AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಷ್ಟು ಔಷಧಿಗಳ ಸೇವನೆ ಮಾಡಿದರೂ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಈ ರೀತಿ ಮಾಡಿ

ತುಳಸಿ ಎಲೆಗಳನ್ನು ಶೀತ ಮತ್ತು ಕೆಮ್ಮುಗಳಿಗೆ ಮಾತ್ರವಲ್ಲದೆ ಅನೇಕ ಗಂಭೀರ ಕಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ ಎಂದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಆದರೆ, ತುಳಸಿ ಗಿಡದ ಕಾಂಡಗಳು ಸಹ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ಕಾಂಡಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಕಾಂಡಗಳಿಂದ ನಮ್ಮ ಆರೋಗ್ಯಕ್ಕೆ ಸಿಗುವ ಉಪಯೋಗಗಳೇನು? ಇದರ ಸೇವನೆ ಯಾಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಷ್ಟು ಔಷಧಿಗಳ ಸೇವನೆ ಮಾಡಿದರೂ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಈ ರೀತಿ ಮಾಡಿ
Tulsi Root Benefits
ಪ್ರೀತಿ ಭಟ್​, ಗುಣವಂತೆ
|

Updated on: Sep 13, 2025 | 6:15 PM

Share

ತುಳಸಿ (Holy Basil) ಗಿಡವಿಲ್ಲದ ಮನೆ ನೋಡಲು ಸಿಗುವುದು ಬಹಳ ಅಪರೂಪ. ಧಾರ್ಮಿಕ ಕಾರಣಗಳಿಂದ ಮಾತ್ರವಲ್ಲದೆ ಅದರ ಔಷಧೀಯ ಗುಣಗಳಿಂದಾಗಿಯೂ ತುಳಸಿ ಗಿಡವನ್ನು ಪ್ರತಿಯೊಬ್ಬರ ಮನೆಗಳಲ್ಲಿಯೂ ನೆಟ್ಟು ಬೆಳೆಸುತ್ತಾರೆ. ಇಷ್ಟು ದಿನ ತುಳಸಿ ಎಲೆಗಳು ಮತ್ತು ಅದರ ರಸದ ಉಪಯೋಗಗಳ ಬಗ್ಗೆ ತಿಳಿದಿಕೊಂಡಿದ್ದರು. ತುಳಸಿಯ ಎಲೆ ಶೀತ ಮತ್ತು ಕೆಮ್ಮುಗಳಿಗೆ ಮಾತ್ರವಲ್ಲದೆ ಅನೇಕ ಗಂಭೀರ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತಿತ್ತು. ಇದು ಎಲ್ಲರಿಗೂ ತಿಳಿದ ವಿಚಾರವೇ… ಆದರೆ, ಇದಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ತುಳಸಿ ಎಲೆ, ಬೀಜ ಮಾತ್ರವಲ್ಲ ತುಳಸಿ ಕಾಂಡದಲ್ಲಿಯೂ ಸಹ ಅನೇಕ ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ. ತುಳಸಿ ಕಾಂಡಗಳನ್ನು ಚೆನ್ನಾಗಿ ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವನೆ ಮಾಡುವುದರಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ತುಳಸಿ ಕಾಂಡಗಳಿಂದ ನಮ್ಮ ಆರೋಗ್ಯಕ್ಕೆ ಸಿಗುವ ಉಪಯೋಗಗಳೇನು? ಇದರ ಸೇವನೆ ಯಾಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ತುಳಸಿ ಎಲೆಯ ರಸವನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಅನೇಕ ರೀತಿಯ ಗಂಭೀರ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳುತ್ತಾರೆ. ಇದು ದೇಹವನ್ನು ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪ್ರತಿದಿನ ತುಳಸಿ ಎಲೆಗಳನ್ನು ಅಗಿಯುವುದರಿಂದ ಕಾರ್ಟಿಸೋಲ್ ಹಾರ್ಮೋನುಗಳ ಸ್ರವಿಸುವಿಕೆಯು ಕಡಿಮೆಯಾಗುತ್ತದೆ, ಇದು ಒತ್ತಡ ಮತ್ತು ಅತಿಯಾಗಿ ಬರುವ ಕೋಪವನ್ನು ಕಡಿಮೆ ಮಾಡುತ್ತದೆ. ತುಳಸಿ ಚಹಾ ಅಥವಾ ಕಷಾಯವನ್ನು ಕುಡಿಯುವುದು ಮನಸ್ಥಿತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೇವಲ ತುಳಸಿಯ ಪ್ರಯೋಜನ. ಇದರ ಕಾಂಡಗಳಲ್ಲಿ ಮತ್ತಷ್ಟು ಪ್ರಯೋಜನಗಳಿವೆ.

ಇದನ್ನೂ ಓದಿ: ಬಾಳೆ ಹೂವು ತಿನ್ನುವ ಅವಕಾಶ ಸಿಕ್ಕರೆ ಬಿಡಬೇಡಿ, ಇದರಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲದ ಪ್ರಯೋಜನಗಳಿವೆ

ಇದನ್ನೂ ಓದಿ
Image
ತುಪ್ಪದಿಂದ ಪಾದ ಮಸಾಜ್ ಮಾಡುವ ಪದ್ಧತಿ ಎಷ್ಟು ಪ್ರಯೋಜನಕಾರಿ ನೋಡಿ!
Image
ಈ ಒಂದು ಹಣ್ಣಿನಲ್ಲಿ ಅದೆಷ್ಟು ಪ್ರಯೋಜನವಿದೆ ನೋಡಿ!
Image
ಆರೋಗ್ಯವಾಗಿರಲು ಏನು ಮಾಡಬೇಕು? ಸದ್ಗುರು ತಿಳಿಸಿರುವ ಈ ಟಿಪ್ಸ್ ಪಾಲನೆ ಮಾಡಿ
Image
ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯಗೆ ಪರಿಹಾರ?

ತುಳಸಿ ಕಾಂಡದ ಉಪಯೋಗಗಳೇನು?

  • ಔಷಧೀಯ ಗುಣಗಳಿರುವ ತುಳಸಿ ಕಾಂಡದ ಕಷಾಯವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಶೀತ, ಕೆಮ್ಮು, ಜ್ವರ ಮತ್ತು ಸೈನಸ್ ಸಮಸ್ಯೆಗಳಂತಹ ಉಸಿರಾಟದ ಕಾಯಿಲೆಗಳಿಗೆ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತದೆ.
  • ತುಳಸಿ ಕಾಂಡದ ಕಷಾಯವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹಸಿವನ್ನು ಹೆಚ್ಚಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸಲು ಕೂಡ ಸಹಾಯ ಮಾಡುತ್ತದೆ.
  • ತುಳಸಿ ಎಲೆಗಳ ಕಷಾಯವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಸೋಂಕುಗಳಿಂದ ದೇಹವನ್ನು ರಕ್ಷಿಸುವ ಗುಣವನ್ನು ಕೂಡ ಹೊಂದಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ