ಋತುಚಕ್ರ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನಗಳು ಸಹಕಾರಿ

ಋತುಚಕ್ರದ ಸಮಸ್ಯೆಯಿಂದ ಹೊರಬರಲು ಸಹಾಯವಾಗುವ ಐದು ಯೋಗಾಸನಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ. ಈ ಯೋಗಾಸನಗಳನ್ನು ಮಾಡುವುದರಿಂದ ಋತುಚಕ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಋತುಚಕ್ರ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನಗಳು ಸಹಕಾರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 7:19 PM

ಬಹಳಷ್ಟು ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ನೋವು, ಕಿರಿಕಿರಿ ಅನುಭವಿಸುತ್ತಾರೆ. ಕೆಲವೊಮ್ಮೆ ಋತುಚಕ್ರ ಸರಿಯಾದ ಸಮಯದಲ್ಲಿ ಆಗದೆ ಸಮಸ್ಯೆ ಅನಿಸುವುದು ಕೂಡ ಇದೆ. ಸಾಮಾನ್ಯವಾಗಿ ಋತುಚಕ್ರವು 28 ದಿನಗಳ ಆವರ್ತದಲ್ಲಿ ಆಗುತ್ತದೆ. ಆದರೆ, ಕೆಲವೊಮ್ಮೆ 21ರಿಂದ 38 ದಿನಗಳವರೆಗೆ ವ್ಯತ್ಯಾಸ ಉಂಟಾಗುವುದು ಕೂಡ ಇದೆ. 35 ದಿನಗಳಿಗೂ ಹೆಚ್ಚು ಕಾಲ ಋತುಚಕ್ರ ಸಂಭವಿಸದಿದ್ದರೆ ಅಥವಾ 21 ದಿನಗಳಲ್ಲೇ ಋತುಚಕ್ರ ಸಂಭವಿಸಿದರೆ ಸಮಸ್ಯೆ ಎನ್ನಬಹುದು ಎಂದು ತಜ್ಞರು ವಿವರಿಸಿದ್ದಾರೆ.

ಇಂತಹ ವ್ಯತ್ಯಾಸಗಳು ಅಪರೂಪಕ್ಕೊಮ್ಮೆ ಕಂಡುಬಂದರೆ ಅದನ್ನು ಸಹಜ ಎಂದು ಪರಿಗಣಿಸಬಹುದು. ಆದರೆ, ಪ್ರತಿಬಾರಿ ಹೀಗೆಯೇ ಆದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಋತುಚಕ್ರದಲ್ಲಿ ಸಮಸ್ಯೆ ಹಾರ್ಮೋನುಗಳ ವ್ಯತ್ಯಾಸದಿಂದ ಆಗಬಹುದು. ಬರ್ತ್ ಕಂಟ್ರೋಲ್ ಔಷಧ ಮತ್ತಿತರ ಮಾತ್ರೆಗಳನ್ನು ಸ್ವೀಕರಿಸುವುದರಿಂದಲೂ ಆಗಬಹುದು. ಥೈರಾಯ್ಡ್ ಸಮಸ್ಯೆ, ಅತಿಯಾದ ಒತ್ತಡದಿಂದಲೂ ಋತುಚಕ್ರದ ತೊಂದರೆ ಆಗಬಹುದು.

ಈ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಲು ಯೋಗಾಭ್ಯಾಸದಿಂದ ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ. ಅಸಮರ್ಪಕ ಋತುಚಕ್ರದಿಂದ ಹೊರಬರಲು ಸಹಾಯವಾಗುವ ಐದು ಯೋಗಾಸನಗಳ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ. ಈ ಯೋಗಾಸನಗಳನ್ನು ಮಾಡುವುದರಿಂದ ಋತುಚಕ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಸೂರ್ಯ ನಮಸ್ಕಾರ ಸೂರ್ಯ ನಮಸ್ಕಾರವು ದೇಹದ ಸ್ನಾಯುಗಳು, ಮೂಳೆ ಮತ್ತು ಸ್ನಾಯು ಸಂಧಿಗಳಿಗೆ ವ್ಯಾಯಾಮ ಆಗುವುದಲ್ಲದೆ ಹಾರ್ಮೋನುಗಳನ್ನೂ ನಿಯಂತ್ರಿಸುತ್ತದೆ. ನಿಯಮಿತವಾಗಿ ಸೂರ್ಯ ನಮಸ್ಕಾರ ಯೋಗಾಭ್ಯಾಸ ಮಾಡುವುದರಿಂದ ಋತುಚಕ್ರ ಸಮಸ್ಯೆಯನ್ನು ದೂರೀಕರಿಸಬಹುದು. ಸೂರ್ಯನಮಸ್ಕಾರದ 12 ಆಸನಗಳನ್ನು ಸರಿಯಾಗಿ ಅಭ್ಯಾಸ ಮಾಡಿ, ಅಳವಡಿಸುವುದು ಅವಶ್ಯಕ.

SURYA NAMASKARA

ಸೂರ್ಯನಮಸ್ಕಾರ

ಕಪಾಲಭಾತಿ ಪ್ರಾಣಾಯಾಮ ಅಥವಾ ಪ್ರಾಣಾಯಾಮದ ಒಂದು ಅಂಗವಾದ ಕಪಾಲಭಾತಿಯು ಋತುಚಕ್ರ ಸಂಬಂಧಿ ಸಮಸ್ಯೆಗಳನ್ನು ದೂರೀಕರಿಸಲು ಸೂಕ್ತ ಅಂಶವಾಗಿದೆ. ನಿಧಾನವಾಗಿ, ಸಹಜವಾಗಿ ಉಸಿರನ್ನು ಒಳಗೆ ತೆಗೆದುಕೊಳ್ಳುವುದು ಮತ್ತು ವೇಗವಾಗಿ, ಬಲವಾಗಿ ಉಸಿರು ಹೊರಹಾಕುವುದನ್ನು ಕಪಾಲಭಾತಿ ಎನ್ನುತ್ತಾರೆ. ಈ ವಿಧಾನವನ್ನು ಕೂಡ ಸರಿಯಾಗಿ ಕಲಿತು, ಅಳವಡಿಸಿಕೊಳ್ಳುವುದು ಅವಶ್ಯಕ.

PRANAYAMA YOGA ASANA

ಪ್ರಾಣಾಯಾಮ

ಭದ್ರಾಸನ ಅಥವಾ ಬಟರ್​ಫ್ಲೈ ಪೋಸ್ ಕಾಲುಗಳನ್ನು ಮಡಚಿ ಚಿಟ್ಟೆಯ ರೆಕ್ಕೆ ಕಾಣುವಂತೆ ಕೂರುವ ಕ್ರಮವನ್ನು ಭದ್ರಾಸನ ಅಥವಾ ಬಟರ್​ಫ್ಲೈ ಪೋಸ್ ಎನ್ನುತ್ತಾರೆ. ಹೀಗೆ ಮಾಡುವುದರಿಂದ ಕಾಲು, ಬೆನ್ನುಮೂಳೆ ಆರೋಗ್ಯ ವೃದ್ಧಿಯಾಗುತ್ತದೆ.

BHADRASANA YOGA ASANA

ಭದ್ರಾಸನ

ಧನುರ್​ಆಸನ ಧನುರ್​ಆಸನ ಬೆನ್ನುಮೂಳೆಯನ್ನು ಬೆಂಡಾಗಿಸುವ ಬಹುಮುಖ್ಯ ಯೋಗಾಸನ ಪ್ರಕಾರವಾಗಿದೆ. ನಿಯಮಿತವಾಗಿ ಧನುರ್​ಆಸನ ಅಭ್ಯಾಸ ಮಾಡುವುದರಿಂದ ಬೆನ್ನುಮೂಳೆಗೆ ವ್ಯಾಯಾಮ ಸಿಗುತ್ತದೆ. ಋತುಚಕ್ರದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳು ದೂರಾಗುತ್ತವೆ.

DHANURASANA YOGA ASANA

ಧನುರ್​ಆಸನ

ವಜ್ರಾಸನ ವಜ್ರಾಸನವು ಗ್ಯಾಸ್ ಟ್ರಬಲ್ ಅಥವಾ ಅಸಿಡಿಟಿ ಮತ್ತು ಪಚನಕ್ರಿಯೆಯ ಸಮಸ್ಯೆಗಳನ್ನು ದೂರಮಾಡುತ್ತದೆ. ಜತೆಗೆ, ಋತುಚಕ್ರದ ವಿಚಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ.

VAJRASANA YOGA ASANA

ವಜ್ರಾಸನ

ಇದನ್ನೂ ಓದಿ: ‘5 A Day’: ಎರಡು ಹಣ್ಣು – ಮೂರು ತರಕಾರಿ.. ಪ್ರತಿದಿನವೂ ಸೇವಿಸುವುದರಿಂದ ಆರೋಗ್ಯ ವೃದ್ಧಿ!

International Women’s Day 2021: ತುರ್ತು ಸಂದರ್ಭದಲ್ಲಿ ಮಹಿಳೆಯರ ಸಹಾಯಕ್ಕೆ ಬರುತ್ತವೆ ಈ ನಾಲ್ಕು ಆ್ಯಪ್​ಗಳು!

Published On - 5:17 pm, Mon, 8 March 21

ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ನಿಗಮ ಹಗರಣದಲ್ಲಿ ಕ್ಲೀನ್ ಚಿಟ್; ನಾಗೇಂದ್ರ ಪುನಃ ಆಗುವರೇ ಮಂತ್ರಿ?
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ವಾಲ್ಮೀಕಿ ಹಗರಣ ವಿರುದ್ಧ ಪಾದಾಯಾತ್ರೆಗೆ ಅನುಮತಿ ಸಿಗಲಿಲ್ಲ: ಯತ್ನಾಳ್
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ತಿರುಮಲದಲ್ಲಿ 8 ಅಡಿಯ ದೈತ ನಾಗರಹಾವು ಪತ್ತೆ: ವೈರಲ್ ವಿಡಿಯೋ
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ನಿನ್ನದು ನರಿ ಕಣ್ಣೀರು: ಮಹಾರಾಣಿ ಮೋಕ್ಷಿತಾ ಮೇಲೆ ಉರಿದು ಬಿದ್ದ ಮಂಜು
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ಅಭಿನಂದನಾ ಕಾರ್ಯಕ್ರಮಕ್ಕೆ ಸಿಎಂರ ಡೇಟ್ ಕೇಳಲು ಬಂದಿದ್ದು ಎಂದ ಯೋಗೇಶ್ವರ್
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ನವೆಂಬರ್ 29ರಿಂದ ರೇಣುಕಾಚಾರ್ಯ ತಂಡದಿಂದಲೂ ಒಂದು ಅಭಿಯಾನ!
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಬಂಡೀಪುರದಲ್ಲಿ ಆನೆ ಮರಿಗೆ ಹೊಂಚು ಹಾಕಿದ್ದ ಹುಲಿಯನ್ನು ಓಡಿಸಿದ ತಾಯಾನೆ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ