳವರಿಗೆ ಈ ವಿಡಿಯೋ ಸ್ಪೂರ್ತಿತುಂಬುವಂತಿದೆ.

Follow us on

Related Stories

Most Read Stories

Click on your DTH Provider to Add TV9 Kannada