ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ? ಇಲ್ಲಿದೆ ನೋಡಿ
ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ಆದರೆ ಯಾವೆಲ್ಲಾ ಸಮಸ್ಯೆಗಳಿಗೆ, ಯಾವ ಡ್ರೈ ಫ್ರೂಟ್ಸ್ ಒಳ್ಳೆಯದು ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ಈ ಬಗ್ಗೆ ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ ಸ್ಟೋರಿ.

ಸಾಂದರ್ಭಿಕ ಚಿತ್ರ
ಡ್ರೈ ಫ್ರೂಟ್ಸ್ (dry fruit) ಆರೋಗ್ಯ ಒಳ್ಳೆಯದು, ಅದನ್ನು ತಿನ್ನುವುದರಿಂದ ದೇಹದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ನೀಡುತ್ತದೆ. ಆದರೆ ಪ್ರತಿಯೊಂದು ಡ್ರೈ ಫ್ರೂಟ್ಸ್ನಲ್ಲೂ ಬೇರೆ ಬೇರೆ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳು ಇವೆ. ಒಣ ಹಣ್ಣುಗಳು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ವಿವಿಧ ಒಣ ಹಣ್ಣುಗಳು ನಮ್ಮ ದೇಹಕ್ಕೆ ಹೇಗೆ ಪ್ರಯೋಜನಕಾರಿ ಎಂದು ಅವರು ವಿವರಿಸಿದ್ದಾರೆ. ಯಾವ ಒಣ ಹಣ್ಣು ಯಾವ ಸಮಸ್ಯೆಗೆ ಪರಿಣಾಮಕಾರಿ ಎಂಬುದನ್ನು ಇಲ್ಲಿ ಹೇಳಿದ್ದಾರೆ.
- ಆಯಾಸ ಮತ್ತು ದೌರ್ಬಲ್ಯ ; ಆಗಾಗ್ಗೆ ದಣಿದಿದ್ದರೆ ಅಥವಾ ದುರ್ಬಲರಾಗಿದ್ದರೆ, ಪ್ರತಿದಿನ ಆಹಾರದಲ್ಲಿ ಖರ್ಜೂರವನ್ನು ಸೇರಿಸಿ. ಖರ್ಜೂರವು ನೈಸರ್ಗಿಕ ಸಕ್ಕರೆ ಮತ್ತು ಅನೇಕ ಅಗತ್ಯ ಖನಿಜಗಳನ್ನು ಹೊಂದಿದ್ದು, ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ದಿನವಿಡೀ ಕೆಲಸ ಮಾಡಲು ಎರ್ನಜಿ ನೀಡುತ್ತದೆ.
- ಮೆದುಳಿನ ಆರೋಗ್ಯ: ಮೆದುಳನ್ನು ಚುರುಕಾಗಿ ಮತ್ತು ಆರೋಗ್ಯವಾಗಿಡಲು ಬೆರಿಹಣ್ಣುಗಳನ್ನು ಸೇವಿಸುವುದು ಪ್ರಯೋಜನಕಾರಿ, ಇದರಲ್ಲಿ ಕಂಡುಬರುವ ಆಂಥೋಸಯಾನಿನ್‌ಗಳು ಮೆದುಳಿನ ಕೋಶಗಳನ್ನು ಬಲಪಡಿಸುತ್ತವೆ ಮತ್ತು ಸ್ಮರಣಶಕ್ತಿಯನ್ನು ಸುಧಾರಿಸುತ್ತವೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಬೆರಿಹಣ್ಣುಗಳು ಮಾನಸಿಕ ಆರೋಗ್ಯದ ಉತ್ತಮ ಮೂಲವಾಗಿದೆ.
- ಮೂತ್ರನಾಳದ ಸೋಂಕು ತಡೆಗಟ್ಟುತ್ತದೆ: ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಕ್ರ್ಯಾನ್‌ಬೆರಿಗಳನ್ನು ಸೇರಿಸಿಕೊಳ್ಳಬಹುದು. ಇದರಲ್ಲಿರುವ ನೈಸರ್ಗಿಕ ಅಂಶಗಳು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ, ಇದು ಯುಟಿಐ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಹಾಗೂ ಸೋಂಕನ್ನು ತಡೆಯುತ್ತದೆ.
- ಮಲಬದ್ಧತೆ: ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಒಣದ್ರಾಕ್ಷಿ ತುಂಬಾ ಪರಿಣಾಮಕಾರಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ
- ಕರುಳಿನ ಆರೋಗ್ಯ: ಉತ್ತಮ ಕರುಳಿನ ಆರೋಗ್ಯಕ್ಕಾಗಿ ಪ್ರತಿದಿನ ಅಂಜೂರದ ಹಣ್ಣುಗಳನ್ನು ಸೇವಿಸಿ. ಅಂಜೂರವು ಪ್ರಿಬಯಾಟಿಕ್‌ಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Fri, 5 September 25








