ಯಾವುದೇ ಲಕ್ಷಣಗಳು ಕಂಡು ಬರದೆಯೇ ಜೀವಕ್ಕೆ ಅಪಾಯ ತರುತ್ತೆ ಈ ರೋಗಗಳು
ಕೆಲವು ಕಾಯಿಲೆಗಳು ಕಾಣಿಸಿಕೊಳ್ಳುವಾಗ ಮೊದಲು ಯಾವುದೇ ರೀತಿಯ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ಬರು ಬರುತ್ತಾ ಅವು ತೀವ್ರವಾಗುವುದೇ ಅರಿವಿಗೆ ಬರುವುದಿಲ್ಲ. ಕೊನೆಯಲ್ಲಿ ಅವು ಪ್ರಾಣವನ್ನೇ ತೆಗೆಯಬಹುದು. ಸೈಲೆಂಟ್ ಆಗಿ ದೇಹ ಪ್ರವೇಶಿಸುವ ಗಂಭೀರ ಕಾಯಿಲೆಗಳು ಕ್ರಮೇಣ ಅಂಗಗಳನ್ನು ಹಾನಿಗೊಳಿಸುತ್ತವೆ. ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಮಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಈ ರೀತಿಯ ರೋಗಗಳ ಬಗ್ಗೆ ತಿಳಿದುಕೊಂಡು ಆದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಹಾಗಾದರೆ ಯಾವ ರೋಗಗಳು ಸೈಲೆಂಟ್ ಆಗಿ ಬರುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಯಾವುದಾದರೂ ಕಾಯಿಲೆಗಳು ಬರುವ ಮುನ್ನ ಒಂದಿಲ್ಲೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ನಾವು ಭಾವಿಸಿಕೊಳ್ಳುತ್ತೇವೆ. ಆದರೆ ಇದು ನಮ್ಮ ತಪ್ಪು ಕಲ್ಪನೆ. ಹೌದು, ಕೆಲವೊಮ್ಮೆ, ಯಾವುದೇ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳದೆಯೇ ರೋಗಗಳು ಬಂದಿರುತ್ತವೆ. ಮಾತ್ರವಲ್ಲ ಅವು ಜೀವ ತೆಗೆಯುವಷ್ಟು ತೀವ್ರವೂ ಆಗಿರಬಹುದು. ವಾಸ್ತವದಲ್ಲಿ ಕೊನೆಯ ಕ್ಷಣದವರೆಗೂ ನಮ್ಮ ಗಮನಕ್ಕೆ ಬಾರದಂತಹ ರೋಗಗಳಿವೆ. ಅಷ್ಟೇ ಅಲ್ಲ, ಅವು ಕೆಲವೇ ನಿಮಿಷಗಳಲ್ಲಿ ಜೀವ ತೆಗೆಯುವಷ್ಟು ಗಂಭೀರವಾಗಿರಬಹುದು. ಆರೋಗ್ಯವಾಗಿ ಕಾಣುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಪ್ರಾಣ ಕಳೆದುಕೊಳ್ಳುತ್ತಾನೆ. ಸೈಲೆಂಟ್ ಆಗಿ ದೇಹ ಪ್ರವೇಶಿಸುವ ಗಂಭೀರ ಕಾಯಿಲೆಗಳು ಕ್ರಮೇಣ ಅಂಗಗಳನ್ನು ಹಾನಿಗೊಳಿಸುತ್ತವೆ. ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ ಮಾರಕವಾಗಿ ಪರಿಣಮಿಸುತ್ತದೆ. ಹಾಗಾಗಿ ಈ ರೀತಿಯ ರೋಗಗಳ ಬಗ್ಗೆ ತಿಳಿದುಕೊಂಡು ಆದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ. ಹಾಗಾದರೆ ಯಾವ ರೋಗಗಳು ಸೈಲೆಂಟ್ (Silent Killers) ಆಗಿ ಬರುತ್ತೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಫ್ಯಾಟಿ ಲಿವರ್
ಕೊಬ್ಬಿನ ಯಕೃತ್ತು ಅಥವಾ ಫ್ಯಾಟಿ ಲಿವರ್ ಇದ್ದಾಗ ಸಾಮಾನ್ಯವಾಗಿ ಒಂದಿಲ್ಲೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಲವರು ಅಂದುಕೊಳ್ಳುತ್ತಾರೆ. ಆದರೆ ಮೊದಲೇ ಹೇಳಿದಂತೆ, ಕೆಲವೊಮ್ಮೆ ಫ್ಯಾಟಿ ಲಿವರ್ ಯಾವುದೇ ರೀತಿಯ ಲಕ್ಷಣಗಳನ್ನು ತೋರ್ಪಡಿಸದೆಯೇ ಹದಗೆಡಬಹುದು. ಹೌದು. ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಬಿಡುಗಡೆ ಮಾಡಲು ಸಾಧ್ಯವಾಗದಿದ್ದಾಗ, ಅದು ಯಕೃತ್ತಿನಲ್ಲಿ ಸಂಗ್ರಹವಾಗುತ್ತದೆ. ಕೊಬ್ಬನ್ನು ಫಿಲ್ಟರ್ ಮಾಡಿ ಹೊರಗೆ ಕಳುಹಿಸಬೇಕಾದ ಯಕೃತ್ತು, ಅದರ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗಳಿಗೆ ಒಳಗಾಗುತ್ತದೆ. ವಾಸ್ತವದಲ್ಲಿ ಆರಂಭಿಕ ಹಂತಗಳಲ್ಲಿ, ಅದು ಹೆಚ್ಚು ತೊಂದರೆ ಕೊಡುವುದಿಲ್ಲ. ಜೊತೆಗೆ ಅದರ ಲಕ್ಷಣಗಳು ಅಷ್ಟೊಂದು ತೀವ್ರವಾಗಿರುವುದಿಲ್ಲ. ಹಾಗಾಗಿ ಜನ ಅವುಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ಇದು ಸದ್ದಿಲ್ಲದೆ ತೀವ್ರ ಸ್ವರೂಪ ಪಡೆಯುತ್ತದೆ. ನಂತರ ಕೊನೆಯಲ್ಲಿ ಇದು ಲಿವರ್ ನ ಹಾನಿಗೆ ಕಾರಣವಾಗಬಹುದು. ಆದರೆ ಸಮಯಕ್ಕೆ ಸರಿಯಾಗಿ ಇದನ್ನು ಗುರುತಿಸಿದರೆ, ಕಡಿಮೆ ಮಾಡಬಹುದು. ಹಾಗಾಗಿ ಲಿವರ್ ಆರೋಗ್ಯವಾಗಿರಬೇಕು ಎಂದರೆ ಒಳ್ಳೆಯ ಆಹಾರ ಸೇವನೆ ಮಾಡುವುದರ ಜೊತೆಗೆ ಪ್ರತಿನಿತ್ಯ ತಪ್ಪದೆ ವ್ಯಾಯಾಮ ಮಾಡಬೇಕು.
ಹೃದಯಕ್ಕೆ ಸಂಬಂಧಿಸಿದ ರೋಗಗಳು
ಆಹಾರ ಪದ್ಧತಿ ಸರಿಯಿಲ್ಲದಿದ್ದಾಗ ಹೃದಯದ ಆರೋಗ್ಯ ಹದಗೆಡುತ್ತದೆ. ಮಾತ್ರವಲ್ಲ, ಬಹಳ ಬೇಗನೆ ದುರ್ಬಲಗೊಳ್ಳುತ್ತದೆ. ವಾಸ್ತವದಲ್ಲಿ, ದೇಹದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಾಣಿಸದೆ ಹೃದಯ ಸಂಬಂಧಿ ಕಾಯಿಲೆಗಳು ಕಂಡುಬರುತ್ತದೆ. ಹೃದಯದ ಕಾರ್ಯದಲ್ಲಿ ಸಂಪೂರ್ಣ ಬದಲಾವಣೆಯಾಗುವ ವರೆಗೂ ಅದು ತಿಳಿದಿರುವುದಿಲ್ಲ. ಅದಕ್ಕಾಗಿಯೇ ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದು. ಅಲ್ಲದೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೊಲೆಸ್ಟ್ರಾಲ್ ಶೇಖರಣೆಯಾಗುವುದು ಒಳ್ಳೆಯದಲ್ಲ. ಇದರ ಪರಿಣಾಮ ಹೃದಯಕ್ಕೆ ಸರಿಯಾದ ಆಮ್ಲಜನಕ ಮತ್ತು ರಕ್ತ ಪೂರೈಕೆಯಾಗದೆಯೇ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಿಗೆ ಕಾರಣವಾಗುತ್ತದೆ, ಮಾತ್ರವಲ್ಲ ಇದು ಕ್ಷಣಾರ್ಧದಲ್ಲಿ ಜೀವವನ್ನೇ ತೆಗೆದುಕೊಳ್ಳಬಹುದು.
ಅಧಿಕ ರಕ್ತದೊತ್ತಡ
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡವು ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರಲ್ಲಿಯೂ ಕಂಡುಬರುತ್ತಿರುವ ಒಂದು ಕಾಯಿಲೆ. ವಾಸ್ತವದಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತಗಳಲ್ಲಿ, ಯಾವುದೇ ರೀತಿಯ ಲಕ್ಷಣ ಕಂಡುಬರದಿದ್ದರೂ ಕೂಡ ಇದ್ದಕ್ಕಿದ್ದಂತೆ ತೀವ್ರವಾಗುತ್ತದೆ. ಮತ್ತೊಂದು ಕಳವಳಕಾರಿ ಅಂಶವೆಂದರೆ ಇದು ರಕ್ತನಾಳಗಳಿಗೆ ಸದ್ದಿಲ್ಲದೆ ಹಾನಿ ಮಾಡುತ್ತದೆ. ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳಿಗೂ ಕಾರಣವಾಗುತ್ತದೆ ಇವುಗಳ ಜೊತೆಗೆ, ಮೂತ್ರಪಿಂಡಗಳು ಸಹ ಹಾನಿಗೊಳ್ಳಬಹುದು. ಅದಕ್ಕಾಗಿಯೇ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಇದನ್ನೂ ಓದಿ: ರಾತ್ರಿ ಏಳು ಗಂಟೆಯ ನಂತರ ನೀವು ಕೂಡ ಈ ಆಹಾರಗಳ ಸೇವನೆ ಮಾಡುತ್ತಿದ್ದರೆ ಈ ಸ್ಟೋರಿ ಮಿಸ್ ಮಾಡ್ದೆ ಓದಿ
ಎಚ್ಐವಿ
ಈ ಕಾಯಿಲೆಯ ಬಗ್ಗೆ ಹೆಚ್ಚಾಗಿ ಎಲ್ಲರಿಗೂ ತಿಳಿದಿರುವುದಿಲ್ಲ. ಇದರ ಬಗ್ಗೆ ಚರ್ಚಿಸುವುದನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಸೈಲೆಂಟ್ ಆಗಿಯೇ ಜೀವವನ್ನು ತೆಗೆಯಬಹುದು ಎಂಬುದರ ಅರಿವು ಎಲ್ಲರಿಗೂ ಇರುವುದಿಲ್ಲ. ಆರಂಭಿಕ ಹಂತದಲ್ಲಿ ಯಾವುದೇ ರೀತಿಯ ಲಕ್ಷಣಗಳು ಕಂಡುಬರುವುದಿಲ್ಲ, ಸಾಮಾನ್ಯ ಜ್ವರ ಅಥವಾ ಸೋಂಕಿನಂತೆ ಭಾಸವಾಗುತ್ತದೆ. ಅದಕ್ಕಾಗಿಯೇ ಇದನ್ನು ನಿರ್ಲಕ್ಷಿಸುವವರೇ ಹೆಚ್ಚಾಗಿರುತ್ತದೆ. ಈಗ ಈ ವೈರಸ್ ಕಡಿಮೆ ಮಾಡಲು ಆಂಟಿವೈರಲ್ ಚಿಕಿತ್ಸೆ ಲಭ್ಯವಿದೆ. ಆದರೂ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮರೆಯಬಾರದು.
ಟೈಪ್ 2 ಮಧುಮೇಹ
ಇನ್ಸುಲಿನ್ ಹಾರ್ಮೋನ್ ಬಿಡುಗಡೆ ಕಡಿಮೆಯಾದಾಗಲೆಲ್ಲಾ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಮಧುಮೇಹದ ಮೊದಲ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕ್ರಮೇಣ, ರೋಗದ ತೀವ್ರತೆ ಹೆಚ್ಚಾದಂತೆ, ಲಕ್ಷಣಗಳು ಸಹ ಹೆಚ್ಚಾಗುತ್ತವೆ. ಇವು ಕ್ರಮೇಣ ಎಲ್ಲಾ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತವೆ, ವಿಶೇಷವಾಗಿ ಹೃದಯ, ಮೂತ್ರಪಿಂಡಗಳು ಮತ್ತು ಕಣ್ಣುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಆದ್ದರಿಂದ, ನಿಯಮಿತವಾಗಿ ವೈದ್ಯಕೀಯ ತಪಾಸಣೆ ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








