ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ

| Updated By: Skanda

Updated on: Jun 14, 2021 | 2:59 PM

Corona Vaccine: ಸೋಂಕಿಗೆ ತುತ್ತಾಗದವರು ಮೊದಲ ಡೋಸ್​ ಪಡೆದಾಗ ಅವರ ದೇಹದಲ್ಲಿ ಎಷ್ಟು ಪ್ರತಿಕಾಯ ಸೃಷ್ಟಿಯಾಗುತ್ತದೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರತಿಕಾಯ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬರುತ್ತದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ.

ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಲಸಿಕೆ ಪಡೆದವರಿಗೆ ಶುಭಸುದ್ದಿ; ಮೊದಲ ಡೋಸ್​ನಲ್ಲೇ ಹೆಚ್ಚು ಪ್ರತಿಕಾಯ ಸೃಷ್ಟಿ ಎಂದ ಅಧ್ಯಯನ
ಸಾಂಕೇತಿಕ ಚಿತ್ರ
Follow us on

ಹೈದರಾಬಾದ್: ಕೊರೊನಾ ಎರಡನೇ ಅಲೆ ಬಂದ ನಂತರ ಲಸಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದ್ದು ಸಂಭವನೀಯ ಮೂರನೇ ಅಲೆಯನ್ನು ತಡೆಯಬೇಕೆಂದರೆ ಲಸಿಕೆಯನ್ನು ತೆಗೆದುಕೊಳ್ಳುವುದು ಬಹುಮುಖ್ಯ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಏಷ್ಯನ್ ಇನ್ಸ್‌ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ‌ ಅಧ್ಯಕ್ಷ ಡಾ.ನಾಗೇಶ್ವರ ರೆಡ್ಡಿ ದೇಹದಲ್ಲಿನ ಪ್ರತಿಕಾಯಗಳ ಬಗ್ಗೆ ಹೊಸ ಅಧ್ಯಯನವೊಂದನ್ನು ನಡೆಸಿ ಅದರ ವರದಿ ಮಂಡಿಸಿದ್ದಾರೆ. ಕೊರೊನಾ ಸೋಂಕು ಬಂದು ಗುಣಮುಖರಾದವರು ಮೊದಲ ಡೋಸ್ ಪಡೆದಾಗ ಉಳಿದವರಿಗಿಂತ ಹೆಚ್ಚು ಪ್ರತಿಕಾಯ ಅವರ ದೇಹದಲ್ಲಿ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಅಂತಾರಾಷ್ಟ್ರೀಯ ಜರ್ನಲ್​ಗಳಲ್ಲಿ ‌ಲೇಖನ ಪ್ರಕಟವಾಗಿದ್ದು, ಭಾರತದಲ್ಲಿರುವ 3 ಕಂಪನಿಗಳ ಕೊರೊನಾ ಲಸಿಕೆಗಳಿಂದ ಹೆಚ್ಚು ಪ್ರತಿಕಾಯ ಸೃಷ್ಟಿಯಾಗುತ್ತಿದೆ. ಸೋಂಕಿಗೆ ತುತ್ತಾಗದವರು ಮೊದಲ ಡೋಸ್​ ಪಡೆದಾಗ ಅವರ ದೇಹದಲ್ಲಿ ಎಷ್ಟು ಪ್ರತಿಕಾಯ ಸೃಷ್ಟಿಯಾಗುತ್ತದೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಪ್ರತಿಕಾಯ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬರುತ್ತದೆ ಎಂದು ಅಧ್ಯಯನದ ವರದಿಗಳು ತಿಳಿಸಿವೆ.

ಈ ಮೊದಲು ಕೂಡಾ ಕೊರೊನಾ ಸೋಂಕು ತಗುಲಿದ್ದವರಲ್ಲಿ ಹೆಚ್ಚಿನ ರೋಗ ನಿರೋಧಕ ಜೀವಕೋಶಗಳು ಕಂಡು ಬರುತ್ತಿವೆ ಎಂದು ಹೈದರಾಬಾದ್​ನ ಏಷ್ಯನ್ ಇನ್ಸ್ ಟಿಟ್ಯೂಟ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ‌ ಅಧ್ಯಕ್ಷ ಡಾ.ನಾಗೇಶ್ವರ ರೆಡ್ಡಿ ಹೇಳಿದ್ದರು. ಇದೀಗ ಕೊರೊನಾ ಸೋಂಕು ತಗುಲಿದ್ದವರು ಲಸಿಕೆಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಬಗ್ಗೆ ನಡೆದ ಅಧ್ಯಯನದಲ್ಲಿ ಕೊರೊನಾ ಸೋಂಕು ತಗುಲಿದ್ದವರ ದೇಹದಲ್ಲಿ ಮೊದಲ ಡೋಸ್ ಕೊರೊನಾ ಲಸಿಕೆಯಿಂದ ಹೆಚ್ಚಿನ ಪ್ರತಿಕಾಯಗಳು ಸೃಷ್ಟಿಯಾಗುತ್ತದೆ ಎಂಬುದನ್ನು ವರದಿಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕಿಗೆ ತುತ್ತಾದವರ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗುವ ಕಾರಣ ಯಾರು ಸೋಂಕಿಗೆ ತುತ್ತಾಗದೇ ಉಳಿದಿರುವರೋ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಕೆಲಸ ಆಗಬೇಕು. ಸ್ವಾಭಾವಿಕವಾಗಿ ಪ್ರತಿಕಾಯ ಸೃಷ್ಟಿಯಾದವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಶಕ್ತಿ ಸಹಜವಾಗಿಯೇ ವೃದ್ಧಿಸಿರುತ್ತದೆ. ಹೀಗಾಗಿ ಲಸಿಕೆ ನೀಡುವಾಗ ಇನ್ನೂ ಸೋಂಕಿಗೆ ಒಳಗಾಗದವರಿಗೆ ಮೊದಲು ನೀಡುವುದು ಉತ್ತಮ ಯೋಚನೆ ಎಂದು ವಿಶ್ವದ ಬೇರೆ ಬೇರೆ ಭಾಗದ ತಜ್ಞರು ತಿಳಿಸಿದ್ದರು.

ಇದನ್ನೂ ಓದಿ:
Antibody Cocktail: ಕೊರೊನಾ ವಿರುದ್ಧ ಪರಿಣಾಮಕಾರಿ ಔಷಧಿ ಆಗುತ್ತಾ ಆ್ಯಂಟಿಬಾಡಿ ಕಾಕ್​ಟೇಲ್? ಇಲ್ಲಿದೆ ವಿವರ 

ಜನರಲ್ಲಿ ಕೊರೊನಾ ನಿರೋಧಕ ಶಕ್ತಿಯ ಮಾಹಿತಿ ಕಲೆಹಾಕಲು ‘ಸೆರೊ ಸರ್ವೆ’ಗೆ ಮುಂದಾದ ಕೇಂದ್ರ ಸರ್ಕಾರ