ಟೊಯೋಟಾ ಮೋಟಾರ್​ನಿಂದ ಮತ್ತೆ ಉತ್ಪಾದನೆ ಆರಂಭ; ಕರ್ನಾಟಕದ ಎರಡು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಣೆ ಶುರು

ಟೊಯೋಟಾ ಮೋಟಾರ್​ನಿಂದ ಕರ್ನಾಟಕದ ಎರಡು ಕಾರ್ಖಾನೆಗಳಲ್ಲಿ ಮತ್ತೆ ಕಾರ್ಯಾರಂಭವಾಗಿದೆ. ಕೊರೊನಾ ಕಾರಣಕ್ಕೆ ಕಾರ್ಯ ನಿರ್ವಹಣೆಯನ್ನು ನಿಲ್ಲಿಸಲಾಗಿತ್ತು.

ಟೊಯೋಟಾ ಮೋಟಾರ್​ನಿಂದ ಮತ್ತೆ ಉತ್ಪಾದನೆ ಆರಂಭ; ಕರ್ನಾಟಕದ ಎರಡು ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಣೆ ಶುರು
2ನೇ ಬಾರಿ ಲಾಕ್‌ಔಟ್ ಘೋಷಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ
Follow us
TV9 Web
| Updated By: Srinivas Mata

Updated on: Jun 15, 2021 | 2:52 PM

ಕರ್ನಾಟಕದಲ್ಲಿ ಇರುವ ಎರಡು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ಮತ್ತೆ ಆರಂಭಿಸಲಾಗಿದೆ ಎಂದು ಮಂಗಳವಾರದಂದು ಟೊಯೋಟಾ ಮೋಟಾರ್ ಕಾರ್ಪೊರೇಷನ್​ನ ಘಟಕವಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಲಿಮಿಟೆಡ್​ (ಟಿಕೆಎಂ) ತಿಳಿಸಿದೆ. ಕೊವಿಡ್- 19 ಪ್ರಕರಣಗಳು ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಅಮಾನತು ಮಾಡಲಾಗಿತ್ತು. ಜೂನ್ 15, 2021ರಿಂದ ಬಿಡದಿಯ ಘಟಕದಲ್ಲಿ ಭಾಗಶಃ ಕಾರ್ಯಾಚರಣೆ ಪುನರಾರಂಭ ಮಾಡಿರುವುದಾಗಿ ಟಿಕೆಎಂ ಖಾತ್ರಿ ಮಾಡಿದೆ. ಶೇ 50ರಷ್ಟು ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಟಿಕೆಎಂನಿಂದ ಕಾರ್ಯನಿರ್ವಹಣೆ ಮತ್ತು ಎಲ್ಲ ಸಿಬ್ಬಂದಿಗೆ ಹೊಸ ಸಾಮಾನ್ಯ ಸ್ಥಿತಿಗೆ ಹೊಂದಿಕೊಳ್ಳಲು ತರಬೇತಿ ನೀಡಲಾಗುವುದು. ಪ್ರಕ್ರಿಯೆ ಹಾಗೂ ವ್ಯವಸ್ಥೆಗಳು ಈ ಎರಡೂ ವಿಚಾರಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲಾಗುವುದು. ಇನ್ನು ಸಂಪೂರ್ಣ ಕಾರ್ಯ ನಿರ್ವಹಣೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರದಂತೆಯೇ ನಡೆಸಿಕೊಂಡು ಹೋಗಲಾಗುವುದು ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ ತಿಂಗಳ ಮೊದಲ ವಾರದಿಂದಲೇ ವಾಹನ ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ ಕಠಿಣ ಲಾಕ್​ಡೌನ್ ಕ್ರಮ ಜಾರಿಗೆ ತರಲಾಯಿತು. ಆ ನಂತರ ದೆಹಲಿ, ಹರ್ಯಾಣ, ಕರ್ನಾಟಕ, ತಮಿಳುನಾಡು ಮತ್ತು ಇತರ ರಾಜ್ಯಗಳಲ್ಲೂ ತರಲಾಯಿತು. ಮಾರುತಿ ಸುಜುಕಿ, ಹೀರೋ ಮೋಟೋಕಾರ್ಪ್, ಹುಂಡೈ ಮತ್ತು ಇತರ ಕಂಪೆನಿಗಳು ಒಂದೋ ಉತ್ಪಾದನೆಯನ್ನೇ ನಿಲ್ಲಿಸಿದವು ಅಥವಾ ತಯಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಿದವು. ಆದರೆ ಬಜಾಜ್ ಆಟೋದಂಥ ಕೆಲವು ಕಂಪೆನಿಗಳು ರಫ್ತು ಆರ್ಡರ್​ಗಳನ್ನು ಪೂರೈಸುವ ಸಲುವಾಗಿ ಸೀಮಿತ ಸಾಮರ್ಥ್ಯದೊಂದಿಗೆ ಕೆಲಸ ಮುಂದುವರಿಸಿದವು. ಸ್ಥಿರವಾಗಿ ಕೊರೊನಾ ಸೋಂಕು ಪ್ರಮಾಣ ಕಡಿಮೆ ಆಗುತ್ತಾ ಬಂದ ಮೇಲೆ, ಅದರಲ್ಲೂ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸೋಂಕು ಕಡಿಮೆ ಆಗುತ್ತಾ ಬಂದ ಮೇಲೆ ಮೇ ತಿಂಗಳ ಮಧ್ಯಭಾಗದಿಂದ ಕಾರ್ಯ ನಿರ್ವಹಣೆ ಶುರು ಮಾಡಿದವು.

ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡಾಗಿನಿಂದ ನಮ್ಮ ಉದ್ದೇಶದಲ್ಲಿ ಸ್ಪಷ್ಟತೆ ಇದೆ. ಮೊದಲಿಗೆ ನಮ್ಮ ಸಿಬ್ಬಂದಿಯ, ಇತರ ಪಾಲುದಾರರ ಭದ್ರತೆ ಹಾಗೂ ಸುರಕ್ಷತೆಯೇ ಆದ್ಯತೆ. ಇನ್ನು ಉತ್ಪಾದನೆ ವಿಚಾರದಲ್ಲಿ ಎಲ್ಲ ಸಾಧ್ಯತೆಗಳು ಹಾಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ನಮ್ಮ ಗ್ರಾಹಕರ ತಕ್ಷಣದ ಸಂಚಾರ ಅಗತ್ಯ ವ್ಯವಸ್ಥೆಗೆ ಏನು ಬೇಕೋ ಅದು ಮಾಡಿದೆವು ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ಕೆಲವು ತಿಂಗಳಿಂದಲೂ ಹಲವು ವಾಹನ ತಯಾರಕರು ತಮ್ಮ ಉತ್ಪಾದನೆ ಹಾಗೂ ಮಾರಾಟ ವಿಭಾಗದ ಸಿಬ್ಬಂದಿಗೆ ಲಸಿಕೆ ಕೊಡಿಸುವುದರಲ್ಲಿ ನಿರತವಾಗಿವೆ. ಕೆಲವು ತಯಾರಕರಂತೂ ಉದ್ಯೋಗಿಗಳಿಗೆ ತಾವೇ ಹಾಕಿಸಿಕೊಡುತ್ತಿವೆ.

ಇದನ್ನೂ ಓದಿ: ಪ್ರತಿಷ್ಠಿತ ಟೊಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿ ಲಾಕ್​​ ಔಟ್​, ಯಾಕೆ?

(Toyota Motor resume operation in two factories of Karnataka after Corona lockdown)

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ