AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿ ಕುಡಿಯುತ್ತಾ ಈ ಆಹಾರಗಳ ಸೇವನೆ ಮಾಡುತ್ತೀರಾ? ಹಾಗಿದ್ರೆ ಇವತ್ತಿನಿಂದಲೇ ಅವುಗಳಿಂದ ದೂರವಿರಿ

ಕಾಫಿ ಕುಡಿಯುವ ಮೊದಲು ಅಥವಾ ನಂತರ ಕೆಲವು ರೀತಿಯ ಆಹಾರವನ್ನು ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಕಾಫಿಯಲ್ಲಿರುವ ವಸ್ತುಗಳು ಆಹಾರದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತವೆ. ನೀವು ಕೂಡ ಕಾಫಿ ಪ್ರಿಯರಾಗಿದ್ದರೆ, ಅದರ ಜೊತೆ ಕೆಲವು ರೀತಿಯ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸುವುದು ಬಹಳ ಒಳ್ಳೆಯದು. ಹಾಗಾದರೆ ಅವು ಯಾವುವು? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಕಾಫಿ ಕುಡಿಯುತ್ತಾ ಈ ಆಹಾರಗಳ ಸೇವನೆ ಮಾಡುತ್ತೀರಾ? ಹಾಗಿದ್ರೆ ಇವತ್ತಿನಿಂದಲೇ ಅವುಗಳಿಂದ ದೂರವಿರಿ
Foods To Avoid With Coffee
ಪ್ರೀತಿ ಭಟ್​, ಗುಣವಂತೆ
|

Updated on: Sep 05, 2025 | 9:05 AM

Share

ಕಾಫಿ (Coffee) ವಿಷಯಕ್ಕೆ ಬಂದರೆ ಅದನ್ನು ಇಷ್ಟ ಪಟ್ಟು ಆಸ್ವಾದಿಸಿ ಕುಡಿಯುವವರ ಬಳಗ ಬೇರೆಯೇ ಇದೆ. ಇನ್ನು ಕೆಲವರು ಸುಮ್ಮನೆ ಟೈಮ್ ಪಾಸ್ ಮಾಡಲು ಕುಡಿಯುತ್ತಾರೆ. ಬೆಳಿಗ್ಗೆಯಾಗಲಿ, ಸಂಜೆಯಾಗಲಿ ಒಂದು ಕಾಫಿ ಸ್ಟ್ರೆಸ್ ಬೂಸ್ಟರ್ ಆಗಿ ಕೆಲಸ ಮಾಡುತ್ತದೆ. ಆಫೀಸ್ ಆಗಲಿ, ಮನೆಯಾಗಲಿ ಅಥವಾ ದೇಶ ಬಿಟ್ಟು ಹೊರಗಡೆ ಇರಲಿ ಕಾಫಿ ಕುಡಿಯದೇ ದಿನ ಮುಂದುವರಿಯದು ಎನ್ನುವ ಭಾವನೆ ಹಲವರದ್ದು. ಈ ರೀತಿ ಇತಿಮಿತಿಯಲ್ಲಿ ಕಾಫಿ ಸೇವನೆ ಮಾಡುವುದು ಒಳ್ಳೆಯದು. ಆದರೆ ಇದರ ಮೊದಲು ಅಥವಾ ನಂತರ ಅಂದರೆ ಕೆಲವು ಆಹಾರಗಳನ್ನು ಕಟ್ಟುನಿಟ್ಟಾಗಿ ಸೇವನೆ ಮಾಡದಂತೆ ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ. ಏಕೆಂದರೆ ಕಾಫಿಯಲ್ಲಿರುವ ಕೆಲವು ಅಂಶಗಳು ಆಹಾರದಲ್ಲಿನ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತವೆ. ನೀವು ಕೂಡ ಕಾಫಿ ಪ್ರಿಯರಾಗಿದ್ದರೆ, ಕೆಲವು ರೀತಿಯ ಆಹಾರವನ್ನು ಕಾಫಿಯೊಂದಿಗೆ ಸೇವನೆ ಮಾಡಬಾರದು. ಹಾಗಾದರೆ ಅವು ಯಾವುವು? ಯಾಕೆ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಕಾಫಿ ಎಂಬ ಪಾನೀಯ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿರುವ ವಿಷಯ ಎಲ್ಲರಿಗೂ ತಿಳಿದಿದೆ. ಬಹುತೇಕ ಯಾವುದೇ ಮನೆಯೂ ಕಾಫಿ ಇಲ್ಲದೆ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಪೌಷ್ಟಿಕಾಂಶ ತಜ್ಞರು ಸಕ್ಕರೆ ಅಥವಾ ಹಾಲು ಇಲ್ಲದೆ ಬ್ಲಾಕ್ ಕಾಫಿ ಕುಡಿಯಲು ಶಿಫಾರಸು ಮಾಡುತ್ತಾರೆ. ಜೊತೆಗೆ ಕಾಫಿ ಕುಡಿಯುವ ಮೊದಲು ಅಥವಾ ನಂತರ ಕೆಲವು ರೀತಿಯ ಆಹಾರವನ್ನು ಸೇವಿಸಬಾರದು ಎನ್ನಲಾಗುತ್ತದೆ.

ಸಿಟ್ರಸ್ ಹಣ್ಣುಗಳು

ದ್ರಾಕ್ಷಿ ಮತ್ತು ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಕಾಫಿಯೊಂದಿಗೆ ಸೇವನೆ ಮಾಡಬೇಡಿ. ಹಾಗೆ ಮಾಡುವುದರಿಂದ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ, ಇದು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ಕಾಫಿ ಜೊತೆ ಕೆಂಪು ಮಾಂಸವನ್ನು ಸೇವಿಸಬಾರದು ಅಥವಾ ಅದನ್ನು ಸೇವಿಸಿಯೂ ಕಾಫಿ ಕುಡಿಯಬಾರದು. ಏಕೆಂದರೆ ಈ ಪಾನೀಯ ಮಾಂಸದ ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ ಹಾಗಾಗಿ ಇವೆರಡನ್ನು ಎಂದಿಗೂ ಒಟ್ಟಿಗೆ ಸೇವನೆ ಮಾಡಬಾರದು. ಆದರೆ, ಕುಡಿಯಬೇಕಾದ ಸಂದರ್ಭದಲ್ಲಿ ಬ್ಲಾಕ್ ಕಾಫಿ ಕುಡಿಯಬಹುದು. ಆದರೆ ಹಾಲು ಬೆರೆಸಿದ ಕಾಫಿ ಕುಡಿಯಬಾರದು. ಏಕೆಂದರೆ ಹಾಲಿನೊಂದಿಗೆ ಕಾಫಿ ಕುಡಿಯುವುದರಿಂದ ಹಾಲಿನಲ್ಲಿರುವ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ.

ಇದನ್ನೂ ಓದಿ: ಒಂದು ದಿನವೂ ಮಿಸ್ ಮಾಡ್ದೆ ಬ್ಲಾಕ್ ಕಾಫಿ ಕುಡಿತೀರಾ ಹಾಗಿದ್ರೆ ನೀವು ಈ ಸ್ಟೋರಿ ಓದಲೇಬೇಕು

ಜಂಕ್ ಫುಡ್, ಹುರಿದ ಆಹಾರ

ತಿಂಡಿಗಳು, ಜಂಕ್ ಫುಡ್ ಅಥವಾ ಹುರಿದ ಆಹಾರವನ್ನು ಸೇವಿಸಿದ ನಂತರ, ನೀವು ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಇದು ಕೊಬ್ಬಿನ ಅನಗತ್ಯ ಶೇಖರಣೆಗೆ ಕಾರಣವಾಗುತ್ತದೆ. ಜೊತೆಗೆ ಧಾನ್ಯಗಳನ್ನು ಸೇವಿಸಿದ ನಂತರವೂ ಕೂಡ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಇದು ಧಾನ್ಯಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳ ಸರಿಯಾದ ಹೀರಿಕೊಳ್ಳುವಿಕೆಯನ್ನು ಕೂಡ ತಡೆಯುತ್ತದೆ. ಹಾಗಾಗಿ ಕಾಫಿ ಕುಡಿಯುವಾಗ ಈ ಆಹಾರಗಳನ್ನು ಸೇವನೆ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ