ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ. ವಿಶೇಷವಾಗಿ ಈ ಸಮಸ್ಯೆ ಯುವ ಪೀಳಿಗೆಯನ್ನು ಕಾಡುತ್ತಿದೆ. ಆದರೆ ಪಾರ್ಶ್ವವಾಯು ಮತ್ತು ಹೃದಯಾಘಾತಗಳು ಹೆಚ್ಚಾಗಿ ಸ್ನಾನಗೃಹದಲ್ಲೇ ಸಂಭವಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬಾತ್ರೂಮ್ನಲ್ಲಿ ಹೆಚ್ಚಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತ ಸಂಭವಿಸಲು ಕಾರಣವೆನೆಂದರೆ ಸ್ನಾನಗೃಹದ ಉಷ್ಣತೆಯು ನಮ್ಮ ಕೋಣೆಯ ಉಳಿದ ತಾಪಮಾನಕ್ಕಿಂತ ಭಿನ್ನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಮತ್ತು ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುವುದು ಬಹಳ ಮುಖ್ಯ. ನೀವು ನೇರವಾಗಿ ತಲೆಯ ಮೇಲೆ ನೀರನ್ನು ಸುರಿಯುವುದರಿಂದ, ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ. ರಕ್ತವು ಸರಿಯಾಗಿ ಹೃದಯವನ್ನು ತಲುಪುವುದಿಲ್ಲ. ವಿಶೇಷವಾಗಿ ನೀರು ತುಂಬಾ ತಂಪಾಗಿದ್ದರೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಇದಲ್ಲದೇ ಸಾಮಾನ್ಯವಾಗಿ ಬೆಳಿಗ್ಗಿನ ಜಾವ ಯಾವುದೇ ವ್ಯಕ್ತಿಯ ಬಿಪಿ ಸ್ವಲ್ಪ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತಣ್ಣೀರು ನೇರವಾಗಿ ತಲೆಗೆ ಸುರಿದರೆ ಅದು ಬಿಪಿ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಮೊಮೊಸ್, ಪಿಜ್ಜಾ, ಬರ್ಗರ್ ಸೇವನೆ ಕ್ಯಾನ್ಸರ್ಗೆ ಕಾರಣವಾಗಬಹುದು; ಸಂಶೋಧನೆಯಲ್ಲಿ ಬಹಿರಂಗ
ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸಲು ನೀವು ತಣ್ಣೀರಿನಿಂದ ಸ್ನಾನ ಮಾಡುವಾಗ, ಮೊದಲು ನಿಮ್ಮ ಪಾದಗಳಿಗೆ ನೀರನ್ನು ಸುರಿಯಿರಿ. ನಂತರ ನಿಮ್ಮ ಮೈಮೇಲೆ ನೀರು ಹಾಕಿ. ಇದಲ್ಲದೆ ತುಂಬಾ ಹೊತ್ತು ಸ್ನಾನಗೃಹದಲ್ಲಿ ಸಮಯ ಕಳೆಯಬೇಡಿ. ಹಾಗಂತ ಆತುರಬೇಡ. ನೀವು ದೀರ್ಘಕಾಲ ಸ್ನಾನದ ತೊಟ್ಟಿಯಲ್ಲಿ ಇದ್ದರೆ, ಅದು ನಿಮ್ಮ ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ