ಪ್ಯಾನ್ ಕಾರ್ಡ್ ಕಳೆದುಹೋಗಿದೆಯಾ? ನಂಬರ್​ ಕೂಡ ನೆನಪಿಲ್ವಾ?-ಆದರೂ ಸುಲಭವಾಗಿ ಇ-ಪ್ಯಾನ್​ ಡೌನ್​ಲೋಡ್​ ಮಾಡುವ ವಿಧಾನ ಇಲ್ಲಿದೆ ನೋಡಿ..

E-PAN: ಹೀಗೆ ತಕ್ಷಣಕ್ಕೆ ಇ-ಪ್ಯಾನ್​ ಕಾರ್ಡ್ ಡೌನ್​​ಲೋಡ್​ ಮಾಡುವ ವ್ಯವಸ್ಥೆ ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್​ ಆದ incometax.gov.inನಲ್ಲಿದೆ.

ಪ್ಯಾನ್ ಕಾರ್ಡ್ ಕಳೆದುಹೋಗಿದೆಯಾ? ನಂಬರ್​ ಕೂಡ ನೆನಪಿಲ್ವಾ?-ಆದರೂ ಸುಲಭವಾಗಿ ಇ-ಪ್ಯಾನ್​ ಡೌನ್​ಲೋಡ್​ ಮಾಡುವ ವಿಧಾನ ಇಲ್ಲಿದೆ ನೋಡಿ..
ಪ್ಯಾನ್ ಕಾರ್ಡ್ ಪ್ರಾತಿನಿಧಿಕ ಚಿತ್ರ
Follow us
| Updated By: Lakshmi Hegde

Updated on:Jun 15, 2021 | 5:58 PM

ಪ್ರಸ್ತುತ ದಿನಗಳಲ್ಲಿ ಆಧಾರ್​ ಕಾರ್ಡ್​, ಪ್ಯಾನ್​ ಕಾರ್ಡ್​ಗಳೆಲ್ಲ ಜೀವನದ ಅವಿಭಾಜ್ಯ ಅಂಶಗಳೇ ಆಗುತ್ತಿವೆ. ಯಾವುದೇ ಬ್ಯಾಂಕಿಂಗ್​ ವ್ಯವಹಾರ, ವಿದೇಶ ಪ್ರಯಾಣ, ಐಟಿ ರಿಟರ್ನ್​ನಂಥ ಸಂದರ್ಭಗಳಲ್ಲಿ ಈ ದಾಖಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ಆದಾಯ ತೆರಿಗೆ ಪಾವತಿ (ITR) ಸಂದರ್ಭದಲ್ಲಿ ಪ್ಯಾನ್​ ಕಾರ್ಡ್​ ಅತ್ಯಂತ ಪ್ರಮುಖವಾಗಿ ಅಗತ್ಯವಿರುವ ಕೆವೈಸಿ ದಾಖಲೆಯಾಗಿದೆ. ಇನ್ನು ಕ್ರೆಡಿಟ್​ ಕಾರ್ಡ್​, ಡೆಬಿಟ್​ ಕಾರ್ಡ್​ ಪಡೆಯಲೂ ಪ್ಯಾನ್​ ಕಾರ್ಡ್ ಬೇಕು. ಇಷ್ಟೆಲ್ಲ ಮಹತ್ವವಿರುವ ಪ್ಯಾನ್​ ಕಾರ್ಡ್​ ಒಂದೊಮ್ಮೆ ಕಳೆದೇ ಹೋದರೆ ಅಥವಾ ನೀವು ಎಲ್ಲೋ ಇಟ್ಟು ಮರೆತುಬಿಟ್ಟಿದ್ದರೆ ಏನು ಮಾಡುವುದು? ಹಾಗೊಮ್ಮೆ ನೀವು ಪ್ಯಾನ್​ ಕಾರ್ಡ್​ ಕಳೆದುಕೊಂಡ ಸಮಯದಲ್ಲೇ ಯಾವುದೋ ಕಾರಣಕ್ಕೆ ಅರ್ಜೆಂಟ್​ ಆಗಿ ಬೇಕೆಂದರೆ ಗಾಬರಿ ಪಡುವ ಕೆಲಸವಿಲ್ಲ. ಇದೀಗ ತ್ವರಿತವಾಗಿ ಪ್ಯಾನ್​ ಕಾರ್ಡ್​ ಪಡೆಯಲು ಆದಾಯ ತೆರಿಗೆ ಇಲಾಖೆ ತನ್ನ ವೆಬ್​ಸೈಟ್​​ನಲ್ಲಿ ಅವಕಾಶ ಕಲ್ಪಿಸಿದೆ.

ಹೀಗೆ ತಕ್ಷಣಕ್ಕೆ ಇ-ಪ್ಯಾನ್​ ಕಾರ್ಡ್ ಡೌನ್​​ಲೋಡ್​ ಮಾಡುವ ವ್ಯವಸ್ಥೆ ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್​ ಆದ incometax.gov.inನಲ್ಲಿದೆ. ಈ ಹೊಸ ಪೋರ್ಟಲ್​​ನ ವಿಶೇಷತೆ ಏನೆಂದರೆ ಪ್ಯಾನ್​ ಕಾರ್ಡ್ ಕಳೆದುಕೊಂಡವರಿಗೆ ಪ್ಯಾನ್​ ನಂಬರ್​ ನೆನಪು ಇಲ್ಲದೆ ಹೋದರೂ ಇ-ಪ್ಯಾನ್​ ಕಾರ್ಡ್ ಡೌನ್​ ಲೋಡ್​ ಮಾಡಿಕೊಳ್ಳಬಹುದು. ಆದರೆ ಆಧಾರ್ ಕಾರ್ಡ್​ ನಂಬರ್​ ಗೊತ್ತಿರಬೇಕು. ಮುಖ್ಯವಾಗಿ ನಿಮ್ಮ ಆಧಾರ್​ ಮತ್ತು ಪ್ಯಾನ್​ ಲಿಂಕ್​ ಆಗಿರಬೇಕು. ನೀವಿನ್ನೂ ಪ್ಯಾನ್​-ಆಧಾರ್​ ಲಿಂಕ್​ ಮಾಡಿಕೊಳ್ಳದಿದ್ದರೆ ಹೊಸ ಪೋರ್ಟಲ್​ ಮೂಲಕ ಆಧಾರ್​ ನಂಬರ್ ಕೊಟ್ಟು ಇ-ಪ್ಯಾನ್​ ಡೌನ್​ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ.

ಇಲ್ಲಿದೆ ನೋಡಿ ಆದಾಯ ತೆರಿಗೆ ಇಲಾಖೆಯ ಹೊಸ ಪೋರ್ಟಲ್​ನಲ್ಲಿ, ಆಧಾರ್​ ಕಾರ್ಡ್ ನಂಬರ್​ ಕೊಟ್ಟು ಇ-ಪ್ಯಾನ್​ ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ. 1. ಮೊದಲು incometax.gov.in ವೆಬ್​ಸೈಟ್​ಗೆ ಲಾಗಿನ್​ ಆಗಿ 2. ಅಲ್ಲಿ ಎಡಭಾಗದ ಕೆಳಗೆ ಇರುವ Our Services ಮೇಲೆ ಕ್ಲಿಕ್​ ಮಾಡಿ 3. Instant E PAN ಎಂಬಲ್ಲಿ ಕ್ಲಿಕ್​ ಮಾಡಿ 4. ಮತ್ತೆ ಅಲ್ಲಿ ಕಾಣುವ New E PAN ಆಯ್ಕೆ ಮಾಡಿ 5. ನಂತರ ಆಧಾರ್​ ಕಾರ್ಡ್ ನಂಬರ್ ನಮೂದಿಸಿ(ಪಾನ್​ ಕಾರ್ಡ್ ನಂಬರ್ ನೆನಪಿದ್ದರೆ ಅದನ್ನೇ ಹಾಕಿ) 6. ಅಲ್ಲಿ ತೋರಿಸಲಾಗುವ ಷರತ್ತುಗಳನ್ನು ಓದಿ, Accept ಎಂಬಲ್ಲಿ ಕ್ಲಿಕ್​ ಮಾಡಿ. 7. ಆಗ ನಿಮ್ಮ ರಿಜಿಸ್ಟರ್ಡ್​ ಮೊಬೈಲ್ ನಂಬರ್​ಗೆ ಒಟಿಪಿ ಸಂಖ್ಯೆ ಬರುತ್ತದೆ. ಅದನ್ನು ನಮೂದಿಸಿ. 8. ಅಲ್ಲಿ ಕಾಣಿಸುವ ವಿವರಗಳನ್ನು ಓದಿ, ನಿಮ್ಮ ಮೇಲ್ ಐಡಿ ನಮೂದಿಸಿ. ನಂತರ Confirm ಎಂಬಲ್ಲಿ ಕ್ಲಿಕ್​ ಮಾಡಿ.

ಇಷ್ಟು ಮಾಡಿದ ಬಳಿಕ ನಿಮ್ಮ ಇ-ಪ್ಯಾನ್​ ನಿಮ್ಮ ಇಮೇಲ್​ಗೆ ಬಂದಿರುತ್ತದೆ. ನಿಮ್ಮ ಮೇಲ್​ ಐಡಿ ಲಾಗಿನ್​ ಆಗಿ ಇ-ಪ್ಯಾನ್​ ಕಾರ್ಡ್ ಡೌನ್​ ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Corona Vaccine: ಕೊವಿಡ್ ಲಸಿಕೆ ಪಡೆಯಲು ಆನ್​ಲೈನ್ ರಿಜಿಸ್ಟ್ರೇಶನ್ ಅಥವಾ ಬುಕಿಂಗ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

If you lost your PAN Card Now you can get instant E PAN in New Income Tax Portal

Published On - 5:56 pm, Tue, 15 June 21