ದೇಹದಲ್ಲಿನ ಕಂಡುವರುವ ಈ ನೋವನ್ನು ಕಡೆಗಣಿಸುತ್ತೀರಾ? ಎಚ್ಚರ… ಇದು ಗಂಭೀರ ಕಾಯಿಲೆ ಬರುವ ಮುನ್ಸೂಚನೆ
ತಲೆನೋವು, ಹೊಟ್ಟೆ ನೋವು ಮತ್ತು ಕೀಲು ನೋವುಗಳಂತಹ ಸಾಮಾನ್ಯ ಲಕ್ಷಣಗಳನ್ನು ನಾವು ಹೆಚ್ಚಾಗಿ ನಿರ್ಲಕ್ಷಿಸುತ್ತೇವೆ. ಆದರೆ ಈ ನೋವುಗಳು ದೊಡ್ಡ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು ಎಂಬುದು ತಿಳಿದಿದೆಯೇ? ದೀರ್ಘಕಾಲದ ವರೆಗೆ ಕಂಡುಬರುವಂತಹ ಯಾವುದೇ ನೋವನ್ನು ಕೂಡ ನಿರ್ಲಕ್ಷಿಸಬಾರದು. ಹಾಗಾದರೆ ಯಾವ ರೀತಿಯ ನೋವನ್ನು ನಿರ್ಲಕ್ಷ್ಯ ಮಾಡಬಾರದು? ಈ ನೋವು ಯಾವ ರೀತಿಯ ಮುನ್ಸೂಚನೆಯನ್ನು ನೀಡುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮನುಷ್ಯ ಎಂದ ಮೇಲೆ ಆರೋಗ್ಯ (Health) ಸಮಸ್ಯೆಗಳು ಕಾಡುವುದು ಸಹಜ. ಅವರ ಜೀವನಶೈಲಿ ಅನುಗುಣವಾಗಿ ಆರೋಗ್ಯವಿರುತ್ತದೆ. ಅದರಲ್ಲಿಯೂ ಸಮತೋಲಿತ ಆಹಾರ (Balanced diet), ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯು ಅನೇಕ ರೀತಿಯ ರೋಗ ಮತ್ತು ನೋವುಗಳನ್ನು ತಡೆಯಬಹುದು. ಅದರಲ್ಲಿಯೂ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಬಾರಿ ತಲೆನೋವು, ಹೊಟ್ಟೆ ನೋವು ಮತ್ತು ಕೀಲು ನೋವುಗಳಂತಹ ಸಾಮಾನ್ಯ ಲಕ್ಷಣಗಳು ಕಂಡು ಬರುತ್ತವೆ. ಕೆಲವರಲ್ಲಿ ಇದು ಪದೇ ಪದೇ ಕಂಡು ಬರುತ್ತದೆ. ಹಾಗಾಗಿಯೇ ಇದನ್ನು ನಿರ್ಲಕ್ಷ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಈ ನೋವುಗಳು ದೊಡ್ಡ ಆರೋಗ್ಯ ಸಮಸ್ಯೆಯ ಸಂಕೇತವಾಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಆಗಾಗ ಕಂಡುಬರುವ ಅಥವಾ ದೀರ್ಘಕಾಲದ ವರೆಗೆ ಇರುವ ಯಾವುದೇ ನೋವನ್ನು (Common Pains) ಕೂಡ ನಿರ್ಲಕ್ಷಿಸಬಾರದು. ಹಾಗಾದರೆ ಯಾವ ರೀತಿಯ ನೋವನ್ನು ನಿರ್ಲಕ್ಷ್ಯ ಮಾಡಬಾರದು? ಯಾಕೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಲೆನೋವು:
ಸಾಮಾನ್ಯವಾಗಿ ತಲೆನೋವು, ಒತ್ತಡ, ನಿದ್ರಾಹೀನತೆ ಅಥವಾ ಆಯಾಸದಿಂದ ಉಂಟಾಗುತ್ತದೆ. ಆದರೆ ಆಗಾಗ ಕಂಡುಬರುವ ತೀವ್ರವಾದ ತಲೆನೋವು ಮೈಗ್ರೇನ್, ಅಧಿಕ ರಕ್ತದೊತ್ತಡ ಅಥವಾ ನರಗಳ ಸಮಸ್ಯೆಗಳನ್ನು ಸೂಚಿಸುತ್ತದೆ. ತಲೆನೋವಿನೊಂದಿಗೆ ವಾಕರಿಕೆ, ತಲೆತಿರುಗುವಿಕೆ ಅಥವಾ ಬೆಳಕನ್ನು ನೋಡಲು ಕಷ್ಟವಾಗುವಂಥಹ ಲಕ್ಷಣಗಳು ಕಂಡುಬಂದರೆ, ತಡಮಾಡದೆಯೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಎದೆ ನೋವು:
ಅನೇಕರು ಎದೆ ನೋವು ಬಂದಾಗ ಗ್ಯಾಸ್ಟ್ರಿಕ್ ಅಥವಾ ಅಜೀರ್ಣ ಎಂದುಕೊಳ್ಳುತ್ತಾರೆ. ಆದರೆ ನಿರಂತರವಾಗಿ ಎದೆ ನೋವು ಅಥವಾ ಒತ್ತಡ ಕಂಡು ಬರುವುದು ಹೃದಯಾಘಾತ ಅಥವಾ ಹೃದಯ ಅಪಧಮನಿ ಕಾಯಿಲೆಯ ಆರಂಭಿಕ ಲಕ್ಷಣವಾಗಿರಬಹುದು. ಎಡಗೈ ನೋವು, ಭುಜ ಅಥವಾ ದವಡೆಗೆ ಬಂದರೆ, ಅದು ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿರುವುದರ ಗಂಭೀರ ಸಂಕೇತವಾಗಿದೆ.
ಹೊಟ್ಟೆ ಮತ್ತು ಕೆಳ ಬೆನ್ನು ನೋವು:
ಮಹಿಳೆಯರಲ್ಲಿ ಆಗಾಗ ಹೊಟ್ಟೆ ಅಥವಾ ಕೆಳ ಬೆನ್ನು ನೋವು ಕಂಡುಬರುವುದಕ್ಕೆ ಮೂತ್ರಪಿಂಡದ ಕಲ್ಲುಗಳು, ಹುಣ್ಣುಗಳು, ಯಕೃತ್ತಿನ ಕಾಯಿಲೆಗಳು ಅಥವಾ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್‌ನಂತಹ ಸಮಸ್ಯೆಗಳು ಕಾರಣವಾಗಿರಬಹುದು. ಅದರಲ್ಲಿಯೂ ಮೂತ್ರ ವಿಸರ್ಜನೆಯ ಸಮಯದಲ್ಲಿ ಹೊಟ್ಟೆ ಉಬ್ಬರ, ಹಸಿವು ಕಡಿಮೆಯಾಗುವುದು ಅಥವಾ ಸುಡುವಿಕೆಯಂತಹ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.
ಕೀಲು ಮತ್ತು ಮೂಳೆ ನೋವು:
ಸಾಮಾನ್ಯವಾಗಿ ಕೀಲುಗಳು ಅಥವಾ ಮೂಳೆಗಳಲ್ಲಿ ನಿರಂತರ ನೋವು ಇದ್ದರೆ, ಅದು ಸಂಧಿವಾತ, ಆಸ್ಟಿಯೊಪೊರೋಸಿಸ್ ಅಥವಾ ವಿಟಮಿನ್ ಡಿ ಅಥವಾ ಕ್ಯಾಲ್ಸಿಯಂ ಕೊರತೆಯ ಲಕ್ಷಣವಾಗಿರಬಹುದು. ಮುಟ್ಟಿನ ನಂತರ ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕೀಲುಗಳು ಯಾವಾಗಲೂ ಗಟ್ಟಿಯಾಗಿದ್ದರೆ ಅಥವಾ ಒತ್ತಡದಲ್ಲಿದ್ದರೆ, ತಕ್ಷಣ ವೈದ್ಯರ ಸಲಹೆ ಪಡೆಯಿರಿ.
ಇದನ್ನೂ ಓದಿ: ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವವರಲ್ಲಿ ಸೈಲೆಂಟ್ ಹಾರ್ಟ್ ಅಟ್ಯಾಕ್ ಬರುವುದನ್ನು ತಡೆಯಲು ಈ ರೀತಿ ಮಾಡಬೇಕು!
ಕಣ್ಣು – ಬೆನ್ನು ನೋವು:
ಕಣ್ಣುಗಳಲ್ಲಿ ನೋವು ಅಥವಾ ಸುಡುವ ಸಂವೇದನೆ ಇದ್ದರೆ, ಅದು ಗ್ಲುಕೋಮಾ ಅಥವಾ ಕಣ್ಣಿನ ದೌರ್ಬಲ್ಯದ ಸಂಕೇತವಾಗಿರಬಹುದು. ದೀರ್ಘಕಾಲ ಕುಳಿತುಕೊಳ್ಳುವುದರಿಂದ ಬೆನ್ನು ನೋವು ಉಂಟಾಗಬಹುದು. ಆದರೆ ವಿಶ್ರಾಂತಿ ಪಡೆದ ನಂತರವೂ ನೋವು ಕಡಿಮೆಯಾಗದಿದ್ದರೆ, ಅದು ಬೆನ್ನುಮೂಳೆ ಅಥವಾ ಮೂಳೆಗಳಲ್ಲಿನ ದೌರ್ಬಲ್ಯವನ್ನು ಸೂಚಿಸುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








