Breastfeeding Awareness Week: ಪ್ರಸವಾನಂತರದ ಖಿನ್ನತೆ ಸ್ಯನ್ಯಪಾನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

| Updated By: ನಯನಾ ರಾಜೀವ್

Updated on: Aug 05, 2022 | 9:55 AM

ಪ್ರಸವ ನಂತರದ ಎದುರಾಗುವ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಒಂದು ಗಂಭೀರವಾದ ಮಾನಸಿಕ ಆರೋಗ್ಯದ ಸ್ಥಿತಿಯಾಗಿದೆ.

Breastfeeding Awareness Week: ಪ್ರಸವಾನಂತರದ ಖಿನ್ನತೆ ಸ್ಯನ್ಯಪಾನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?
Dr Krishna Prasad
Follow us on

ಪ್ರಸವ ನಂತರದ ಎದುರಾಗುವ ಖಿನ್ನತೆಯು ಹೆರಿಗೆಯ ನಂತರ ತಾಯಂದಿರುವ ಅನುಭವಿಸುವ ಒಂದು ಗಂಭೀರವಾದ ಮಾನಸಿಕ ಆರೋಗ್ಯದ ಸ್ಥಿತಿಯಾಗಿದೆ. ಇದು ನಿರಂತರವಾದ ಕಡಿಮೆ ಮನಸ್ಥಿತಿ, ದುಃಖ, ನಿಷ್ಪ್ರಯೋಜಕ ಮತ್ತು ಹತಾಶೆಯ ಭಾವನೆಗಳನ್ನು ಒಳಗೊಂಡಿರುತ್ತದೆ. ತಾಯಿಯ ಮಾನಸಿಕ ಆರೋಗ್ಯವು ಮಗುವಿನ ಬೆಳವಣಿಗೆಯಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ.

ಖಿನ್ನತೆಗೆ ಒಳಗಾದ ಅಥವಾ ಆತಂಕಕ್ಕೊಳಗಾದ ತಾಯಿಯು ತನ್ನ ಮಗುವಿಗೆ ಅಗತ್ಯವಿರುವ ಸರಿಯಾದ ಬೆಂಬಲವನ್ನು ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿರುತ್ತದೆ. ಇದರಿಂದಾಗಿ ಸ್ತನ್ಯಪಾನವನ್ನು ಆರಂಭಿಸಲು ಅಥವಾ ಮುಂದುವರಿಸುವ ಸಂದರ್ಭದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬಹುದು.

ಸ್ತನ್ಯಪಾನ ಮತ್ತು ಪ್ರಸವಾನಂತರದ ಖಿನ್ನತೆ- ಚಿಕಿತ್ಸೆ
ಸ್ತನ್ಯಪಾನವು ತನ್ನ ಮಗುವಿನೊಂದಿಗಿನ ಬಾಂಧವ್ಯವನ್ನು ರೂಪಿಸುವಲ್ಲಿ ನೆರವಾಗುತ್ತದೆ ಎಂದು ತಾಯಿ ಭಾವಿಸಿದರೆ, ನಂತರ ಆಕೆ ಪ್ರಸವಾನಂತರದ ಖಿನ್ನತೆಯ ಚಿಕಿತ್ಸೆಯು ಸ್ತನ್ಯಪಾನ ಸಂಬಂಧವನ್ನು ರಕ್ಷಿಸುವ ನಿಟ್ಟಿನಲ್ಲಿ ಗಟ್ಟಿಗೊಳಿಸುತ್ತದೆ. ಸಾಮಾನ್ಯವಾಗಿ ಚಿಕಿತ್ಸೆಯು ಔಷಧಿಗಳು ಮತ್ತು ಚಿಕಿತ್ಸೆಯ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಹಾಲುಣಿಸುವ ಸಂದರ್ಭದಲ್ಲಿ ಆಕೆಗೆ ಖಿನ್ನತೆಯನ್ನು ಹೋಗಲಾಡಿಸುವ ಸುರಕ್ಷಿತವಾದ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಮತ್ತೊಂದೆಡೆ, ಒಂದು ವೇಳೆ ಸ್ತನ್ಯಪಾನವು ಆಕೆಯ ಖಿನ್ನತೆಯ ಲಕ್ಷಣಗಳನ್ನು ಬಿಗಡಾಯಿಸುವಂತೆ ಮಾಡುತ್ತದೆ ಎಂದು ಭಾವಿಸಿದರೆ ವೈದ್ಯರು ಇನ್ಫಾಂಟ್ ಫಾರ್ಮುಲಾ ಫೀಡಿಂಗ್ ನಂತಹ ಪರ್ಯಾಯ ಮಾದರಿಯ ಆಹಾರದ ಬಗ್ಗೆ ಸಲಹೆ ನೀಡುತ್ತಾರೆ.

ನೀವು ಫಾರ್ಮುಲಾ ಫೀಡಿಂಗ್ ಗೆ ಮೊರೆ ಹೋಗಬೇಕೆ?
ಬೇಬಿ ಫಾರ್ಮುಲಾವು ಎದೆಹಾಲಿನ ರೀತಿಯಲ್ಲಿಯೇ ವಿನ್ಯಾಸಗೊಳಿಸಿ ತಯಾರಿಸಲಾದ ಒಂದು ಆಹಾರವಾಗಿದೆ. ಸ್ತನ್ಯಪಾನದಿಂದ ಹಲವಾರು ಪ್ರಯೋಜನಗಳು ಇದ್ದಾಗ್ಯೂ, ಪ್ರಸವಾನಂತರದ ಖಿನ್ನತೆಯು ತಾಯಿ ತನ್ನ ಮಗುವಿಗೆ ಹಾಲುಣಿಸಲು ಅವಕಾಶ ನೀಡುವುದಿಲ್ಲ.

ಕೆಲವು ತಾಯಂದಿರಲ್ಲಿ ನಿರ್ದಿಷ್ಟವಾದ ವೈದ್ಯಕೀಯ ಕಾರಣಗಳು ಎದುರಾಗುವುದರಿಂದ ಹಾಲುಣಿಸಲು ಸಾಧ್ಯವಾಗುವುದಿಲ್ಲ. ಇನ್ನಿತರರು ಕಡಿಮೆ ಹಾಲು ಪೂರೈಕೆಯನ್ನು ಹೊಂದಿರುವ ಸಾಧ್ಯತೆಗಳಿರುತ್ತವೆ.

ಇಂತಹ ಸಂದರ್ಭಗಳಲ್ಲಿ ವಾಣಿಜ್ಯವಾಗಿ ಸಿದ್ಧಪಡಿಸಲಾದ ಇನ್ಫಾಂಟ್ ಫಾರ್ಮುಲಾಗಳು ಪರ್ಯಾಯ ಪೌಷ್ಟಿಕಾಂಶಗಳಾಗಬಹುದು. ಈ ಆಹಾರಗಳನ್ನು ಸ್ಟೆರೈಲ್ ಪರಿಸ್ಥಿತಿಗಳಲ್ಲಿ ತಯಾರಿಸಲಾಗಿರುತ್ತದೆ ಮತ್ತು ನವಜಾತ ಶಿಶುಗಳಿಗೆ ಅಗತ್ಯವಿರುವ ಪೌಷ್ಟಿಕಾಂಶಗಳು, ಸಕ್ಕರೆ, ಕೊಬ್ಬು ಮತ್ತು ವಿಟಮಿನ್ ಗಳು ಈ ಆಹಾರದಲ್ಲಿ ಸೇರಿರುತ್ತವೆ.

ಆದರೆ, ಈ ಫಾರ್ಮುಲಾ ಫೀಡಿಂಗ್ ತನ್ನದೇ ಆದ ಇತಿಮಿತಿಗಳನ್ನು ಒಳಗೊಂಡಿರುತ್ತದೆ. ಎದೆ ಹಾಲಿನಲ್ಲಿರುವ ಸಕ್ರಿಯ ಪೌಷ್ಟಿಕಾಂಶಗಳು ಮತ್ತು ಸಕ್ರಿಯ ಆಂಟಿಬಾಡಿಗಳು ಈ ಬೇಬಿ ಫಾರ್ಮುಲಾದಲ್ಲಿರುವುದಿಲ್ಲ. ಎದೆಹಾಲಿನಲ್ಲಿರುವ ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೆಚ್ಚುವರಿ ರಕ್ಷಣೆ ನೀಡುವ ಅಂಶಗಳು ಈ ಬೇಬಿ ಫಾರ್ಮುಲಾದಲ್ಲಿರುವುದಿಲ್ಲ.

ಆದಾಗ್ಯೂ, ತಾಯಿಯು ಸ್ತನ್ಯಪಾನ ಮಾಡಲು ಆರೋಗ್ಯಕರ ಮತ್ತು ಮಾನಸಿಕವಾಗಿ ಸಿದ್ಧಳಾಗುವವರೆಗೆ ಈ ಇನ್ಫಾಂಟ್ ಫಾರ್ಮುಲಾವನ್ನು ಪರ್ಯಾಯ ಆಹಾರವನ್ನಾಗಿ ಬಳಸಬಹುದಾಗಿದೆ.

ನಿರ್ಣಯ: ಒಂದು ವೇಳೆ, ಪ್ರಸವಾನಂತರದ ಖಿನ್ನತೆ ಇದೆ ಎಂಬ ಸೂಕ್ಷ್ಮಗಳು ಕಂಡುಬಂದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮುಖ್ಯವಾಗಿರುತ್ತದೆ.

ಸೂಕ್ತವಾದ ತಪಾಸಣೆಗಳು ಮತ್ತು ಚಿಕಿತ್ಸೆಗಳನ್ನು ಪಡೆಯುವ ಮೂಲಕ ತಾಯಂದಿರುವ ಖಿನ್ನತೆಯಂತಹ ಸಮಸ್ಯೆಗಳಿಂದ ಹೊರ ಬಂದು ತಮ್ಮ ಮಗುವಿಗೆ ಸುಲಭವಾಗಿ ಸ್ತನ್ಯಪಾನ ಮಾಡಿಸಬಹುದಾಗಿದೆ.

ಲೇಖಕರು: ಡಾ.ಕೃಷ್ಣಪ್ರಸಾದ್ ಜೆ.ಆರ್, ಕನ್ಸಲ್ಟೆಂಟ್- ಪೀಡಿಯಾಟ್ರಿಶಿಯನ್, ಮದರ್ ಹುಡ್ ಹಾಸ್ಪಿಟಲ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.

Published On - 9:51 am, Fri, 5 August 22