ಈ ಆಹಾರಗಳ ಸೇವನೆ ಮಾಡಿದರೆ ಮಲಬದ್ಧತೆ ಕಡಿಮೆಯಾಗಿ ಹೊಟ್ಟೆ ಕ್ಲೀನ್ ಆಗುತ್ತೆ
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನ ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಮುಕ್ತಿ ಪಡೆಯಲು ಔಷಧಿಗಳ ಮೊರೆ ಹೋಗುವ ಬದಲು ಆಹಾರಕ್ರಮವನ್ನು ಸರಿಪಡಿಸಿಕೊಳ್ಳುವುದು ಉತ್ತಮ. ನಾವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಸಮೃದ್ದವಾಗಿರಬೇಕು. ವಿಶೇಷವಾಗಿ, ಕೆಲವು ಆಹಾರಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕೆ ಸಹಾಯ ಮಾಡುತ್ತದೆ. ಅವುಗಳನ್ನು ಸೇವಿಸುವುದರಿಂದ ಸಮಸ್ಯೆಗಳು ಕಡಿಮೆಯಾಗಬಹುದು. ಅದರ ಬದಲು ಈ ಸಮಸ್ಯೆಯನ್ನು ನೈಸರ್ಗಿಕವಾಗಿಯೇ ಕಡಿಮೆ ಮಾಡಿಕೊಳ್ಳಲು, ಕೆಲವು ಆಹಾರಗಳ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದಕ್ಕೆ ಪೂರಕವೆಂಬಂತೆ ಪೌಷ್ಟಿಕ ತಜ್ಞೆ ಲಿಮಾ ಮಹಾಜನ್ ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ನೀಡಿದ್ದು ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ಓದಿ.

ಬೆಳಿಗ್ಗೆ ಎದ್ದ ತಕ್ಷಣ, ಹೊಟ್ಟೆ ಖಾಲಿಯಾದರೆ, ನಿಮ್ಮೆಲ್ಲಾ ಕೆಲಸ ಸರಿಯಾಗಿ ಆಗುತ್ತದೆ. ಆದರೆ ಕೆಲವರಿಗೆ ಮಲಬದ್ಧತೆ (Constipation) ಸಮಸ್ಯೆಯಿಂದಾಗಿ ಬೆಳಗ್ಗಿನ ಕೆಲಸ ಸರಿಯಾಗಿ ಆಗುವುದಿಲ್ಲ. ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಂಡರು ಸರಿಯಾಗಿ ಮಲವಿಸರ್ಜನೆಯಾಗುವುದಿಲ್ಲ. ಆದರೆ ಇದು ಒಬ್ಬರಿಬ್ಬರ ಸಮಸ್ಯೆಯಲ್ಲ, ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದೆ. ಮಲಬದ್ಧತೆಯ ಪರಿಣಾಮ, ಉಬ್ಬುವುದು, ಹೊಟ್ಟೆ ನೋವು (Stomach pain) ಜೊತೆಗೆ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಅನೇಕ ರೀತಿಯ ಔಷಧಿ ಮತ್ತು ಸಿರಪ್‌ಗಳು ಲಭ್ಯವಿದ್ದರೂ ಕೂಡ ಅವು ತೆಗೆದುಕೊಂಡಾಗ ಮಾತ್ರ ಪರಿಹಾರ ಸಿಗುತ್ತದೆ. ಅದರ ಬದಲು ಈ ಸಮಸ್ಯೆಯನ್ನು ನೈಸರ್ಗಿಕವಾಗಿಯೇ ಕಡಿಮೆ ಮಾಡಿಕೊಳ್ಳಲು, ಕೆಲವು ಆಹಾರಗಳ ಸೇವನೆ ಮಾಡುವುದು ಬಹಳ ಒಳ್ಳೆಯದು. ಇದಕ್ಕೆ ಪೂರಕವೆಂಬಂತೆ ಪೌಷ್ಟಿಕ ತಜ್ಞೆ ಲಿಮಾ ಮಹಾಜನ್ (leemamahajan) ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ನೀಡಿದ್ದು ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ಓದಿ.
ಒಣದ್ರಾಕ್ಷಿಯ ನೀರು
ಒಣದ್ರಾಕ್ಷಿಯ ಸೇವನೆಯನ್ನು ಎಲ್ಲರೂ ಮಾಡಿರುತ್ತಾರೆ. ಅದರಲ್ಲಿಯೂ ಕಪ್ಪು ಒಣದ್ರಾಕ್ಷಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. 4 ಅಥವಾ 5 ಕಪ್ಪು ಒಣದ್ರಾಕ್ಷಿಗಳನ್ನು ಸ್ವಚ್ಛಗೊಳಿಸಿ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಆ ನೀರನ್ನು ಕುಡಿಯಿರಿ. ಒಣದ್ರಾಕ್ಷಿಗಳಲ್ಲಿ ಫೈಬರ್ ಸಮೃದ್ಧವಾಗಿದೆ. ನೀರಿನಲ್ಲಿ ನೆನೆಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಚಲನೆ ಉತ್ತಮವಾಗುತ್ತದೆ. ಒಣದ್ರಾಕ್ಷಿಯಲ್ಲಿ ಸೋರ್ಬಿಟೋಲ್ ಎಂಬ ನೈಸರ್ಗಿಕ ಸಂಯುಕ್ತವಿದೆ. ಇದು ಮಲವನ್ನು ಮೃದುಗೊಳಿಸಿ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ. ನೆನೆಸಿದ ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.
ಬೆಚ್ಚಗಿನ ನೀರಿನ ಜೊತೆ ಬೆಣ್ಣೆ
ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಎದ್ದ ಕೂಡಲೇ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಲು ಶಿಫಾರಸ್ಸು ಮಾಡಲಾಗುತ್ತದೆ. ಆದರೆ ಜೀರ್ಣಕ್ರಿಯೆ ಸಮಸ್ಯೆ ಇರುವವರು ಒಂದು ಟೀ ಚಮಚ ತುಪ್ಪವನ್ನು ಬೆರೆಸಿ ಕುಡಿಯುವುದು ಬಹಳ ಒಳ್ಳೆಯದು. ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ. ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ನಿಯಮಿತವಾಗಿ ಈ ನೀರನ್ನು ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಕಡಿಮೆಯಾಗುತ್ತದೆ.
ಕಿವಿ
ಈ ಹಣ್ಣು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಮಲಬದ್ಧತೆಯಂತಹ ಸಮಸ್ಯೆ ನಿವಾರಿಸಲು ಈ ಹಣ್ಣು ಸಹಾಯ ಮಾಡುತ್ತದೆ. ಬೆಳಿಗ್ಗೆ ಅಥವಾ ಮಧ್ಯಾಹ್ನ ಕೆಲವು ದಿನಗಳ ವರೆಗೆ ದಿನಕ್ಕೆ 1 ಅಥವಾ 2 ಕಿವಿ ಹಣ್ಣುಗಳನ್ನು ಸೇವನೆ ಮಾಡಿದರೆ ಇದರಲ್ಲಿರುವ ಕರಗುವ ಮತ್ತು ಕರಗದ ನಾರಿನಾಂಶ ಮಲವನ್ನು ಮೃದುಗೊಳಿಸುತ್ತವೆ ಮತ್ತು ಹೊಟ್ಟೆಯನ್ನು ಶುದ್ಧೀಕರಿಸುತ್ತವೆ. ಪರಿಣಾಮವಾಗಿ, ಮಲಬದ್ಧತೆಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಇದನ್ನೂ ಓದಿ: Patanjali: ಗ್ಯಾಸ್ಟ್ರಿಕ್, ಆ್ಯಸಿಡಿಟಿ, ಮಲಬದ್ಧತೆ ಸಮಸ್ಯೆಗಳಿಗೆ ಮನೆ ಮದ್ದು; ಬಾಬಾ ರಾಮದೇವ್ ಟಿಪ್ಸ್
ಮಲಬದ್ಧತೆ ಕಡಿಮೆ ಮಾಡಲು ಏನು ಮಾಡಬೇಕು?
ಈ ಸಮಸ್ಯೆ ನೀವು ತಿಳಿದಂತೆ ಸಾಮಾನ್ಯ ಸಮಸ್ಯೆಯಲ್ಲ. ಇದು ಹೆಚ್ಚಾದರೆ, ಮೂಲವ್ಯಾಧಿ ಮತ್ತು ಬಿರುಕುಗಳಂತಹ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ ಕುಳಿತುಕೊಳ್ಳುವುದಕ್ಕೂ ಅನಾನುಕೂಲವಾಗಬಹುದು. ಈ ರೀತಿಯಾದಾಗ ಆರೋಗ್ಯ ಹದಗೆಡುತ್ತದೆ. ಆದ್ದರಿಂದ, ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ, ನಾವು ಪ್ರತಿದಿನ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಹೆಚ್ಚು ಫೈಬರ್ ಅಂಶವಿರುವ ಆಹಾರವನ್ನು ಸೇವಿಸಬೇಕು ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಅದರ ಜೊತೆಗೆ ಸ್ವಲ್ಪ ವ್ಯಾಯಾಮವನ್ನು ಕೂಡ ಮಾಡಬೇಕು. ಮಲಬದ್ಧತೆಗೆ ಹಲವು ಔಷಧಿಗಳಿವೆ. ಆದರೆ ಆಹಾರದ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರಿಂದ ಸಮಸ್ಯೆಯನ್ನು ಬುಡದಿಂದಲೇ ತಡೆಗಟ್ಟಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




