India vs England 2021: ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾದ ಸ್ಟೋಕ್ಸ್, ಆರ್ಚರ್, ರೋರಿ ಬರ್ನ್ಸ್.. ಉಳಿದ ಆಟಗಾರರ ಕೋವಿಡ್​ ವರದಿ ಏನಾಯ್ತು?

ಈ ಮೂವರನ್ನು ಹೊರತುಪಡಿಸಿ ಇಡೀ ಇಂಗ್ಲೆಂಡ್ ತಂಡಕ್ಕೆ ನಿನ್ನೆ ಎರಡನೇ ಪಿಸಿಆರ್ ಕೋವಿಡ್ -19 ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶ ನೆಗೆಟಿವ್​ ಬಂದಿದೆ ಎಂದು ವರದಿಯಾಗಿದೆ.

India vs England 2021: ಕ್ವಾರಂಟೈನ್ ಮುಗಿಸಿ ಅಭ್ಯಾಸದಲ್ಲಿ ನಿರತರಾದ ಸ್ಟೋಕ್ಸ್, ಆರ್ಚರ್, ರೋರಿ ಬರ್ನ್ಸ್.. ಉಳಿದ ಆಟಗಾರರ ಕೋವಿಡ್​ ವರದಿ ಏನಾಯ್ತು?
ಸ್ಟೋಕ್ಸ್, ಆರ್ಚರ್ ಸಾಂದರ್ಭಿಕ ಚಿತ್ರ
Follow us
ಪೃಥ್ವಿಶಂಕರ
|

Updated on: Jan 30, 2021 | 12:36 PM

ಚೆನ್ನೈ: ಕ್ರಿಕೆಟ್​ಗಾಗಿ ಇಂಡಿಯಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡದ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಜೋಫ್ರಾ ಆರ್ಚರ್ ಮತ್ತು ರಿಸರ್ವ್ ಓಪನರ್ ರೋರಿ ಬರ್ನ್ಸ್ ಆರು ದಿನಗಳ ಕ್ವಾರಂಟೈನ್​ ನಿಯಮವನ್ನು ಯಶಸ್ವಿಯಾಗಿ ಪೂರೈಸಿದ ನಂತರ ಚೆಪಾಕ್‌ನಲ್ಲಿ ಶನಿವಾರ ತಮ್ಮ ತರಬೇತಿ ಆರಂಭಿಸಿದ್ದಾರೆ.

ಈ ಮೂವರು ಶ್ರೀಲಂಕಾ ಟೆಸ್ಟ್ ಸರಣಿಯ ಭಾಗವಾಗಿರಲಿಲ್ಲ. ಸ್ಟೋಕ್ಸ್ ಮತ್ತು ಆರ್ಚರ್ ಅವರಿಗೆ ಇಂಡಿಯಾ ಪ್ರವಾಸಕ್ಕಾಗಿ ಶ್ರೀಲಂಕಾ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು. ಬರ್ನ್ಸ್ ತನ್ನ ಮೊದಲ ಮಗುವಿನ ಜನನದ ಕಾರಣ ಶ್ರೀಲಂಕಾ ಪ್ರವಾಸವನ್ನು ಕೈ ಬಿಟ್ಟಿದ್ದರು.

ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಅಭ್ಯಾಸ ಮಾಡಲ್ಲಿದ್ದಾರೆ.. ಈ ಮೂವರು ತಮ್ಮ ಸಹೋದ್ಯೋಗಿಗಳಿಗಿಂತ ಮೊದಲೇ ಭಾರತವನ್ನು ತಲುಪಿದ್ದರು ಮತ್ತು ಈಗಾಗಲೇ ತಮ್ಮ ಮೂರು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ತೆರವುಗೊಳಿಸಿದ ನಂತರ ಶನಿವಾರ ತಮ್ಮ ಕ್ರಿಕೆಟ್​ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆರ್ಚರ್, ಬರ್ನ್ಸ್ ಮತ್ತು ಸ್ಟೋಕ್ಸ್ ಮುಂದಿನ ಮೂರು ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಅಭ್ಯಾಸ ಮಾಡಲ್ಲಿದ್ದಾರೆ. ಪ್ರತಿ ದಿನ ಎರಡು ಗಂಟೆಗಳ ಕಾಲ ಪ್ರಾಕ್ಟೀಸ್​ ನಡೆಸಲು ಅವರಿಗೆ ಅನುಮತಿ ನೀಡಲಾಗಿದೆ ಎಂದು ಇಂಗ್ಲೆಂಡ್‌ನ ಮಾಧ್ಯಮ ವ್ಯವಸ್ಥಾಪಕ ಡ್ಯಾನಿ ರೂಬೆನ್ ಮಾಹಿತಿ ನೀಡಿದರು.

ಉಳಿದವರ ಕೋವಿಡ್​ ವರದಿ ನೆಗೆಟಿವ್​ ಬಂದಿದೆ.. ಈ ಮೂವರನ್ನು ಹೊರತುಪಡಿಸಿ ಇಡೀ ಇಂಗ್ಲೆಂಡ್ ತಂಡಕ್ಕೆ ನಿನ್ನೆ ಎರಡನೇ ಪಿಸಿಆರ್ ಕೋವಿಡ್ -19 ಪರೀಕ್ಷೆಯನ್ನು ನಡೆಸಲಾಗಿದ್ದು, ಫಲಿತಾಂಶ ನೆಗೆಟಿವ್​ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ ಪೂರ್ಣ ಇಂಗ್ಲೆಂಡ್ ತಂಡ ಫೆಬ್ರವರಿ 2 ರಿಂದ ತಮ್ಮ ತರಬೇತಿಯನ್ನು ಪ್ರಾರಂಭಿಸಲಿದೆ. ಫೆಬ್ರವರಿ 5 ರಿಂದ ಚಪಕ್​ನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

India vs England 2021: ಭಾರತಕ್ಕೆ ಬಂದಿಳಿದ ಇಂಗ್ಲೆಂಡ್ ತಂಡ, ಆಟಗಾರರಿಗೆ ಕಡ್ಡಾಯ ಕ್ವಾರಂಟೈನ್.. ಪ್ರೇಕ್ಷಕ ಪ್ರಭು ದೂರ ದೂರ

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ