ಹರ್ಬಾಲೈಫ್ ತನ್ನ ಇತ್ತೀಚಿನ ಹೇಳಿಕೆಯಲ್ಲಿ, ಭಾರತದಲ್ಲಿನ ಅಧಿಕೃತ ಹರ್ಬಾಲೈಫ್ ಇಂಡಿಪೆಂಡೆಂಟ್ ಅಸೋಸಿಯೇಟ್‌ಗಳಿಂದ, ಗ್ರಾಹಕರು ಮತ್ತು ಸಾರ್ವಜನಿಕರು ನೇರವಾಗಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಹೇಳಿದೆ.
ಹರ್ಬಾಲೈಫ್ ಇಂಡಿಯಾ, ಜಾಗತಿಕ ಆರೋಗ್ಯ ಮತ್ತು ಸುಸ್ಥಿರತೆಯ ಕಂಪನಿಯಾಗಿದ್ದು, ಇದು ತನ್ನ ಉತ್ಪನ್ನಗಳನ್ನು ಭಾರತ ಮತ್ತು 94 ಇತರ ದೇಶಗಳಲ್ಲಿ ಹರ್ಬಾಲೈಫ್ ಇಂಡಿಪೆಂಡೆಂಟ್ ಅಸೋಸಿಯೇಟ್ಸ್/ ನೇರ ಮಾರಾಟಗಾರರ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂದು ದೃಢೀಕರಿಸಿದೆ. ಗ್ರಾಹಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹರ್ಬಾಲೈಫ್ ಇಂಡಿಪೆಂಡೆಂಟ್ ಅಸೋಸಿಯೇಟ್ಸ್/ ನೇರ ಮಾರಾಟಗಾರರಿಂದ ವೈಯಕ್ತೀಕರಿಸಿದ ಅಧಿಕೃತ ಮತ್ತು ನಿಜವಾದ ಉತ್ಪನ್ನಗಳನ್ನು ಸ್ವೀಕರಿಸುತ್ತಾರೆ ಎಂದು ಹರ್ಬಾಲೈಫ್ ಖಚಿತ ಪಡಿಸಿದೆ.
“ಹರ್ಬಾಲೈಫ್ ಇಂಡಿಪೆಂಡೆಂಟ್ ಅಸೋಸಿಯೇಟ್” ಎಂದು ನಮೂದಿಸಿರುವ ಅಥವಾ ಹರ್ಬಾಲೈಫ್ ವಿಳಾಸವನ್ನು ಬಳಸಿರುವ ಅಥವಾ ಒಂದೇ ರೀತಿಯ ಅನಧಿಕೃತ ವೆಬ್‌ಸೈಟ್‌ಗಳಲ್ಲಿ ಕಂಡು ಬರುವ ಮಾಹಿತಿ ಅಥವಾ ಉತ್ಪನ್ನಗಳ ಮಾರಾಟದ ಬಗ್ಗೆ ಜಾಗರೂಕರಾಗಿರಲು ಗ್ರಾಹಕರಿಗೆ ಸಲಹೆ ನೀಡಿದೆ. ಪ್ರಸ್ತುತಪಡಿಸಿರುವ ಮಾಹಿತಿಯ ನಿಖರತೆ ಮತ್ತು ಇತರ ಇ-ಕಾಮರ್ಸ್ ಚಾನೆಲ್‌ಗಳು/ ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ಉತ್ಪನ್ನಗಳ ದೃಢೀಕರಣಕ್ಕಾಗಿ ಹರ್ಬಲೈಫ್ ಇಂಡಿಯಾ ಯಾವುದೇ ರೀತಿಯ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ.” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಹರ್ಬಾಲೈಫ್ ಇಂಡಿಯಾ ಅಧಿಕೃತ ವೆಬ್ಸೈಟ್ ಇಲ್ಲಿದೆ
ಹರ್ಬಾಲೈಫ್ (ಎನ್ ವೈ ಎಸ್ ಇ: ಹೆಚ್ ಎಲ್ ಎಫ್) ಒಂದು ಪ್ರಮುಖ ಆರೋಗ್ಯ ಮತ್ತು ಸ್ವಾಸ್ಥ್ಯ ಕಂಪನಿ ಮತ್ತು ಸಮುದಾಯವಾಗಿದ್ದು, ಇದು ಉತ್ತಮ ಪೌಷ್ಟಿಕಾಂಶವಿರುವ ಉತ್ಪನ್ನಗಳನ್ನು ನೀಡುವ ಮೂಲಕ ಜನರ ಜೀವನವನ್ನು ಬದಲಾಯಿಸುತ್ತಿದೆ ಮತ್ತು 1980 ರಿಂದ ಅದರ ಸ್ವತಂತ್ರ ವಿತರಕರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಕಂಪನಿಯು ಉದ್ಯಮಶೀಲ ವಿತರಕರ ಮೂಲಕ 95 ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ವಿಜ್ಞಾನ ಬೆಂಬಲಿತ ಉತ್ಪನ್ನಗಳನ್ನು ನೀಡುತ್ತಿದೆ. ಹರ್ಬಾಲೈಫ್, ಪರಸ್ಪರ ತರಬೇತಿ ಮತ್ತು ಬೆಂಬಲ ನೀಡುವ ಮೂಲಕ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಜೀವನ ನಡೆಸಲು ಆರೋಗ್ಯಕರ, ಸಕ್ರಿಯ ಜೀವನಶೈಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ