AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ

ಕೆಲವರಿಗೆ ಸೂಜಿ ಚುಚ್ಚಿದ ಜಾಗ ನೋವು ಕಾಣಿಸಿಕೊಂಡಿದ್ದು, ವಯಸ್ಕರಿಗೆ ಕೊಟ್ಟ ಪ್ರಮಾಣದಲ್ಲಿಯೇ ಮಕ್ಕಳಿಗೂ ಡೋಸ್ ನೀಡಲಾಗುತ್ತಿದೆ. ಪ್ರತಿ ದಿನ ಪೋನ್ ಮಾಡಿ ಮಕ್ಕಳ ಆರೋಗ್ಯ ವೈದ್ಯರು ವಿಚಾರಿಸುತ್ತಿದ್ದಾರೆ.

ಮೈಸೂರಿನಲ್ಲಿ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಭರವಸೆ
ಪ್ರಾತಿನಿಧಿಕ ಚಿತ್ರ
TV9 Web
| Updated By: guruganesh bhat|

Updated on: Jun 12, 2021 | 3:59 PM

Share

ಮೈಸೂರು: ಜಿಲ್ಲೆಯಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿಯಾಗುವ ಹಂತದಲ್ಲಿದ್ದು, ಮೊದಲ ಹಂತದಲ್ಲಿ 30 ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ನಡೆದ ಪ್ರಯೋಗ ಯಶಸ್ವಿಯಾಗುವ ಹಂತದಲ್ಲಿದ್ದು, ಲಸಿಕೆ ವಿತರಿಸಿದ ಕಳೆದ 6 ದಿನಗಳಿಂದ ಮಕ್ಕಳಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿಲ್ಲ. ಪ್ರತಿದಿನ ಮಕ್ಕಳ ಆರೋಗ್ಯವನ್ನು ವೈದ್ಯರು ವಿಚಾರಿಸುತ್ತಿದ್ದು, ಸುಮಾರು 7 ತಿಂಗಳ ಕಾಲ ನಡೆಯಲಿರುವ ಈ ಪ್ರಯೋಗ ನಡೆಯಲಿದೆ.

ಕೆಲವರಿಗೆ ಸೂಜಿ ಚುಚ್ಚಿದ ಜಾಗ ನೋವು ಕಾಣಿಸಿಕೊಂಡಿದ್ದು, ವಯಸ್ಕರಿಗೆ ಕೊಟ್ಟ ಪ್ರಮಾಣದಲ್ಲಿಯೇ ಮಕ್ಕಳಿಗೂ ಡೋಸ್ ನೀಡಲಾಗುತ್ತಿದೆ. ಪ್ರತಿ ದಿನ ಪೋನ್ ಮಾಡಿ ಮಕ್ಕಳ ಆರೋಗ್ಯ ವೈದ್ಯರು ವಿಚಾರಿಸುತ್ತಿದ್ದಾರೆ. 30 ಮಕ್ಕಳ ಪೈಕಿ ಇಬ್ಬರಿಗೆ ಜ್ವರ ಕಾಣಿಸಿಕೊಂಡಿದೆ. ಒಂದು ತಿಂಗಳ ನಂತರ ಲಸಿಕೆ ಪಡೆದ ಮಕ್ಕಳ ರಕ್ತ ಮಾದರಿ ಸಂಗ್ರಹಿಸಿ, ಮಕ್ಕಳ ದೇಹದ ಮೇಲೆ ಲಸಿಕೆ ಪರಿಣಾಮದ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ನಂತರದ ದಿನಗಳಲ್ಲಿ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಮೈಸೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಮಹಾನಗರ ಪಾಲಿಕೆಯಿಂದ ಲಸಿಕಾ ಅಭಿಯಾನ ಯೋಜಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ವಿಶೇಷ ಚೇತನರಿಗೆ ಲಸಿಕೆ ನೀಡಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜೂನ್ 16ರಿಂದ 20ರವರೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾಗುತ್ತದೆ.ಜೂನ್ 17ರಿಂದ 19ರವರೆಗೆ ವಿಶೇಷ ಚೇತನರಿಗೆ ನೀಡಲಾಗುತ್ತದೆ. ತಿಲಕನಗರದ ಅಂಧಮಕ್ಕಳ‌ ಪಾಠಶಾಲೆಯಲ್ಲಿ ವಿತರಸಿಲು ನಿಶ್ಚಯಿಸಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಆಧಾರ್ ಕಾರ್ಡ್ ಹಾಗೂ ವ್ಯಾಪಾರದ ಗುರುತಿನ ಚೀಟಿ, ವಿಶೇಷ ಚೇತನರಿಗೆ ಆಧಾರ್ ಕಾರ್ಡ್ ಹಾಗೂ ಸರ್ಕಾರದ ಪ್ರಮಾಣಪತ್ರ ಕಡ್ಡಾಯವಾಗಿದೆ. ವಾರ್ಡ್​ವಾರು ಉಚಿತ ವಾಹನದ ಸೌಲಭ್ಯ ಸಹಾ ಮಾಡಲಾಗಿದೆ.

ಇದನ್ನೂ ಓದಿ: School Fees: ಪೋಷಕರಿಂದ ಫೀಸ್ ವಸೂಲಿ ಮಾಡುವಲ್ಲಿ ಖಾಸಗಿ ಶಾಲೆಗಳ ಜತೆ ಖಾಸಗಿ ಫೈನಾನ್ಸ್​ಗಳು ಶಾಮೀಲು: ಸಚಿವ ಸುರೇಶ್ ಕುಮಾರ್

ಹಣಕಾಸಿನ ಇತಿಮಿತಿ ನೋಡಿಕೊಂಡು ಕೊವಿಡ್​ಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರದ ಕುರಿತು ನಿರ್ಧರಿಸುವೆ: ಸಿಎಂ ಯಡಿಯೂರಪ್ಪ (Covid vaccine trial on children in Mysuru is in the success stage)