ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ

Adani group of companies: ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಕೂಡ ಕಳೆದ ಒಂದು ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಶೇ. 200 ರಿಂದ ಶೇ. 1000 ದವರೆಗೂ ಏರಿಕೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಷೇರು ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲು ಏನು ಕಾರಣ ಷೇರು ಬೆಲೆಯಲ್ಲಿ ಏನಾದರೂ ಮೋಸ ನಡೆದಿದೆಯೇ ಎಂಬ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ.

ಷೇರುಪೇಟೆಯಲ್ಲಿ ಪತರಗುಟ್ಟಿದ ಅದಾನಿ ಕಂಪನಿಯ ಷೇರು ಬೆಲೆ; ಮೂರು ಗಂಟೆಯಲ್ಲಿ 92 ಸಾವಿರ ಕೋಟಿ ರೂ ಗಂಟು ನಷ್ಟ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 14, 2021 | 4:43 PM

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು (ಜೂನ್ 14) ಅದಾನಿ ಕಂಪನಿಗಳ ಷೇರುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿದೆ. ಇದಕ್ಕೆ ಅದಾನಿ ಗ್ರೂಪ್ ನಲ್ಲಿ ಹೂಡಿಕೆ ಮಾಡಿರುವ ಮೂರು ವಿದೇಶಿ ಫಂಡ್​ಗಳ ಡಿಮ್ಯಾಟ್ ಖಾತೆಯನ್ನು ನಿರ್ಬಂಧ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿಯೇ ಕಾರಣ. ಅದಾನಿ ಕಂಪನಿಯು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಕಾಯಿದೆಯಡಿ ಕೆವೈಸಿ ನಿಯಮ ಪಾಲಿಸದೇ ಇರುವುದೇ ಈ ಖಾತೆ ನಿರ್ಬಂಧಕ್ಕೆ  ಕಾರಣ ಎನ್ನಲಾಗಿದ್ದು, ಪರಿಣಾಮವಾಗಿ ಭಾರತೀಯ ಷೇರುಪೇಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಶೇ. 5 ರಿಂದ 20 ರಷ್ಟು ಕುಸಿತ ಕಾಣುವಂತಾಗಿದೆ.

ಭಾರತೀಯ ಷೇರುಪೇಟೆಯಲ್ಲಿ ವಾರದ ಆರಂಭದ ದಿನವೇ ಅದಾನಿ ಗ್ರೂಪ್ ಆಫ್ ಕಂಪನೀಸ್ ಗೆ ಬ್ಲಡ್ ಬಾತ್ (ರಕ್ತದೋಕುಳಿ) ಅನುಭವ ಆಗಿದೆ. ಅದಾನಿ ಗ್ರೂಪ್ ಆಫ್ ಕಂಪನೀಸ್ ಷೇರುಗಳ ಬೆಲೆ ಶೇ. 5 ರಿಂದ ಶೇ. 20 ರವರೆಗೆ ಕುಸಿದಿವೆ. ಇಂದು ಷೇರುಪೇಟೆ ಶುರುವಾದ ಮೂರೇ ಗಂಟೆಯಲ್ಲಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡಿವೆ. ಷೇರುಪೇಟೆಯಲ್ಲಿ ಅದಾನಿ ಕಂಪನಿಗಳ ಒಟ್ಟಾರೆ ಷೇರು ಮಾರುಕಟ್ಟೆ ಬಂಡವಾಳ 8.58 ಲಕ್ಷ ಕೋಟಿ ರೂಪಾಯಿ. ಆದರೆ ಇವತ್ತು ಒಂದೇ ದಿನ ಕೇವಲ ಮೂರು ನಾಲ್ಕು ಗಂಟೆಗಳಲ್ಲೇ ಅದಾನಿ ಕಂಪನಿಗಳ ಷೇರು ಬೆಲೆಯಲ್ಲಿ 91,704 ಕೋಟಿ ರೂಪಾಯಿ ಕುಸಿತ ಆಗಿದೆ. ಅದಾನಿ ಗ್ರೂಪ್ ಕಂಪನಿಗಳಲ್ಲಿ ಯಾವ್ಯಾವ ಕಂಪನಿಯ ಷೇರು ಬೆಲೆ ಎಷ್ಟು ಕುಸಿದಿದೆ ಎನ್ನುವುದರ ವಿವರ ಹೀಗಿದೆ.

ಅದಾನಿ ಗ್ರೂಪ್ ಷೇರು ಬೆಲೆ ಕುಸಿತ

ಅದಾನಿ ಪೋರ್ಟ್ಸ್ – 27,635 ಕೋಟಿ ರೂಪಾಯಿ ಕುಸಿತ ಅದಾನಿ ಪವರ್ – 2,854 ಕೋಟಿ ರೂಪಾಯಿ ಕುಸಿತ ಅದಾನಿ ಟ್ರಾನ್ಸ್ ಮಿಷನ್ – 8,809 ಕೋಟಿ ರೂಪಾಯಿ ಕುಸಿತ ಅದಾನಿ ಎಂಟರ್ ಪ್ರೈಸಸ್ – 35,238 ಕೋಟಿ ರೂಪಾಯಿ ಕುಸಿತ ಅದಾನಿ ಗ್ರೀನ್ ಎನರ್ಜಿ – 8,188 ಕೋಟಿ ರೂಪಾಯಿ ಕುಸಿತ ಅದಾನಿ ಟೋಟಲ್ ಗ್ಯಾಸ್ – 8,980 ಕೋಟಿ ರೂಪಾಯಿ ಕುಸಿತ ಒಟ್ಟಾರೆ – 91,704 ಕೋಟಿ ರೂಪಾಯಿ ಕುಸಿತ

ಅದಾನಿ ಪೋರ್ಟ್ ಕಂಪನಿಯ ಷೇರು ಬೆಲೆ ಇವತ್ತು ತಲಾ 104 ರೂಪಾಯಿ ಕುಸಿತ ಕಂಡಿದೆ. ಅದಾನಿ ಪೋರ್ಟ್ ಕಂಪನಿಯ ಷೇರು ಬೆಲೆ ಇವತ್ತು ಬೆಳಿಗ್ಗೆ 9.15 ಕ್ಕೆ ಷೇರುಪೇಟೆ ವಹಿವಾಟು ಶುರುವಾದಾಗ, 840 ರೂಪಾಯಿ ಇತ್ತು. ಮಧ್ಯಾಹ್ನ 12.24ರ ಹೊತ್ತಿಗೆ 104 ರೂಪಾಯಿ ಕುಸಿತ ಕಂಡು 736ರೂಪಾಯಿಗೆ ಬಂದು ತಲುಪಿತ್ತು. ಶೇ.12.49 ರಷ್ಟು ಕುಸಿತ ಕಂಡಿತ್ತು.

ಇನ್ನು ಅದಾನಿ ಎಂಟರ್ ಪ್ರೈಸಸ್ ಕಂಪನಿಯ ಷೇರುಗಳ ಬೆಲೆ ಬೆಳಿಗ್ಗೆ 1602 ರೂಪಾಯಿ ಇದಿದ್ದು, ಮಧ್ಯಾಹ್ನದ ವೇಳೆಗೆ 178 ರೂಪಾಯಿ ಕುಸಿತ ಕಂಡು, 1423ಕ್ಕೆ ಬಂದು ನಿಂತಿತ್ತು. ಅದಾನಿ ಎಂಟರ್ ಪ್ರೈಸಸ್ ಷೇರುಗಳ ಬೆಲೆ ಮಧ್ಯಾಹ್ನ 12.24ರ ಹೊತ್ತಿಗೆ ಶೇ.11.15 ರಷ್ಟು ಕುಸಿತ ಕಂಡಿದ್ದವು. ಹೀಗೆ ಅದಾನಿ ಟ್ರಾನ್ಸ್ ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟೋಟಲ್ ಗ್ಯಾಸ್ ಕಂಪನಿಗಳ ಷೇರು ಬೆಲೆ ತಲಾ ಶೇ.5 ರಷ್ಟು ಕುಸಿತ ಕಂಡಿವೆ.

ಅದಾನಿ ಗ್ರೂಪ್ ನಮ್ಮ ದೇಶದಲ್ಲಿ ಅಲ್ಪ ಕಾಲಾವಧಿಯಲ್ಲಿ ಭಾರೀ ಬೆಳವಣಿಗೆ ಕಂಡ ಕಂಪನಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದಾನಿ ಗ್ರೂಪ್ ಪ್ರವರ್ತಕ ಗೌತಮ್ ಅದಾನಿ ಆಪ್ತರು. ಗೌತಮ್ ಅದಾನಿ ಗುಜರಾತ್ ರಾಜ್ಯದವರು. ರಿಲಯನ್ಸ್ ನಂತೆ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳಲ್ಲಿ ಅದಾನಿ ಗ್ರೂಪ್ ಆಫ್ ಕಂಪನಿ ಕೂಡ ಒಂದು. ಆದರೆ, ಇಂಥ ಕಂಪನಿಯ ಷೇರುಗಳ ಬೆಲೆ ದಿಢೀರನೇ ಇಂದು ಕುಸಿಯಲು ಕಾರಣ ಕೂಡ ಇದೆ. ಹೂಡಿಕೆದಾರರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರುತ್ತಿರುವುದಿರಂದ ಷೇರುಗಳಿಗೆ ಬೇಡಿಕೆ ಕುಸಿದು ಬೆಲೆ ಕುಸಿಯುತ್ತಿದೆ.

ಅದಾನಿ ಗ್ರೂಪ್ ಕಂಪನಿಗಳ ಬೆಲೆ ಇಂದು ಷೇರುಮಾರ್ಕೆಟ್ ನಲ್ಲಿ ಕುಸಿಯಲು ನ್ಯಾಷನಲ್ ಸೆಕ್ಯೂರೀಟೀಸ್ ಡಿಪಾಸಿಟರಿ ಲಿಮಿಟೆಡ್ (NSDL) ನ ಒಂದು ಆದೇಶ ಕಾರಣ. ಎನ್‌ಎಸ್‌ಡಿಎಲ್‌, ಅದಾನಿ ಗ್ರೂಪ್ ಗೆ ಸೇರಿದ ಮೂರು ವಿದೇಶಿ ಫಂಡ್ ಗಳ ಖಾತೆಯನ್ನು ಸ್ಥಗಿತ ಮಾಡಿದೆ. ಅಲಬುಲ್ ಇನ್ ವೆಸ್ಟ್ ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಎಪಿಎಂಎಸ್ ಫಂಡ್‌ನ ಡಿಮ್ಯಾಟ್ ಖಾತೆಗಳ ನಿರ್ಬಂಧ  ಮಾಡಿದೆ.

ಈ ಮೂರು ಕಂಪನಿಗಳು 43,500 ಕೋಟಿ ರೂಪಾಯಿಯಷ್ಟು ಮೌಲ್ಯದ ಹೂಡಿಕೆಯನ್ನು ಅದಾನಿ ಸಮೂಹದ ಕಂಪೆನಿಗಳಲ್ಲಿ ಹೊಂದಿವೆ. ಮೇ 31 ಅಥವಾ ಅದಕ್ಕೂ ಮೊದಲೇ ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಮೂರು ವಿದೇಶಿ ಫಂಡ್ ಗಳ ಡಿಮ್ಯಾಟ್ ಖಾತೆ ಸ್ಥಗಿತಕ್ಕೆ ಆದೇಶ ನೀಡಿದೆ. ಆದರೆ ಜೂನ್ 13ರವರೆಗೂ ಈ ಸುದ್ದಿ ಮಾಧ್ಯಮಗಳಲ್ಲಿ ಬಹಿರಂಗವಾಗಿಯೇ ಇಲ್ಲ. ಜೂನ್ 13ರ ಭಾನುವಾರ ಸುದ್ದಿ ಬಹಿರಂಗವಾಗಿದೆ. ಹೀಗಾಗಿ ಜೂನ್ 14ರ ಸೋಮವಾರ ಅದಾನಿ ಗ್ರೂಪ್ ಕಂಪನಿಗಳ ಷೇರು ಹೂಡಿಕೆದಾರರು ಅದಾನಿ ಗ್ರೂಪ್ ಕಂಪನಿಗಳ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಿದ್ದರಿಂದ ಷೇರುಗಳ ಬೆಲೆ ಕುಸಿತ ಕಂಡಿದೆ.

ಅದಾನಿ ಕಂಪನಿಯಲ್ಲಿ ವಿದೇಶಿ ಫಂಡ್​ಗಳು ಹೊಂದಿರುವ ಮಾಲೀಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಸೆಬಿ ಹಾಗೂ ನ್ಯಾಷನಲ್ ಸೆಕ್ಯೂರೀಟೀಸ್ ಡಿಪಾಸಿಟರಿ ಲಿಮಿಟೆಡ್ ಗೆ ಸಲ್ಲಿಸಿರಲಿಲ್ಲ. ಮೂರು ಕಂಪನಿಗಳು ಮಾರಿಷನ್ ಕಂಪನಿಗಳು. ಈ ಕಂಪನಿಗಳು ಕೆವೈಸಿ ನಿಯಮ ಪಾಲಿಸಿರಲಿಲ್ಲ. ಪ್ರಿವೆನ್ಷನ್ ಆಫ್ ಮನಿ ಲ್ಯಾಂಡರಿಂಗ್ ಆ್ಯಕ್ಟ್ ನಡಿ ಕೆವೈಸಿ ನಿಯಮ ಪಾಲಿಸಿ, ಷೇರುಗಳ ಮಾಲೀಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಸೆಬಿ ಹಾಗೂ ನ್ಯಾಷನಲ್ ಸೆಕ್ಯೂರೀಟೀಸ್ ಡಿಪಾಸಿಟರಿ ಲಿಮಿಟೆಡ್ ಗೆ ಸಲ್ಲಿಸುವುದನ್ನು ಕಳೆದ ವರ್ಷದಿಂದ ಸೆಬಿ ಕಡ್ಡಾಯ ಮಾಡಿದೆ.

ಸಮರ್ಪಕವಾಗಿ ವಿವರ ಸಲ್ಲಿಸದ ಕಾರಣದಿಂದ ಅದಾನಿ ಗ್ರೂಪ್‌ನ ಮಾರಿಷಸ್ ಫಂಡ್​ಗಳ ಡಿಮ್ಯಾಟ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಸದ್ಯಕ್ಕೆ ಈ ಡಿಮ್ಯಾಟ್​ ಖಾತೆಯಲ್ಲಿ ಇರುವ ಷೇರುಗಳನ್ನು ಫಂಡ್​​ಗಳವರು ಮಾರಲು ಆಗಲ್ಲ. ಆಲಬುಲ್ ಇನ್ ವೆಸ್ಟ್ ಮೆಂಟ್ ಫಂಡ್, ಕ್ರೆಸ್ಟಾ ಫಂಡ್, ಎಪಿಎಂಎಸ್‌ ಫಂಡ್ ಗಳು ವಿದೇಶಿ ಬಂಡವಾಳ ಹೂಡಿಕೆದಾರರೆಂದು ಸೆಬಿಯಲ್ಲಿ ನೋಂದಾಯಿತವಾಗಿವೆ. ಈ ಮೂರು ಫಂಡ್ ಗಳು ಅದಾನಿ ಗ್ರೂಪ್ ಆಫ್ ಕಂಪನಿಗಳಲ್ಲಿ ಷೇರು ಪಾಲನ್ನು ಹೊಂದಿವೆ. ಈ ಮೂರು ವಿದೇಶಿ ಫಂಡ್ ಗಳು, ಅದಾನಿ ಎಂಟರ್ ಪ್ರೈಸಸ್ ನಲ್ಲಿ ಶೇ.6.82 ರಷ್ಟು ಷೇರು ಹೊಂದಿವೆ. ಅದಾನಿ ಟ್ರಾನ್ಸ್ ಮಿಷನ್ ನಲ್ಲಿ ಶೇ.8 ರಷ್ಟು ಷೇರು ಹೊಂದಿವೆ. ಅದಾನಿ ಟೋಟಲ್ ಗ್ಯಾಸ್ ನಲ್ಲಿ ಶೇ.5.92 ರಷ್ಟು ಷೇರು , ಅದಾನಿ ಗ್ರೀನ್ ನಲ್ಲಿ ಶೇ.3.58 ರಷ್ಟು ಷೇರು ಹೊಂದಿವೆ.

ಸೆಬಿ, 2019ರಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರಿಗೆ ಕೆವೈಸಿ ಘೋಷಣೆ ಕಡ್ಡಾಯ ಮಾಡಿದೆ. ಹೊಸ ನಿಯಮ ಪಾಲಿಸಲು 2020ರವರೆಗೆ ಕಾಲಾವಕಾಶ ನೀಡಲಾಗಿತ್ತು. ಹೊಸ ನಿಯಮದಡಿ, ಫಂಡ್ ಮ್ಯಾನೇಜರ್ ಸೇರಿದಂತೆ ಇನ್ನೂ ಕೆಲ ಹೆಚ್ಟುವರಿ ಮಾಹಿತಿ ನೀಡಬೇಕಾಗಿತ್ತು. ಆದರೆ ಈ ಮಾಹಿತಿಗಳನ್ನು ನೀಡಿಲ್ಲ.

ಅದಾನಿ ಗ್ರೂಪ್ ಕಂಪನಿ ಷೇರು ಬೆಲೆ ಬಗ್ಗೆಯೂ ತನಿಖೆ: ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಕೂಡ ಕಳೆದ ಒಂದು ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆ ಶೇ. 200 ರಿಂದ ಶೇ. 1000 ದವರೆಗೂ ಏರಿಕೆಯಾಗಿದೆ. ಹೀಗೆ ಒಂದೇ ವರ್ಷದಲ್ಲಿ ಷೇರು ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲು ಏನು ಕಾರಣ? ಷೇರು ಬೆಲೆಯಲ್ಲಿ ಏನಾದರೂ ಮೋಸ ನಡೆದಿದೆಯೇ ಎಂಬ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ.

ಕಳೆದೊಂದು ವರ್ಷದಲ್ಲಿ ಅದಾನಿ ಟ್ರಾನ್ಸ್ ಮಿಷನ್ ಷೇರು ಬೆಲೆ ಶೇ. 669 ರಷ್ಟು ಏರಿಕೆ ಕಂಡಿವೆ. ಅದಾನಿ ಟೋಟಲ್ ಗ್ಯಾಸ್ ಷೇರು ಬೆಲೆ ಶೇ. 339 ರಷ್ಟು ಏರಿಕೆ ಕಂಡಿವೆ. ಅದಾನಿ ಎಂಟರ್ ಪ್ರೈಸಸ್ ಷೇರು ಬೆಲೆ ಶೇ. 972 ರಷ್ಟು ಏರಿಕೆ ಕಂಡಿವೆ. ಅದಾನಿ ಗ್ರೀನ್ ಷೇರು ಬೆಲೆ ಶೇ.254 ರಷ್ಟು ಏರಿಕೆ ಕಂಡಿವೆ. ಅದಾನಿ ಪೋರ್ಟ್ಸ್ ಶೇ. 147, ಅದಾನಿ ಪವರ್ ಶೇ. 295 ರಷ್ಟು ಏರಿಕೆ ಕಂಡಿವೆ. ಇದರಿಂದಾಗಿ ಜೂನ್ 11ರ ಕಳೆದ ಶುಕ್ರವಾರ ಅದಾನಿ ಗ್ರೂಪ್ ಕಂಪನಿಗಳ ಷೇರು ಬಂಡವಾಳ ಮೌಲ್ಯ 9.5 ಲಕ್ಷ ಕೋಟಿ ರೂಪಾಯಿ ಆಗಿತ್ತು . ಗೌತಮ್ ಅದಾನಿ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ.

ಅದಾನಿ ಟ್ರಾನ್ಸ್ ಮಿಷನ್ ಕಂಪನಿಯಲ್ಲಿ ಪ್ರವರ್ತಕ ಕಂಪನಿಯಾದ ಅದಾನಿ ಗ್ರೂಪ್ ಶೇ. 74.9 ರಷ್ಟು ಷೇರು ಹೊಂದಿದೆ. ಅದಾನಿ ಎಂಟರ್ ಪ್ರೈಸಸ್, ಅದಾನಿ ಟೋಟಲ್ ಗ್ಯಾಸ್ ನಲ್ಲೂ ಪ್ರವರ್ತಕ (ಪ್ರಮೋಟರ್) ಗ್ರೂಪ್ ಶೇ. 74 ರಷ್ಟು ಷೇರು ಹೊಂದಿದೆ. ಅದಾನಿ ಗ್ರೀನ್ ನಲ್ಲಿ ಪ್ರವರ್ತಕ ಗ್ರೂಪ್ ಶೇ. 56ರಷ್ಟು ಷೇರು ಹೊಂದಿದೆ.

(ಲೇಖನ: ಎಸ್.​ ಚಂದ್ರಮೋಹನ್​, ಹಿರಿಯ ವರದಿಗಾರ, ಟಿವಿ9)

(Adani group of companies bloodbath in sensex lose heavily within hours)

ಕೊರೊನಾ ಲಸಿಕೆಯ ಮೇಲೆ ಜಿಎಸ್‌ಟಿ ಬದಲಾವಣೆ ಇಲ್ಲ; ಉಳಿದ ಕೊರೊನಾ ಸಾಮಗ್ರಿ ಮೇಲೆ ಎಷ್ಟು ಜಿಎಸ್‌ಟಿ ಕಡಿಮೆಯಾಯ್ತು?

Published On - 3:03 pm, Mon, 14 June 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್