ಬೆಳಗ್ಗೆ ಎದ್ದಾಗ ಟೀ (ಚಹಾ) ಕುಡಿಯುವುದರಿಂದ ಸಿಗುವ ಅನುಭೂತಿಯೇ ಬೇರೆ. ಕುರ್ಚಿಯಲ್ಲಿ ಕುಳಿತು, ಪೇಪರ್ ಓದುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ… ಓಹ್ ಎಷ್ಟು ಮಧುರ, ಚೆನ್ನ. ನಿಜ.. ಟೀ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ… ಆದರೆ?
ಬೆಳಗ್ಗೆ ಎದ್ದಾಗ ಟೀ (ಚಹಾ -Tea) ಕುಡಿಯುವುದರಿಂದ ಸಿಗುವ ಅನುಭೂತಿಯೇ ಬೇರೆ. ಕುರ್ಚಿಯಲ್ಲಿ ಕುಳಿತು, ಪೇಪರ್ ಓದುತ್ತಾ ಬಿಸಿ ಬಿಸಿ ಚಹಾ ಹೀರುತ್ತಾ… ಓಹ್ ಎಷ್ಟು ಮಧುರ, ಚೆನ್ನ. ನಿಜ.. ಟೀ ಕುಡಿಯುವುದರಿಂದ ಹಲವಾರು ಆರೋಗ್ಯಕಾರಿ ಲಾಭಗಳಿವೆ… ಎಂಬುದು ನಮಗೆಲ್ಲರಿಗೂ ಗೊತ್ತು. ಆದರೆ? ಸಾಮಾನ್ಯವಾಗಿ ನಮಗೆ ಬಿಸಿನೀರು ಅಥವಾ ಬಿಸಿ ಹಾಲಿನಲ್ಲಿ ಟೀ ಪುಡಿಯ ಡಿಕಾಕ್ಷನ್ ಹಾಕಿ ಕುಡಿಯುವ ಅಭ್ಯಾಸವಿದೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ಗರಂ ಗರಂ ಚಾಯ್‌ಗಾಗಿ ಟೀ ಬ್ಯಾಗ್‌ಗಳನ್ನು ಅವಲಂಬಿಸಿರುತ್ತೇವೆ. ನಮಗೆ ಸಮಯವಿಲ್ಲದ ಕಾರಣ ಅಥವಾ ಅದು ಬೇಗನೆ ಖಾಲಿಯಾಗುವುದರಿಂದ ತುರ್ತಾಗಿ ನಾವು ಟೀ ಬ್ಯಾಗ್‌ಗಳನ್ನು ಬಳಸುತ್ತೇವೆ.
ಆದರೆ, ಈ ರೀತಿ ಮಾಡುವುದರಿಂದ ಆರೋಗ್ಯಕ್ಕಿಂತ ಹೆಚ್ಚಿನ ಸಮಸ್ಯೆಗಳು ಎದುರಾಗುತ್ತವೆ ಎಂದು ಮಾಂಟ್ರಿಯಲ್‌ನ ಮರ್ಗಿಲ್ ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಆರೋಗ್ಯ ತಜ್ಞರು (Health Experts) ಎಚ್ಚರಿಸಿದ್ದಾರೆ.
ಅಧ್ಯಯನದ ಪ್ರಕಾರ.. ಪ್ಲಾಸ್ಟಿಕ್ ಟೀ ಬ್ಯಾಗ್ ಹಾನಿಕಾರಕ ಕಣಗಳನ್ನು ಬಿಡುಗಡೆ ಮಾಡುತ್ತದೆ. ಟೀ ಬ್ಯಾಗ್‌ಗಳು ಶತಕೋಟಿ ಸೂಕ್ಷ್ಮ ಮತ್ತು ನ್ಯಾನೊ ಪ್ಲಾಸ್ಟಿಕ್‌ಗಳನ್ನು ಬಿಸಿ ನೀರಿನಲ್ಲಿ ಕರಗಿಸುತ್ತದೆ. ಪೇಪರ್ ಟೀ ಬ್ಯಾಗ್ ನಲ್ಲಿ ಎಪಿಕ್ಲೋರೋಹೈಡ್ರಿನ್ ಎಂಬ ರಾಸಾಯನಿಕ ಇರುತ್ತದೆ. ಇದು ಟೀ ಬ್ಯಾಗ್ ಹರಿದು ಹೋಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಟೀ ಬ್ಯಾಗ್‌ಗಳನ್ನು ಡಯಾಕ್ಸಿನ್ ಅಥವಾ ಎಪಿಕ್ಲೋರೋಹೈಡ್ರಿನ್‌ನಿಂದ ಲೇಪಿಸಲಾಗುತ್ತದೆ. ಹಾಗಾಗಿ ಟೀ ಬ್ಯಾಗ್ ಅನ್ನು ಬಿಸಿನೀರಿನಲ್ಲಿ ಅಥವಾ ಬಿಸಿ ಹಾಲಿನಲ್ಲಿ ಮುಳುಗಿಸಿದಾಗ ಕವರ್‌ನಲ್ಲಿರುವ ಕಣಗಳು ಕರಗುತ್ತವೆ. ನಮಗೆ ಗೊತ್ತಿಲ್ಲದೆ ಕುಡಿಯುವುದರಿಂದ ಆರೋಗ್ಯದ ಸಮಸ್ಯೆಯೂ ಉಂಟಾಗುತ್ತದೆ. ಈ ಜೀವಕೋಶಗಳು ಕ್ಯಾನ್ಸರ್ ಗೆ ದಾರಿ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಅದಕ್ಕಾಗಿಯೇ ಟೀ ಬ್ಯಾಗ್‌ಗಳ ಬದಲಿಗೆ ಒಣ ಅಥವಾ ಸಡಿಲವಾದ ಡಬ್ಬಗಳಲ್ಲಿರುವ ಚಹಾ ಎಲೆಗಳನ್ನು ಬಳಸಲು ತಜ್ಞರು ಸಲಹೆ ನೀಡುತ್ತಾರೆ. ತೀರಾ ತುರ್ತಾಗಿ ಟೀ ಬ್ಯಾಗ್ ಬಳಸಬೇಕಾದರೆ ಬಟ್ಟೆಯಿಂದ ಮಾಡಿದ ಟೀ ಬ್ಯಾಗ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ ಎನ್ನುತ್ತಾರೆ. ಅದರಿಂದ ಆರೋಗ್ಯ ಪ್ರಯೋಜನವನ್ನೂ ಪಡೆಯಬಹುದು ಎನ್ನುತ್ತಾರೆ. ನಾವು ಮಾಡುವ ಕೆಲವು ಬದಲಾವಣೆಗಳು ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಎಂದು ತಜ್ಞರು ಹೀಗೆ ವಿವರಿಸುತ್ತಾರೆ.