Onam 2025: ಓಣಂ ಹಬ್ಬದ ಸಮಯದಲ್ಲಿ ಹೂವಿನ ರಂಗೋಲಿಯನ್ನು ಹಾಕುವುದೇಕೆ ಗೊತ್ತಾ?
ಓಣಂ ಹಬ್ಬವು ದೇವರ ನಾಡು ಎಂದೇ ಕೆರೆಯಲ್ಪಡುವ ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಪ್ರತಿ ಮನೆಯಲ್ಲೂ ಪೂಕಳಂ ಅಂದರೆ ಹೂವಿನ ರಂಗೋಲಿಯನ್ನು ಹಾಕುವಂತಹ ಸಂಪ್ರದಾಯವಿದೆ. ಓಣಂ ಹಬ್ಬದಲ್ಲಿ ಈ ಪೂಕಳಂನ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಕೇರಳದಲ್ಲಿ ಆಚರಿಸುವಂತಹ ಪ್ರಮುಖ ಹಬ್ಬಗಳಲ್ಲಿ ಓಣಂ (Onam) ಕೂಡ ಒಂದು. ಇದನ್ನು ಸುಗ್ಗಿ ಹಬ್ಬವೆಂದೂ ಕರೆಯಲಾಗುತ್ತದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದ ಸಮಯದಲ್ಲಿ ಬಲಿ ಚಕ್ರವರ್ತಿಯು ಪಾತಾಳದಿಂದ ಭೂಮಿಗೆ ಬಂದು ಜನರಿಗೆ ಆಶೀರ್ವಾದ ನೀಡುತ್ತಾನೆ ಎಂಬ ನಂಬಿಕೆ ಇದೆ. ಮಲಯಾಳಂ ಪಂಚಾಂಗದ ಪ್ರಕಾರ ಓಣಂ ಹಬ್ಬವನ್ನು ಚಿಂಗಂ ಮಾಸದ ತಿರುವೋಣಂ ನಕ್ಷತ್ರದಲ್ಲಿ ಆಚರಿಸಲಾಗುತ್ತದೆ. ಮತ್ತು ಈ ಹಬ್ಬದಂದು ಕೇರಳದಲ್ಲಿ ವಲ್ಲಂಕಾಳಿ, ಪುಲಿಕಲಿ ಸೇರಿದಂತೆ ಹಲವಾರು ಸಂಪ್ರದಾಯಿಕ ಆಚರಣೆಗಳನ್ನು ಪ್ರದರ್ಶಿಸಲಾಗುತ್ತದೆ. ಅದೇ ರೀತಿ ಹಬ್ಬದ ಸಮಯದಲ್ಲಿ ಮನೆಯ ಮುಂದೆ ಬಣ್ಣ ಬಣ್ಣದ ಹೂವುಗಳಿಂದ ಪೂಕಳಂ (Pukalam) ಅಂದರೆ ಹೂವಿನ ರಂಗೋಲಿಯನ್ನು ಹಾಕಲಾಗುತ್ತದೆ. ಓಣಂ ಹಬ್ಬದ ಹತ್ತು ದಿನಗಳ ವರೆಗೂ ಒಂದು ದಿನಕ್ಕಿಂತ ಇನ್ನೊಂದು ದಿನ ದೊಡ್ಡ ಗಾತ್ರದ ಪೂಕಳಂ ರಂಗೋಲಿ ಹಾಕಲಾಗುತ್ತದೆ. ಈ ಹಬ್ಬದಲ್ಲಿ ಪೂಕಳಂ ಯಾಕಿಷ್ಟು ಮಹತ್ವವನ್ನು ಪಡೆದಿದೆ ಎಂಬುದನ್ನು ನೋಡೋಣ ಬನ್ನಿ.
ಓಣಂ ಹಬ್ಬದಲ್ಲಿ ಪೂಕಳಂ ಮಹತ್ವ:
10 ದಿನಗಳ ಕಾಲ ನಡೆಯುವ ಓಣಂ ಹಬ್ಬದ ಸಮಯದಲ್ಲಿ ಮನೆಯಂಗಳದಲ್ಲಿ ಪೂಕಳಂ ಅಂದರೆ ಹೂವಿನ ರಂಗೋಲಿಯನ್ನು ಹಾಕುವ ಸಂಪ್ರದಾಯವಿದೆ. ಓಣಂ ಹಬ್ಬದ ಸಮಯದಲ್ಲಿ ಪೂಕಳಂ ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಅಲ್ಲದೆ ಇದು ಸಮೃದ್ಧಿ ಮತ್ತು ಸಮತೋಷದ ಸಂಕೇತವಾಗಿದೆ. ಓಣಂ ಹಬ್ಬದ ಹತ್ತು ದಿನಗಳ ವರೆಗೂ ಒಂದು ದಿನಕ್ಕಿಂತ ಇನ್ನೊಂದು ದಿನ ದೊಡ್ಡ ಗಾತ್ರದ ಪೂಕಳಂ ರಂಗೋಲಿ ಹಾಕಲಾಗುತ್ತದೆ. ಸಂಪ್ರದಾಯದ ಪ್ರಕಾರ, ಪೂಕಳಂ ರಂಗೋಲಿಯುವ ಹತ್ತು ಸಣ್ಣ ವೃತ್ತಾಕಾರಗಳನ್ನು ಅಥವಾ ಸುತ್ತುಗಳನ್ನು ಒಳಗೊಂಡಿರಬೇಕು. ಈ ಹತ್ತು ವೃತ್ತಗಳು ಹತ್ತು ವಿಭಿನ್ನ ದೇವತೆಗಳನ್ನು ಪ್ರತಿನಿಧಿಸುತ್ತದೆ. ಮೊದಲ ವೃತ್ತವು ಗಣೇಶನನ್ನು ಪ್ರತಿನಿಧಿಸಿದರೆ, ಎರಡನೇ ವೃತ್ತ ಶಿವ ಮತ್ತು ಶಕ್ತಿ, ಮೂರನೇ ವೃತ್ತ ಶಿವ, ನಾಲ್ಕನೇ ವೃತ್ತ ಬ್ರಹ್ಮ, ಐದನೇ ವೃತ್ತ ಪಂಚಭೂತ, ಆರನೇ ವೃತ್ತ ಷಣ್ಮುಖ ಅಥವಾ ಮುರುಗ, ಏಳನೇ ವೃತ್ತ ಗುರು, ಎಂಟನೇ ವೃತ್ತ ಅಷ್ಟ ದಿಗ್ಪಾಲಕರು, ಒಂಬತ್ತನೇ ವೃತ್ತ ಇಂದ್ರ ಮತ್ತು ಹತ್ತನೇ ವೃತ್ತವು ವಿಷ್ಣುವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಈದ್ ಮಿಲಾದ್ ಯಾವಾಗ? ಮುಸ್ಲಿಮರ ಈ ಪವಿತ್ರ ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?
ಸಂಪ್ರದಾಯಗಳ ಪ್ರಕಾರ ತನ್ನ ಪ್ರಜೆಗಳನ್ನು ನೋಡಲು ವರ್ಷಕ್ಕೊಂದು ಬಾರಿ ಭೂಮಿಗೆ ಬರುವ ಮಹಾಬಲಿಯನ್ನು ಸ್ವಾಗತಿಸುವ ಸಲುವಾಗಿ ಕೇರಳಿಗರು ಓಣಂ ಹಬ್ಬದ ಸಮಯದಲ್ಲಿ ಪೂಕಳಂ ಹಾಕುತ್ತಾರೆ. ಮೊದಲ ದಿನ ಒಂದೇ ಬಗೆಯ ಹೂವನ್ನು ಬಳಸಿ ಪೂಕಳಂ ರಂಗೋಲಿ ಹಾಕಿದರೆ, ಎರಡನೇ ದಿನ ಎರಡು ವಿಭಿನ್ನ ಹೂವುಗಳನ್ನು ಬಳಸಲಾಗುತ್ತದೆ. ಇನ್ನೂ ಹತ್ತನೇ ದಿನ 10 ವಿಭಿನ್ನ ಬಣ್ಣದ ಹೂವುಗಳಿಂದ ಪೂಕಳಂ ರಂಗೋಲಿ ಹಾಕಲಾಗುತ್ತದೆ. ಇನ್ನೂ ಈ ಪೂಕಳಂ ಅಸುರರು ಮತ್ತು ದೇವತೆಗಳ ನಡುವಿನ ಹೋರಾಟವನ್ನು ವ್ಯಾಖ್ಯಾನಿಸುತ್ತದೆ ಎಂಬ ನಂಬಿಕೆಯೂ ಇದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




