Depression: ಖಿನ್ನತೆಯಿಂದ ಬಳಲುತ್ತಿರುವವರಿಗೆ ನೀವು ಹೇಳುವ ಸಾಂತ್ವನ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು

 ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗುತ್ತಾರೆ, ಖಿನ್ನತೆ ಎಂಬುದು ನಿಮ್ಮ ಮನಸ್ಸನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತದೆ, ವಾಸ್ತವಕ್ಕೆ ದೂರವಿರುವಂತಹ ವಿಚಾರಗಳನ್ನೇ ಸತ್ಯ ಎಂದು ನಂಬಿರುತ್ತಾರೆ.

Depression: ಖಿನ್ನತೆಯಿಂದ ಬಳಲುತ್ತಿರುವವರಿಗೆ ನೀವು ಹೇಳುವ ಸಾಂತ್ವನ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು
Depression
Follow us
TV9 Web
| Updated By: ನಯನಾ ರಾಜೀವ್

Updated on: Aug 02, 2022 | 4:50 PM

ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಹೊರಬರಲಾರದೆ ಖಿನ್ನತೆಗೆ ಒಳಗಾಗುತ್ತಾರೆ, ಖಿನ್ನತೆ ಎಂಬುದು ನಿಮ್ಮ ಮನಸ್ಸನ್ನು ಹಲವು ರೀತಿಯಲ್ಲಿ ಬದಲಾಯಿಸುತ್ತದೆ, ವಾಸ್ತವಕ್ಕೆ ದೂರವಿರುವಂತಹ ವಿಚಾರಗಳನ್ನೇ ಸತ್ಯ ಎಂದು ನಂಬಿರುತ್ತಾರೆ. ಖಿನ್ನತೆಗೆ ಒಳಗಾದ ಮನಸ್ಸು ನಿರಂತರವಾಗಿ ನಿರಾಶಾವಾದಿ ಮೋಡ್‌ನಲ್ಲಿದೆ ಮತ್ತು ಪುನರಾವರ್ತಿತ ನಕಾರಾತ್ಮಕ ಆಲೋಚನೆಗಳನ್ನು ಹೊರಹಾಕುತ್ತದೆ ಮತ್ತು ನಿಮ್ಮ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡುತ್ತದೆ, ದೈನಂದಿನ ಕೆಲಸಗಳನ್ನು ಮಾಡುವ ಶಕ್ತಿಯನ್ನು ನೀವು ಕಳೆದುಕೊಳ್ಳಬಹುದು.

ಜೀವನದ ಸಾಮಾನ್ಯ ಆದರೆ ಸುಂದರವಾದ ಸಂಗತಿಗಳಿಂದ ಸಂತೋಷವನ್ನು ಅನುಭವಿಸದಂತೆ ಮಾಡುತ್ತದೆ. ಆತ್ಮಹತ್ಯಾ ಅಥವಾ ಸ್ವಯಂ-ಹಾನಿಕಾರಕ ಆಲೋಚನೆಗಳು ಖಿನ್ನತೆಯಲ್ಲಿ ಅತಿರೇಕವಾಗಿದ್ದು, ವ್ಯಕ್ತಿಯು ತನ್ನ ಬಗ್ಗೆ ಆಲೋಚನೆ ಂಆಡುವುದಾಗಲಿ ಭವಿಷ್ಯದ ಕನಸನ್ನು ಕಾಣುವುದನ್ನೇ ಮರೆತುಬಿಡುತ್ತಾರೆ.

ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿ “ಖಿನ್ನತೆಯಿಂದ ಬಳಲುತ್ತಿರುವ ಇನ್ನೊಬ್ಬ ವ್ಯಕ್ತಿಗೆ ಯಾರಾದರೂ ಸಹಾಯ ಮಾಡಬಯಸಿದ್ದರೆ ಅವರೊಂದಿಗೆ ಇದ್ದು ಬೆಂಬಲ ನೀಡಿ, ಕ್ರಮೇಣವಾಗಿ ಅವರನ್ನು ಖಿನ್ನತೆಯಿಂದ ಹೊರಗೆ ತರಲು ಪ್ರಯತ್ನಿಸಿ

– ನೀವು ಇರುವ ಪರಿಸ್ಥಿತಿ ಅಥವಾ ನಿಮಗೆ ಆಗುತ್ತಿರುವ ಗೊಂದಲದ ಬಗ್ಗೆ ನನಗೆ ತಿಳಿದಿದೆ ನಾನುನ ನಿಮ್ಮೊಂದಿಗಿದ್ದೇನೆ ಧೈರ್ಯವಾಗಿರಿ.

– ನಾನು ನಿಮ್ಮೊಂದಿಗಿದ್ದೇನೆ ನಿಮ್ಮ ಸಮಸ್ಯೆಗಳಿಗೆ ಹೆಗಲಾಗುತ್ತೇನೆ, ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ -ನಿಮ್ಮೊಂದಿಗೆ ಸ್ವಲ್ಪ ಸಮಯ ಕಳೆಯಬಹುದೇ? ನಿಮ್ಮಿಂದ ಯಾವ ಉತ್ತರವನ್ನೂ ನಿರೀಕ್ಷೆ ಮಾಡುವುದಿಲ್ಲ, ನಾನು ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ.

-ನಾನು ನಿಮ್ಮನ್ನು ಮೊದಲಿನಂತೆಯೇ ಖುಷಿಯಿಂದ ಇರುವ ಮುಖವನ್ನು ನೋಡಲು ಬಯಸುತ್ತೇನೆ, ಈ ರೀತಿಯಾಗಿ ಅಲ್ಲ -ನೀವು ನಿಮ್ಮ ಮನಸ್ಸಿನಲ್ಲಿರುವ ನೋವನ್ನು ಹೊರಹಾಕಿ, ನಿಮಗೆ ನಾನು ಸಹಾಯ ಮಾಡುತ್ತೇನೆ