AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid-e-Milad 2025: ಈದ್‌ ಮಿಲಾದ್‌ ಯಾವಾಗ? ಮುಸ್ಲಿಮರ ಈ ಪವಿತ್ರ ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?

ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಈದ್‌ ಮಿಲಾದ್‌ ಕೂಡ ಒಂದು. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನವನ್ನು ಈದ್ ಮಿಲಾದ್-ಉನ್‌-ನಬಿ ಅಥವಾ ಈದ್‌-ಎ-ಮಿಲಾದ್‌ ಎಂದು ಆಚರಿಸುತ್ತಾರೆ. ಈ ಹಬ್ಬವನ್ನು ಮುಸ್ಲಿಂ ಬಾಂಧವರು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಬಾರಿ ಈದ್‌ ಮಿಲಾದ್‌ ಯಾವಾಗ? ಈ ಹಬ್ಬದ ಹಿನ್ನೆಲೆ, ಸಾಂಪ್ರದಾಯಿಕ ಆಚರಣೆಯ ಬಗ್ಗೆ ತಿಳಿಯಿರಿ.

Eid-e-Milad 2025: ಈದ್‌ ಮಿಲಾದ್‌ ಯಾವಾಗ? ಮುಸ್ಲಿಮರ ಈ ಪವಿತ್ರ ಹಬ್ಬದ ಇತಿಹಾಸ, ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?
ಈದ್‌ ಮಿಲಾದ್‌
ಮಾಲಾಶ್ರೀ ಅಂಚನ್​
|

Updated on: Sep 04, 2025 | 6:49 PM

Share

ಈದ್ ಮಿಲಾದ್‌ (Eid-e-Milad) ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಮುಸ್ಲಿಮರು ಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನವನ್ನು ಈದ್ ಮಿಲಾದ್-ಉನ್‌-ನಬಿ ಅಥವಾ ಈದ್‌-ಎ-ಮಿಲಾದ್‌ ಎಂದು ಆಚರಿಸುತ್ತಾರೆ.  ಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನವಾದ ಕಾರಣ ಈ ಹಬ್ಬ ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್‌ನ 12 ನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಈದ್‌ ಮಿಲಾದ್‌ ಯಾವಾಗ? ಈ ಹಬ್ಬದ ಹಿನ್ನೆಲೆ, ವಿಶೇಷತೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬಾರಿಯ ಈದ್‌ ಮಿಲಾದ್‌ ಯಾವಾಗ?

ಈ ವರ್ಷ ಸೆಪ್ಟೆಂಬರ್ 5 ರಂದು ಈದ್ ಮಿಲಾದ್‌ ಹಬ್ಬವನ್ನು ಆಚರಿಸಲಾಗುವುದು. ಪ್ರವಾದಿ ಮುಹಮ್ಮದ್ ಅವರು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬೀವುಲ್ ಅವ್ವಲ್‌ನ 12 ನೇ ತಾರೀಖಿನಂದು ಮೆಕ್ಕಾದಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಹಬ್ಬ ಇಸ್ಲಾಂನಲ್ಲಿ ಅತ್ಯಂತ ವಿಶೇಷವಾಗಿದೆ. ಈದ್ ಮಿಲಾದ್ ಕೇವಲ ಪ್ರವಾದಿ ಮುಹಮ್ಮದರ ಜನ್ಮದಿನದ ಆಚರಣೆಯಲ್ಲ, ಬದಲಾಗಿ ಇದು ಆಧ್ಯಾತ್ಮಿಕ ಅನುಭವವಾಗಿದೆ. ಈ ದಿನ ಪ್ರವಾದಿ ಮುಹಮ್ಮದರ ಮಾನವೀಯತೆ, ಸಹಿಷ್ಣುತೆ ಮತ್ತು ಶಾಂತಿಯ ಸಂದೇಶಗಳನ್ನು ನೆನಪಿಸಿಕೊಳ್ಳಲು ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಳವಡಿಸಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ.

ಈದ್‌ ಮಿಲಾದ್‌ ಹಬ್ಬವನ್ನು ಆಚರಿಸುವುದೇಕೆ?

“ಮಿಲಾದ್” ಎಂಬ ಪದದ ಅರ್ಥ ‘ಹುಟ್ಟು’. ಇದು ಅರೇಬಿಕ್ ಪದ ‘ಮೌಲಿದ್’ ನಿಂದ ಬಂದಿದೆ, ಇದರರ್ಥ ಪ್ರವಾದಿ ಮುಹಮ್ಮದ್ ಅವರ ಜನ್ಮದಿನ. ಪರ್ಷಿಯನ್ ಭಾಷೆಯಲ್ಲಿ “ಮಿಲಾದ್” ಎಂದರೆ ಜನನ. ಆದ್ದರಿಂದ, ಈದ್-ಎ ಮಿಲಾದ್ ಉನ್ ನಬಿ ಎಂದರೆ ಪ್ರವಾದಿಯವರ ಜನ್ಮದಿನದ ಆಚರಣೆ ಎಂದರ್ಥ. ಇದನ್ನು ಪ್ರಪಂಚದಾದ್ಯಂತದ ಮುಸ್ಲಿಮರು ಬಹಳ ವಿಜೃಂಭಣೆ ಮತ್ತು ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬವನ್ನು ಪ್ರವಾದಿ ಮುಹಮ್ಮದ್‌ ಅವರ ಜನ್ಮ ದಿನ ಮತ್ತು ಅವರ ಆದರ್ಶ, ಮೌಲ್ಯಗಳನ್ನು ಸ್ಮರಿಸಲು ಈ ಹಬ್ಬವನ್ನು ಆಚರಿಸಲಾಗುತ್ತದೆ.  ಈ ದಿನದಂದು, ಮುಸ್ಲಿಮರು ಪ್ರವಾದಿ ಮುಹಮ್ಮದ್‌ ಅವರ ಆದರ್ಶಗಳು ಮತ್ತು ಬೋಧನೆಗಳನ್ನು ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡುತ್ತಾರೆ. ಇಸ್ಲಾಮಿಕ್ ಇತಿಹಾಸದಲ್ಲಿ, ಈ ದಿನವನ್ನು ಪ್ರೀತಿ, ಏಕತೆ ಮತ್ತು ಆಧ್ಯಾತ್ಮಿಕ ಅರಿವಿನ ಸಂಕೇತವೆಂದೂ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಗುರುಭ್ಯೋ ನಮಃ; ಶಿಕ್ಷಕರ ದಿನದ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಈದ್ ಮಿಲಾದ್ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ?

ಈ ಪವಿತ್ರ ಹಬ್ಬದ ದಿನದಂದು ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಮತ್ತು ಬೆಳಗ್ಗೆ ಮಸೀದಿಗಳು ಮತ್ತು ದರ್ಗಾಗಳಲ್ಲಿ ಸೇರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರ ನಂತರ, ನಗರಗಳು ಮತ್ತು ಪಟ್ಟಣಗಳಲ್ಲಿ ದೊಡ್ಡ ಮೆರವಣಿಗೆಗಳನ್ನು ನಡೆಸಲಾಗುತ್ತದೆ. ಈ ದಿನದಂದು, ಮಕ್ಕಳಿಗೆ ಪ್ರವಾದಿಯವರ ಸಹಿಷ್ಣುತೆ, ದಯೆ ಮತ್ತು ಸಾಮಾಜಿಕ ಸೇವೆಯ ಕಥೆಗಳನ್ನು ಹೇಳಲಾಗುತ್ತದೆ. ಈ ಹಬ್ಬದ ಮುಖ್ಯ ಉದ್ದೇಶವೆಂದರೆ ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುವುದಾಗಿದೆ. ಪ್ರವಾದಿ ಮುಹಮ್ಮದ್ ಅವರು ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದರು. ಆದ್ದರಿಂದ, ಈ ದಿನದಂದು ಮುಸ್ಲಿಂ ಬಾಂಧವರು ದಾನ ಧರ್ಮವನ್ನು ಸಹ ಮಾಡುತ್ತಾರೆ. ಹೌದು  ಜನರು ಜಕಾತ್ ನೀಡುತ್ತಾರೆ, ಬಡವರಿಗೆ ಆಹಾರ, ಬಟ್ಟೆ, ಹಣ ನೀಡಿ ಸಹಾಯ ಮಾಡುತ್ತಾರೆ.  ಈ ಹಬ್ಬವು ಈ ಸಮುದಾಯದ ಸಹೋದರತ್ವ ಮತ್ತು ಒಗ್ಗಟ್ಟನ್ನು ಬಲಪಡಿಸುವ ಹಬ್ಬ ಅಂತಾನೇ ಹೇಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ