
ದೇಹದಲ್ಲಿ ವಿಟಮಿನ್ ಡಿ (vitamin D3) ಕೊರತೆ ಉಂಟಾದರೆ ಏನು ಮಾಡಬೇಕು ಎಂಬ ಚಿಂತೆ ನಿಮ್ಮಲ್ಲಿ ಕಾಡುತ್ತಿರಬಹುದು. ಆದರೆ ಅದನ್ನು ಪರಿಹಾರ ಮಾಡಲು ಸುಲಭ ವಿಧಾನಗಳು ಇಲ್ಲಿದೆ. ವಿಟಮಿನ್ ವಿಧಗಳಲ್ಲಿ ವಿಟಮಿನ್ ಡಿ ಕೂಡ ಒಂದು. ಇದು ದೇಹದಲ್ಲಿ ಸುಲಭವಾಗಿ ಕರಗುತ್ತದೆ. ವಿಟಮಿನ್ ಡಿ3 ಮೂಳೆಗಳನ್ನು ಬಲಪಡಿಸುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಆಯಾಸವನ್ನು ಕಡಿಮೆ ಮಾಡಲು ಮತ್ತು ಮನಸ್ಥಿತಿಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ. ಈ ವಿಟಮಿನ್ ಪಡೆಯಲು ಸೂರ್ಯನ ಬೆಳಕು ಅತ್ಯುತ್ತಮ ಮಾರ್ಗವಾಗಿದೆ. ಇದರ ಜತೆಗೆ ಕೆಲವೊಂದು ಆಹಾರಗಳಿಂದಲ್ಲೂ ಈ ವಿಟಮಿನ್ನ್ನು ಪಡೆಯಬಹುದು. ಈ ಆಹಾರ ಪದ್ಧತಿಯನ್ನು ಸೇರಿಸಿಕೊಂಡರೆ ಖಂಡಿತ ಈ ವಿಟಮಿನ್ ಡಿ3ಯನ್ನು ಪಡೆಯಬಹುದು.
ಮೀನು: ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಟ್ಯೂನ ಮೀನುಗಳು ವಿಟಮಿನ್ ಡಿ 3 ನಲ್ಲಿ ಸಮೃದ್ಧವಾಗಿವೆ. ಒಂದು ಬಾರಿ ಸೇವಿಸುವುದರಿಂದ ದೈನಂದಿನ ಚುಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಹೃದಯ ಮತ್ತು ಮೆದುಳಿಗೆ ಪ್ರಯೋಜನಕಾರಿ, ಇದನ್ನು ದಿನಿನಿತ್ಯ ಮಾಡುವ ಆಹಾರದಂತೆ ತಯಾರಿಸಿ ತಿನ್ನಬಹುದು.
ಮೊಟ್ಟೆಯ ಹಳದಿ ಭಾಗ: ಮೊಟ್ಟೆಯ ಹಳದಿ ಭಾಗವನ್ನು ಎಸೆಯಬೇಡಿ, ಇದು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಎರಡು ಮೊಟ್ಟೆಗಳಲ್ಲಿ ಸುಮಾರು 82 IU ವಿಟಮಿನ್ ಡಿ ಕಂಡುಬರುತ್ತದೆ. ಇನ್ನು ನಾಟಿ ಕೋಳಿಗಳ ಮೊಟ್ಟೆಯನ್ನು ಬಳಸಿದ್ರೆ ಇನ್ನು ಉತ್ತಮವಾಗಿರುತ್ತದೆ. ಇದನ್ನು ಕೂಡ ಎಗ್ ಬುರ್ಜಿ, ಎಗ್ ಆಮ್ಲೆಟ್, ಮಾಡಿ ತಿನ್ನಬಹುದು.
ವಿಟಮಿನ್ ಡಿ ಆಹಾರಗಳು: ಹಾಲು, ಸೋಯಾ/ಬಾದಾಮಿ ಹಾಲು, ಕಿತ್ತಳೆ ರಸ ಮತ್ತು ಅನೇಕ ಉಪಾಹಾರ ಧಾನ್ಯಗಳಿಗೆ ವಿಟಮಿನ್ ಡಿ ಗಳು ಇರುತ್ತದೆ. ಇದನ್ನು ಸೇವೆನೆ ಮಾಡುವುದರಿಂದ ಹೆಚ್ಚು ವಿಟಮಿನ್ ಡಿ ಗುಣಗಳನ್ನು ಪಡೆಯಬಹುದು.
ಅಣಬೆಗಳು: ಇದು ಸಸ್ಯಹಾರಿಗಳಿಗೆ ತುಂಬಾ ಉಪಯುಕ್ತವಾಗಿದೆ. ಅಣಬೆಗಳು ಡಿ 2 ಹೊಂದಿದೆ. ಇದನ್ನು ಬೆಳಕಿನಲ್ಲಿ ಇಡುವ ಕಾರಣ ಅಣಬೆಗಳು ಸ್ವಲ್ಪ ಪ್ರಮಾಣದ ಡಿ 3 ಅನ್ನು ಹೊಂದಿರಬಹುದು. ಇದಕ್ಕೆ ಇತರ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಂಜೀವಿನಿ “ಪ್ರಥಮ ಚಿಕಿತ್ಸೆ”
ಚೀಸ್: ಕೆಲವು ಚೀಸ್ ವಿಧಗಳು ಸ್ವಲ್ಪ ವಿಟಮಿನ್ ಡಿ 3ಯನ್ನು ಹೊಂದಿರುತ್ತದೆ. ಇದಕ್ಕೆ ನಿಯಮಿತವಾದ ಆಹಾರಗಳನ್ನು ಸೇರಿಸಿದರೆ ಇನ್ನು ಉತ್ತಮವಾಗಿರುತ್ತದೆ.
ಬೆಣ್ಣೆ ಮತ್ತು ದೇಸಿ ತುಪ್ಪ: ಬೆಣ್ಣೆ ಮತ್ತು ತುಪ್ಪದಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ 3 ಇರುತ್ತದೆ. ಪ್ರತಿದಿನ ಇದನ್ನು ಸೇವನೆ ಮಾಡಿದ್ರೆ ಖಂಡಿತ ಮಿಟಮಿನ್ ಡಿ 3 ಉತ್ಪಾದನೆ ಆಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ