ಸಿಡಿ ಪ್ರಕರಣ: ಎಸ್ಐಟಿ ವಿಚಾರಣೆ ವೇಳೆ ಜಾಣನಡೆ ಅನುಸರಿಸುತ್ತಿರುವ ಆರೋಪಿಗಳು
Ramesh Jarkiholi CD case: ಮಾಧ್ಯಮದಲ್ಲಿದ್ದ ಕಾರಣ ನಾವು ಸಂತ್ರಸ್ಥ ಯುವತಿಗೆ ನ್ಯಾಯ ಕೊಡಿಸಲು ಮುಂದಾಗಿದ್ದೆವು ಎಂದು ಆರೋಪಿಗಳು ಎಸ್ಐಟಿ ತಂಡಕ್ಕೆ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಆಡುಗೋಡಿ ಟೆಕ್ನಿಕಲ್ ಸೆಲ್‌ನಲ್ಲಿ ಆರೋಪಿಗಳಾದ ಶ್ರವಣ್ ಮತ್ತು ನರೇಶ್ ಅವರುಗಳ ವಿಚಾರಣೆ ನಡೆಸಲಾಗುತ್ತಿದ್ದು, ವಕೀಲರ ಸಲಹೆ ಪಡೆದು ಅಗತ್ಯ ಸಿದ್ಧತೆ ನಡೆಸಿಯೇ ಆರೋಪಿಗಳಾದ ಶ್ರವಣ್ ಮತ್ತು ನರೇಶ್ ವಿಚಾರಣೆಗೆ ಹಾಜರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ಇಬ್ಬರೂ ಆರೋಪಿಗಳು ತನಿಖಾಧಿಕಾರಿ ಎದುರು ಜಾಣನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ವಿಚಾರಣೆ ವೇಳೆ ಪೊಲೀಸರಿಗೆ ಯಾವ ರೀತಿ ಉತ್ತರ ನೀಡಬೇಕು? ಯುವತಿ ವಿಚಾರಣೆ ವೇಳೆ ಯಾವ ಅಂಶ ಬೆಳಕಿಗೆ ಬಂದಿದೆ? ಎಸ್ ಐ ಟಿ ರಮೇಶ್ ವಿಚಾರಣೆ ನಡೆಸಿದಾಗ ಕಂಡುಬಂದಿರುವ ಅಂಶಗಳೇನು? ಎಸ್ ಐ ಟಿ ಯಾವ ಆಧಾರದ ಮೇಲೆ ಪ್ರಶ್ನೆ ಮಾಡಬಹುದು? ಆ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು? ಯಾವ ವಿಚಾರ ಪ್ರಸ್ತಾಪ ಮಾಡಬಾರದು? ಯಾವ ವಿಚಾರ ಪ್ರಸ್ತಾಪ ಮಾಡಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿದ್ದಪಡಿಸಿಕೊಂಡೇ ಇಬ್ಬರೂ ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ನಾವು ಯಾರ ಬಳಿಯ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಮಾಧ್ಯಮದಲ್ಲಿದ್ದ ಕಾರಣ ಯುವತಿ ನಮ್ಮನ್ನು ಸಂಪರ್ಕಿಸಿದ್ದಳು. ಸಚಿವರಿಂದ ಅನ್ಯಾಯವಾಗಿದೆ ಎಂದು ದೂರಿ ನ್ಯಾಯ ಕೊಡಿಸಲು ಮನವಿ ಮಾಡಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನಾವು ಸಂತ್ರಸ್ಥ ಯುವತಿಗೆ ನ್ಯಾಯ ಕೊಡಿಸಲು ಮುಂದಾಗಿದ್ದೆವು ಎಂದು ಆರೋಪಿಗಳು ಎಸ್ಐಟಿ ತಂಡಕ್ಕೆ ತಿಳಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾದ ನರೇಶ್, ಶ್ರವಣ್! ಮುಂದೇನು?
(Ramesh Jarkiholi CD case SIT investigation accused in terms of victim lady)