ಇಸ್ರೇಲ್​ ನೂತನ ಪ್ರಧಾನಿ ನಫ್ತಾಲಿ ಬೆನೆಟ್​​ರಿಗೆ ಅಭಿನಂದನೆ, ಮಾಜಿ ಪ್ರಧಾನಿ ಬೆಂಜಮಿನ್​ ನೆತನ್ಯಾಹೂರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ

| Updated By: Lakshmi Hegde

Updated on: Jun 14, 2021 | 3:17 PM

Narendra Modi: ಇಬ್ಬರೂ ನಾಯಕರಿಗೂ ಟ್ವೀಟ್​ ಮೂಲಕವೇ ಅಭಿನಂದನೆ, ಕೃತಜ್ಞತೆ ಸಲ್ಲಿಸಿ, ಭಾರತ ಮತ್ತು ಇಸ್ರೇಲ್​ ನಡುವಿನ ಸಂಬಂಧವನ್ನು ಸ್ಮರಿಸಿದ್ದಾರೆ.

ಇಸ್ರೇಲ್​ ನೂತನ ಪ್ರಧಾನಿ ನಫ್ತಾಲಿ ಬೆನೆಟ್​​ರಿಗೆ ಅಭಿನಂದನೆ, ಮಾಜಿ ಪ್ರಧಾನಿ ಬೆಂಜಮಿನ್​ ನೆತನ್ಯಾಹೂರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ಜೆರುಸೇಲಂ: ಇಸ್ರೇಲ್​ನ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಫ್ತಾಲಿ ಬೆನೆಟ್​ರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಹಾಗೇ ಹಿಂದಿನ ಪ್ರಧಾನಮಂತ್ರಿ ಬೆಂಜಮಿನ್​ ನೆತನ್ಯಾಹು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಬ್ಬರೂ ನಾಯಕರಿಗೂ ಟ್ವೀಟ್​ ಮೂಲಕವೇ ಅಭಿನಂದನೆ, ಕೃತಜ್ಞತೆ ಸಲ್ಲಿಸಿ, ಭಾರತ ಮತ್ತು ಇಸ್ರೇಲ್​ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸ್ಮರಿಸಿದ್ದಾರೆ.

ಇಸ್ರೇಲ್​​ನ ನೂತನ ಪ್ರಧಾನಮಂತ್ರಿ ನಫ್ತಾಲಿ ಬೆನೆಟ್​ರಿಗೆ ಅಭಿನಂದನೆಗಳು. ಭಾರತ-ಇಸ್ರೇಲ್​ ರಾಜತಾಂತ್ರಿಕ ಸಂಬಂಧದ ಉನ್ನತೀಕರಣದ 30ನೇ ವರ್ಷವನ್ನು ಮುಂದಿನ ವರ್ಷ ನಾವು ಆಚರಿಸಲಿದ್ದೇವೆ. ಆ ಹೊತ್ತಲ್ಲಿ ನಿಮ್ಮನ್ನು ಭೇಟಿಯಾಗಲು ಮತ್ತು ನಮ್ಮೆರಡು ದೇಶಗಳ ನಡುವಿನ ಕಾರ್ಯತಂತ್ರವನ್ನು ವಿಸ್ತರಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್​ ಮೂಲಕ ಬೆಂಜಮಿನ್​ ನೆತನ್ಯಾಹುರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇಸ್ರೇಲ್​​ನ ಪ್ರಧಾನಿಯಾಗಿ, ಯಶಸ್ವಿಯಾಗಿ ನಿಮ್ಮ ಅಧಿಕಾರ ಅವಧಿಯನ್ನು ಸಂಪೂರ್ಣಗೊಳಿಸಿದ್ದೀರಿ. ಭಾರತ-ಇಸ್ರೇಲ್​ ರಾಷ್ಟ್ರಗಳ ಕಾರ್ಯತಂತ್ರ ಸಹಭಾಗಿತ್ವದ ಬಗ್ಗೆ ನಿಮಗೆ ವೈಯಕ್ತಿಕವಾಗಿ ಇದ್ದ ವಿಶೇಷ ಗಮನ ಮತ್ತು ನೀವದನ್ನು ಮುನ್ನಡೆಸಿದ ರೀತಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಬೆಂಜಮಿನ್​ ನೇತನ್ಯಾಹೂ ಅವರ 12 ವರ್ಷದ ಅವಧಿ ನಿನ್ನೆಗೆ ಮುಗಿದು, ಇಂದು ಬೆಳಗ್ಗೆ ಇಸ್ರೇಲ್​ನಲ್ಲಿ ನಫ್ತಾಲಿ ಬೆನೆಟ್ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆನೆಟ್​, ನೇತನ್ಯಾಹೂ ಅವರ ಮಾಜಿ ಮಿತ್ರನೇ ಆಗಿದ್ದಾರೆ.

ಇದನ್ನೂ ಓದಿ: ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ

(PM Narendra Modi congratulates Israel Prime Minister Naftali Bennet)

 

Published On - 3:13 pm, Mon, 14 June 21